
ಚಿಕ್ಕಮಗಳೂರು(ಡಿ.17): ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ರಸ್ತೆಗೆ ಬದಲಾಗಿ ಭೈರಾಪುರ- ಶಿಶಿಲ ರಸ್ತೆಯನ್ನು ನಿರ್ಮಿಸಬೇಕೆಂಬ ಕಳೆದ ಮೂರು ದಶಕಗಳಿಂದ ಕೂಗು ಕೇಳಿಬಂದಿದೆ. ಇನ್ನೊಂದಡೆ ಅರಣ್ಯ ಇಲಾಖೆಯ ಪ್ರದೇಶವನ್ನು ಹೊರತು ಪಡಿಸಿ ಈಗಾಗಲೇ ಗ್ರಾಮಸ್ಥರೇ ರಸ್ತೆ ನಿರ್ಮಾಣವನ್ನೂ ಮಾಡಿದ್ದಾರೆ. ಸರ್ಕಾರದಿಂದ ಸರ್ವೆ ಕಾರ್ಯ ಪೂರ್ಣಗೋಳಿಸುತ್ತಿದ್ದಂತೆ ಜಿಲ್ಲಾದ್ಯಾಂತ ಪರ-ವಿರೋಧ ಚರ್ಚೆ ಆರಂಭವಾಗಿದ್ದು, ದೊಡ್ಡ ವಿವಾದವಾಗಿ ಪರಿಣಾಮಿಸಿದೆ. ಈ ಕುರಿತಾದ ವಿವರ ಿಲ್ಲಿದೆ.
ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಂಪರ್ಕಿಸುವ ಪ್ರಮುಖ ಚಾರ್ಮಾಡಿ ಘಾಟ್ ರಸ್ತೆ. ಆದರೆ ಮಳೆಗಾಲ ಬಂದ್ರೆ ಜೀವ ಕೈಯ್ಯಲಿ ಹಿಡಿದುಕೊಂಡೇ ವಾಹನ ಓಡಿಸಬೇಕು. ಹೀಗಾಗಿ ಈ ಮಾರ್ಗಕ್ಕೆ ಪರ್ಯಾಯವಾಗಿ ಭೈರಾಪುರ - ಶಿಶಿಲ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಮೂರು ದಶಕಗಳಿಂದ ಜನ ಬೇಡಿಕೆ ಇಟ್ಟಿದ್ದರು. ಭೈರಾಪುರ - ಶಿಶಿಲ ರಸ್ತೆ ಮಧ್ಯೆ ಕೇವಲ 35 ಕಿಲೋಮೀಟರ್ ಅಂತರವಿದೆ. ಅದರಲ್ಲೂ 10 ಕಿಲೋಮೀಟರ್ ಅಭಿವೃದ್ಧಿ ಪಡಿಸಿದ್ದಾರೆ. ಇನ್ನುಳಿದ 25 ಕಿಲೋಮೀಟರ್ ಅಭಿವೃದ್ಧಿಪಡಿಸಬೇಕಿದೆ. ಅದನ್ನೂ ಅಭಿವೃದ್ಧಿ ಪಡಿಸುವಂತೆ ಜನರ ಒತ್ತಾಯ ಹೆಚ್ಚಾದಾಗ ಇದಕ್ಕೆ ಮಣಿದ ಸರ್ಕಾರ ಸರ್ವೆಕಾರ್ಯವನ್ನೂ ನಡೆಸಿದೆ.ಆದರೆ ಈಗ ಪರಿಸರವಾದಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ರಸ್ತೆ ನಿರ್ಮಿಸಿದಲ್ಲಿ ಧರ್ಮಸ್ಥಳ ಸೇರಿದಂತೆ ಇನ್ನಿತರ ಪ್ರದೇಶಗಳನ್ನು ಕಡಿಮೆ ಅಂತರದಲ್ಲಿ ತಲುಪಬಹುದು. ಆದರೆ, ಇದೊಂದು ಸೂಕ್ಷ್ಮ ಅರಣ್ಯ ಪ್ರದೇಶವಾಗಿದೆ. ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಅರಣ್ಯ ಇಲಾಖೆ ಅನುಮತಿ ಪಡೆಯದೇ ಅಧಿಕಾರಿಗಳು ಸರ್ವೆಕಾರ್ಯ ಮುಗಿಸಿಕೊಂಡು ಕುಳಿತಿದ್ದಾರೆ.
ಭೈರಾಪುರ - ಶಿಶಿಲ ರಸ್ತೆ ಬೇಕೇ ಬೇಕು ಎನ್ನುವುದು ಸಾರ್ವಜನಿಕರ ವಾದ. ಆದರೆ, ಪರಿಸರ ನಾಶದ ಕಾರಣದಿಂದ ಜನರ ದಶಕಗಳ ಬೇಡಿಕೆಗೆ ಮತ್ತೆ ವಿಘ್ನ ಎದುರಾಗಿದೆ. ಪರಿಸರವಾದಿಗಳು ಮತ್ತು ಗ್ರಾಮಸ್ಥರ ಮಧ್ಯೆ ಚರ್ಚೆ ನಡೆಸಿ ಸರ್ಕಾರ ಪರಿಸರಕ್ಕೆ ಪೂರಕವಾಗಿರುವ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.