20 ವರ್ಷಗಳ ನಂತರ ಮಕ್ಕಳನ್ನು ನೋಡೋಕೆ ಬಂದ ತಂದೆ, ಮಕ್ಕಳನ್ನು ಸೇರುವ ಮುನ್ನವೇ ಸೇರಿದ್ದು ಮಸಣಕ್ಕೆ!

Published : Dec 23, 2017, 08:54 AM ISTUpdated : Apr 11, 2018, 01:13 PM IST
20 ವರ್ಷಗಳ ನಂತರ ಮಕ್ಕಳನ್ನು ನೋಡೋಕೆ ಬಂದ ತಂದೆ, ಮಕ್ಕಳನ್ನು ಸೇರುವ ಮುನ್ನವೇ ಸೇರಿದ್ದು ಮಸಣಕ್ಕೆ!

ಸಾರಾಂಶ

- 20 ವರ್ಷಗಳ ಹಿಂದೆ ಖಿನ್ನತೆಯಿಂದ ಬಳಲುತ್ತಿದ್ದ ನಿಂಗರಾಜು, ಮಕ್ಕಳನ್ನು ಬಿಟ್ಟು ದೂರವಾಗಿದ್ದರು. - ಬಂಧುಗಳಿಂದ ಫೋನ್ ನಂಬರ್ ಪಡೆದು, ಮಕ್ಕಳನ್ನು ನೋಡಲು ಬೆಂಗಳೂರಿಗೆ ಆಗಮನ. - ರಸ್ತೆ ದಾಟುವಾಗ ಅಪರಿಚಿತ ವಾಹನಕ್ಕೆ ಬಲಿ.  

ಬೆಂಗಳೂರು: ಆತನಿಗೆ ತನ್ನ ಕುಟುಂಬವೆಂದರೆ ತುಂಬಾನೇ ಇಷ್ಟ. ಖುಷಿಯಾಗಿಯೇ ಇದ್ದ ಸಂಸಾರದಲ್ಲಿ ಹೆಂಡತಿ ಸಾವು ಆತನನ್ನು ಖಿನ್ನತೆಗೊಳಗಾಗುವಂತೆ ಮಾಡಿತ್ತು. ಆಗ ತನ್ನಿಬ್ಬರು ಮಕ್ಕಳನ್ನು ಬಿಟ್ಟು, ಎಲ್ಲಿಯೋ ಮರಳಿದವನು ಅಜ್ಞಾತ ಸ್ಥಳದಲ್ಲಿದ್ದ.

ಇತ್ತ ತಾಯಿಯನ್ನು ಕಳೆದುಕೊಂಡ ಮಕ್ಕಳು, ತಂದೆಯೂ ಮೃತಪಟ್ಟಿದ್ದಾರೆಂದುಕೊಂಡೇ ಬದುಕಿದ್ದರು. ಆದರೆ, ಬರೋಬ್ಬರಿ 20 ವರ್ಷಗಳ ನಂತರ ಮಕ್ಕಳನ್ನು ನೋಡಲು ಬಂದ ತಂದೆ ನಿಂಗರಾಜು ವಿಧಿಯಾಟಕ್ಕೆ ಬಲಿಯಾಗಿದ್ದು ಮಾತ್ರ ದುರಂತ. 

ರಸ್ತೆ ದಾಟುವಾಗ ಅಪರಿಚಿತ ವಾಹನವೊಂದಿ ಡಿಕ್ಕಿಯಾಗಿ ನಿಂಗರಾಜು (50) ಕೊನೆಯುಸಿರೆಳೆದಿದ್ದಾರೆ.  

ಇತ್ತೀಚೆಗೆ ಹಳೆಯ ನೆನಪುಗಳು ನಿಂಗರಾಜುವಿಗೆ ಮರುಕಳಿಸಿತ್ತು. ಸಂಬಂಧಿಕರಿಂದ ಫೋನ್ ನಂಬರ್ ಪಡೆದು, ಮಕ್ಕಳನ್ನು ನೋಡಲು ಬೆಂಗಳೂರಿಗೆ ಆಗಮಿಸಿದ್ದರು. ಮುಂಜಾನೆ 3 ಗಂಟೆಗೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಬಂದಿಳಿದಿದ್ದರು. ಮಕ್ಕಳನ್ನು ನೋಡುವ ಮುನ್ನವೇ ಯಮಸ್ವರೂಪಿಯಂತೆ ಬಂದ ಕಾರಿಗೆ ಬಲಿಯಾಗಿದ್ದಾರೆ.

ಅವರ ಬ್ಯಾಗ್‌ನಲ್ಲಿದ್ದ ಮಗಳ ಫೋನ್ ನಂಬರ್ ಬೆನ್ನತ್ತಿದ ಪೊಲೀಸರಿಗೆ ಇವರ ಹಿನ್ನೆಲೆ ಅರಿವಿಗೆ ಬಂದಿದೆ. ಮಗಳಿಗೆ ಫೋನ್ ಮಾಡಿ ತಂದೆ ಮೃತಪಟ್ಟಿದ್ದಾರೆ, ನೋಡಲು ಬನ್ನಿ ಎಂದರೂ ಮಗಳು ನಂಬಲಿಲ್ಲ. ಮತ್ತೆ ಮತ್ತೆ ಫೋನ್ ಮಾಡಿದಾಗ, ವಿಕ್ಟೋರಿಯಾ ಶವಾಗಾರಕ್ಕೆ ಬಂದು ನೋಡಿದಾಗ ತಂದೆಯ ಶವ. 20 ವರ್ಷಗಳ ನಂತರ ತಂದೆಯ ದರ್ಶನ ಭಾಗ್ಯ ಸಿಕ್ಕಿದ್ದಕ್ಕೆ ಖುಷಿಪಡಬೇಕಾದವರು, ಮೃತ ದೇಹ ನೋಡಬೇಕಾಗಿ ಬಂದಿದ್ದು ಮಾತ್ರ ನಿಜವಾಗಲೂ ದುರಂತ.

ಸಂತೋಷದಿಂದ ಮಕ್ಕಳನ್ನು ನೋಡೋಕೆ ಬಂದವರು, ಕೊನೆಗೂ ತನ್ನ ಮಕ್ಕಳನ್ನು ನೋಡದೇ ಇಹಲೋಕ ತ್ಯಜಿಸಿದ್ದಾನರೆ ಲಿಂಗರಾಜು. ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಸಂಚಾರ ಪೊಲೀಸರು ಡಿಕ್ಕಿ ಹೊಡೆದ ಕಾರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇತ್ತ ಪ್ರಕರಣ ದಾಖಲು ಮಾಡಿಕೊಂಡಿರುವ ಬ್ಯಾಟರಾಯನಪುರ ಪೊಲೀಸರು ಅಪಘಾತ ಮಾಡಿದ ಕಾರು ಚಾಲಕನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ನಿಂದ ಗೇಟ್‌ಪಾಸ್ ಪಡೆದ ಬಾಂಗ್ಲಾದೇಶಕ್ಕೆ ಆಗುವ ನಷ್ಟವೆಷ್ಟು? ಭಾರತ ಕಳೆದುಕೊಳ್ಳೋದೇಷ್ಟು?
ಸರ್ಪದೋಷ ಪರಿಹಾರಕ್ಕೆ 'ಹಾವಿನಂತೆ ಹುಟ್ಟಿದ್ದ' 7 ತಿಂಗಳ ಮಗಳನ್ನು ಕೊಂದಿದ್ದ ಅಮ್ಮ, ಮರಣದಂಡನೆ ಶಿಕ್ಷೆ ರದ್ದು ಮಾಡಿದ ಕೋರ್ಟ್‌!