ಫಾರೂಕ್ ಅಬ್ದುಲ್ಲಾ ತಾನು ಭಾರತೀಯನಲ್ಲವೆಂದು ಸಾಬೀತುಪಡಿಸಿದ್ದಾರೆ: ಆರೆಸ್ಸೆಸ್

By Suvarna Web DeskFirst Published Nov 26, 2016, 12:53 PM IST
Highlights

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಎಂದಿಗೂ ಪಾಕಿಸ್ತಾನಕ್ಕೆ ಸೇರಿಲ್ಲ, ಅಲ್ಲಿನ ಜನರು ಭಾರತಕ್ಕೆ ಸೇರಬಯಸುತ್ತಾರೆಂಬುವುದು ವಾಸ್ತವ. ಫಾರೂಕ್ ಅಬ್ದುಲ್ಲಾ ತಾನು ಭಾರತೀಯನಲ್ಲವೆಂದು ಸಾಬೀತು ಪಡಿಸಿದ್ದಾರೆ, ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ.

ನವದೆಹಲಿ (ನ.26): ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘವು ತೀವ್ರ ವಾಗ್ದಾಳಿ ನಡೆಸಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಭಾರತದ ಹಕ್ಕಿನ ಕುರಿತು ಹೇಳಿಕೆ ನೀಡಿ ತಾನು ಭಾರತೀಯನಲ್ಲವೆಂದು ಹಾಗೂ ಭಾರತದ ಹಿತಾಸಕ್ತಿ ಬಗ್ಗೆ ಯಾವುದೇ ಕಳಕಳಿಯಿಲ್ಲವೆಂದು ಫಾರೂಕ್ ಅಬ್ದುಲ್ಲಾ ಸಾಬಿತುಪಡಿಸಿದ್ದಾರೆ ಎಂದು ಆರೆಸ್ಸೆಸ್ ಹೇಳಿದೆ.

Latest Videos

ಫಾರೂಕ್ ಅಬ್ದುಲ್ಲಾ ಹೇಳಿಕೆಯು ಕಾಶ್ಮೀರಕ್ಕಾಗಿ ತ್ಯಾಗ-ಬಲಿದಾನಗಳನ್ನು ನೀಡಿರುವ ಸೈನಿಕರಿಗೆ ಮಾಡಿರುವ ಅವಮಾನವಾಗಿದೆ ಎಂದು ಆರೆಸ್ಸೆಸ್ ನಾಯಕ ದ್ರೇಶ್ ಕುಮಾರ್ ಹೇಳಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಎಂದಿಗೂ ಪಾಕಿಸ್ತಾನಕ್ಕೆ ಸೇರಿಲ್ಲ, ಅಲ್ಲಿನ ಜನರು ಭಾರತಕ್ಕೆ ಸೇರಬಯಸುತ್ತಾರೆಂಬುವುದು ವಾಸ್ತವ. ಫಾರೂಕ್ ಅಬ್ದುಲ್ಲಾ ತಾನು ಭಾರತೀಯನಲ್ಲವೆಂದು ಸಾಬೀತು ಪಡಿಸಿದ್ದಾರೆ, ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ.

ಭಾರತೀಯ ಸಂವಿಧಾನದ ವಿರುದ್ಧ ಹೇಳಿಕೆ ನೀಡುವ ಫಾರೂಕ್ ಅಬ್ದುಲ್ಲಾನಂಥವರ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಜನತೆ ಧ್ವನಿಯೆತ್ತಬೇಕಾಗಿದೆ ಎಂದು ಇಂದ್ರೇಶ್ ಕುಮಾರ್ ಕರೆಯಿತ್ತಿದ್ದಾರೆ.

ಚೀನಾಬ್ ಕಣಿವೆಯಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ಮುಖಂಡರಾದ ಫಾರೂಕ್ ಅಬ್ದುಲ್ಲಾ, "ಪಿಓಕೆ ಸದ್ಯ ಪಾಕಿಸ್ತಾನದ ವಶದಲ್ಲಿದೆ. ಪೂರ್ವಜರಿಂದ ಪಿತ್ರಾರ್ಜಿ ಆಸ್ತಿಯಂತೆ ಇದೇನು ಭಾರತದ ಖಾಸಗಿ ಆಸ್ತಿಯಲ್ಲ" ಎಂದು ಫಾರೂಕ್ ಅಬ್ದುಲ್ಲಾ ನಿನ್ನೆ ಹೇಳಿದ್ದರು.

click me!