ರೈತ ಹೋರಾಟದಲ್ಲಿ 'ಕೈ' ಹಗರಣ ಘಾಟು, 7 ಉದ್ಯಮಿಗಳ ಜೇಬು ತುಂಬಿಸಿದ ನೋಟು; ಡಿ.15ರ ಟಾಪ್ 10 ಸುದ್ದಿ!

By Suvarna NewsFirst Published Dec 15, 2020, 4:42 PM IST
Highlights

ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲದ ಹಿಂದೆ ಹಗರದಣ ವಾಸನೆ ಬಡಿಯುತ್ತಿದೆ. ಪತಿಯಿಂದಲೇ ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ. ಸಹ ಆಟಗಾರನ ಮೇಲೆ ಹಲ್ಲೆಗೆ ಯತ್ನಿಸಿದ ಕ್ರಿಕೆಟಿಗ ಕ್ಷಮೆ ಕೋರಿದ್ದಾರೆ. ಕೊರೋನಾ ನಡುವೆ ಆದಾಯ ಗಳಿಸಿದ ಭಾರತದ 7 ಉದ್ಯಮಿಗಳು,  ರಾಗಿಣಿ ತಂದೆ ತಾಯಿ ಅಳಲು ಸೇರಿದಂತೆ ಡಿಸೆಂಬರ್ 15ರ ಟಾಪ್ 10 ಸುದ್ದಿ 

ಕೃಷಿ ಕಾಯ್ದೆ ವಿರೋಧಿಸಿ ಅನ್ನದಾತನ ಪ್ರತಿಭಟನೆ, ಕಾಂಗ್ರೆಸ್ ಬೆಂಬಲದ ಹಿಂದೆ 'ಹಗರಣ'ದ ಘಾಟು!...

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಅನ್ನದಾತನ ಹೋರಾಟ ಇಪ್ಪತ್ತನೇ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟಕ್ಕೆ ಕಾಂಗ್ರೆಸ್ ಸೇರಿ ಅನೇಕ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಆದರೀಗ ಕಾಂಗ್ರೆಸ್ ಬೆಂಬಲದ ಹಿಂದೆ ಬೇರೆಯೇ ಕಾರಣವಿರುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಪಾರ್ಟಿ‌ ಮಾಡೋಣ ಬಾ.. ನಂಬಿ ಬಂದ ಆಕೆಗೆ ಮಾಡಬಾರದನ್ನ ಮಾಡಿದ ಕಾಮುಕ ಸ್ನೇಹಿತರು...

ಪಾರ್ಟಿ‌ ಮಾಡೋಣ ಬಾ ಅಂತ ಕರೆದು ಎಣ್ಣೆ ಮತ್ತಲ್ಲಿ ಕ್ಲಾಸ್ ಮೇಟ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.

ಪತಿಯಿಂದಲೇ ದೈಹಿಕ ಮತ್ತು ಲೈಂಗಿಕ ಹಿಂಸೆ: ಕರ್ನಾಟಕ ನಂ.1!...

ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಶೇ.30ರಷ್ಟು ಮಹಿಳೆಯರು ತಮ್ಮ ಪತಿಯಿಂದಲೇ ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿ ದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ತಪ್ಪಾಯ್ತು ಕ್ಷಮಿಸಿ, ಬಹಿರಂಗವಾಗಿ ಕ್ಷಮೆ ಕೋರಿದ ಮುಷ್ಫಿಕುರ್ ರಹೀಂ..!...

ಭಾಂಗ್ಲಾದೇಶ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಮುಷ್ಫಿಕುರ್ ರಹೀಂ ಸಹ ಆಟಗಾರನ ಮೇಲೆ ಹಲ್ಲೆಗೆ ಯತ್ನಿಸಿದ ವಿಚಾರವಾಗಿ ಬಹಿರಂಗವಾಗಿಯೇ ಕ್ಷಮೆ ಕೋರಿದ್ದಾರೆ.

ಡಿಂಪಲ್ ಕ್ವೀನ್ ಟೈಂ ಸರಿ ಇಲ್ವಾ..? ಮತ್ಯಾಕೆ ಹೀಗಂದ್ರು ರಚಿತಾ..?...

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯಲ್ಲಿರುವ ನಟಿ ರಚಿತಾ ರಾಮ್ ಇದ್ಯಾಕೆ ಹೀಗೆ ಹೆಳಿದ್ರೋ ಗೊತ್ತಿಲ್ಲ.. ಬೇಕಾದಷ್ಟು ಆಫರ್, ಕೈತುಂಬಾ ಸಿನಿಮಾ ಇಡ್ಕೊಂಡಿರೋ ನಟಿ ಹೀಗೆಂದಿದ್ಯಾಕೆ..? ರಚಿತಾ ಏನಂದಿದ್ದಾರೆ ನೋಡಿ.

ಭಾರತದಲ್ಲಿ ನೋಕಿಯಾ ಲ್ಯಾಪ್‌ಟಾಪ್ ಬಿಡುಗಡೆ; ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ !...

ಮೊಬೈಲ್ ಫೋನ್ ಮೂಲಕ ವಿಶ್ವದಲ್ಲೇ ಕ್ರಾಂತಿ ಮೂಡಿಸಿದ ನೋಕಿಯಾ ಇದೀಗ ಲ್ಯಾಪ್‌ಟಾಪ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್ ಲ್ಯಾಪ್‌ಟಾಪ್ ಲಭ್ಯವಿದ್ದರೂ ಆಧುನಿಕ ತಂತ್ರಜ್ಞಾನದ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ. ಇದಕ್ಕೆ ಫ್ಲಿಪ್‌ಕಾರ್ಟ್ ಸಾಥ್ ನೀಡಿದೆ.

ಕೊರೋನಾ ಕಾಲದಲ್ಲಿ ಭರ್ಜರಿ ಆದಾಯ ಗಳಿಸಿದ ಭಾರತದ 7 ಉದ್ಯಮಿಗಳು!...

ಈ ವರ್ಷ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಸೈರಸ್ ಪೂನಾವಾಲಾ, ಶಿವ್ ನಾಡಾರ್, ಅಜೀಂ ಪ್ರೇಮ್‌ಜೀ, ರಾಧಾಕೃಷ್ಣ ಸಮಾನಿ ಹಾಗೂ ದಿಲೀಪ್ ಸಾಂಘ್ವಿ ಆಸ್ತಿಯಲ್ಲಿ ಈ ಬಾರಿ ಭಾರೀ ಏರಿಕೆಯಾಗಿದೆ. 

ಹೊಸ ಹ್ಯುಂಡೈ i20 ಕಾರು ಖರೀದಿಗೆ ಮುಗಿಬಿದ್ದ ಜನ, 40 ದಿನದಲ್ಲಿ ದಾಖಲೆ!...

ಹೊಚ್ಚ ಹೊಸ ಹ್ಯುಂಡೈ i20 ಕಾರು ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ಆಕರ್ಷಕ ವಿನ್ಯಾಸ ಹಾಗೂ ಅಧುನಿಕ ತಂತ್ರಜ್ಞಾನದ ಕಾರು ಹೊಸ ಸಂಚಲನ ಮೂಡಿಸಿದೆ. ನೂತನ ಹ್ಯುಂಡೈ i20 ಬಿಡುಗಡೆಯಾದ ಬಳಿಕ ಪ್ರತಿಸ್ಪರ್ಧಿಗಳಿಗೆ ನಡುಕ ಶುರುವಾಗಿದೆ. ಕಾರಣ ಇದೀಗ ಗ್ರಾಹಕರು ಹ್ಯುಂಡೈ i20 ಕಾರು ಬುಕಿಂಗ್ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ 40 ದಿನದಲ್ಲಿ ಹೊಸ ದಾಖಲೆ ಬರೆದಿದೆ.

2021ಕ್ಕೆ ನಿಂಬೆ, ಮೆಣಸಿನಕಾಯಿ ಕಟ್ಟಿದ ಅಮಿತಾಭ್‌...

ಮೆಗಾಸ್ಟಾರ್ ಅಮಿತಾಭ್ ಬಚ್ಚನ್ 2021ದನ್ನು ಕೆಟ್ಟ ಕಣ್ಣುಗಳಿಂದ ರಕ್ಷಿಸೋಕೆ ನಿಂಬೆ ಮೆಣಸಿನಕಾಯಿ ಕಟ್ಟಿದ್ದಾರೆ. 78 ವರ್ಷದ ಬಾಲಿವುಡ್ ಬಿಗ್‌ ಬಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಹಿರಿಯ ನಟ.

ಜೈಲಲ್ಲಿರುವ ಮಗಳಿಗಾಗಿ ರಾಗಿಣಿ ತಂದೆ ತಾಯಿ ಅಳಲು : ಬೇಲ್‌ಗಾಗಿ ಸರ್ಕಸ್...

ಡ್ರಗ್ ಪ್ರಕರಣದಲ್ಲಿ ಜೈಲು ಸೇರಿದ್ದ ಸಂಜನಾ, ರಾಗಿಣಿಯಲ್ಲಿ ಇದೀಗ ಸಂಜನಾಗೆ ಬೇಲ್‌ ಸಿಕ್ಕಿದೆ. ಆದರೆ ರಾಗಿಣಿ ಇನ್ನೂ ಜೈಲಲ್ಲೇ ಇದ್ದು  ಅವರ ಪೋಷಕರು ಬೇಲ್‌ಗಾಗಿ ಸಿಕ್ಕಾಪಟ್ಟೆ ಓಡಾಡುತ್ತಿದ್ದಾರೆ. 

click me!