ಗಿರಿಜನರ ಬದುಕಿಗೆ ಕೊಡಲಿ ಪೆಟ್ಟು: ದಿಢೀರ್ ಒಕ್ಕಲೆಬ್ಬಿಸಿದ ಅರಣ್ಯ ಇಲಾಖೆ!

By Suvarna Web DeskFirst Published Dec 16, 2016, 9:44 PM IST
Highlights

ಆದಿವಾಸಿಗಳು ನಾಗರಹೊಳೆ ಬಂಡೀಪುರ ವ್ಯಾಪ್ತಿಯಲ್ಲಿ ತಲಾತಲಾಂತರದಿಂದ ಬದುಕು ಕಟ್ಟಿಕೊಂಡು ಬಂದವರು. ಅರಣ್ಯವೇ ತಮ್ಮ ಗ್ರಾಮ ಎಂದುಕೊಂಡಿದ್ದವರು. ಇದೀಗ ಕೊಡಗಿನ ದಿಡ್ಡಳ್ಳಿ, ಚೆನ್ನಂಗಿ ವ್ಯಾಪ್ತಿಯಲ್ಲಿ ರಾತ್ರೋ ರಾತ್ರಿ ಇವರನ್ನ ಒಕ್ಕಲೆಬ್ಬಿಸಲಾಗಿದೆ. ಆದಿವಾಸಿಗಳ ಒಕ್ಕಲೆಬ್ಬಿಸಿದ್ದಕ್ಕೆ ಆಕ್ರೋಶ ಜೋರಾಗಿದೆ. ವಾರದ ಹಿಂದೆ ಸಣ್ಣದಾಗಿ ಆರಂಭಗೊಂಡ ಪ್ರತಿಭಟನೆಗೆ ಹೋರಾಟಗಾರ ಸಿರಿಗರೆ ನಾಗರಾಜ್, ನಟ ಚೇತನ್ ಹಾಗೂ ಕೆಲ ಸಂಘಟನೆಗಳು ಕೈಜೋಡಿಸಿದ್ದು ಪ್ರತಿಭಟನೆ ತೀವ್ರಗೊಳ್ಳುತ್ತಿದೆ.

ಮಡಿಕೇರಿ(ಡಿ.17): ಅದೆಷ್ಟೇ ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಅರಣ್ಯವಾಸಿಗಳು ರಾತೋರಾತ್ರಿ ಬೀದಿಗೆ ಬಿದ್ದು ದಿನಗಳೇ ಕಳೆಯುತ್ತಿದೆ, ಆದರೆ ಇಲ್ಲಿವರೆಗೆ ಜಿಲ್ಲಾಡಳಿತ ಮಾತ್ರ ಕಚೇರಿಯಲ್ಲಿ ಕುಳಿತು ಹೇಳಿಕೆ ನೀಡುತ್ತಿದೆ,ಜಿಲ್ಲೆಗೆ ಬರುವ ಸಚಿವರು ಸಭೆ ನಡೆಸಿ ಹೋಗುತ್ತಿದ್ದಾರೆ,ಆದರೆ ಇಲ್ಲಿವರೆಗೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ದ 572 ಕುಟುಂಬ ಸದಸ್ಯರು ಸರ್ಕಾರದ ವಿರುದ್ದ ಹೋರಾಟಕ್ಕೆ ಇಳಿದಿದೆ.

ಆದಿವಾಸಿಗಳು ನಾಗರಹೊಳೆ ಬಂಡೀಪುರ ವ್ಯಾಪ್ತಿಯಲ್ಲಿ ತಲಾತಲಾಂತರದಿಂದ ಬದುಕು ಕಟ್ಟಿಕೊಂಡು ಬಂದವರು. ಅರಣ್ಯವೇ ತಮ್ಮ ಗ್ರಾಮ ಎಂದುಕೊಂಡಿದ್ದವರು. ಇದೀಗ ಕೊಡಗಿನ ದಿಡ್ಡಳ್ಳಿ, ಚೆನ್ನಂಗಿ ವ್ಯಾಪ್ತಿಯಲ್ಲಿ ರಾತ್ರೋ ರಾತ್ರಿ ಇವರನ್ನ ಒಕ್ಕಲೆಬ್ಬಿಸಲಾಗಿದೆ. ಆದಿವಾಸಿಗಳ ಒಕ್ಕಲೆಬ್ಬಿಸಿದ್ದಕ್ಕೆ ಆಕ್ರೋಶ ಜೋರಾಗಿದೆ. ವಾರದ ಹಿಂದೆ ಸಣ್ಣದಾಗಿ ಆರಂಭಗೊಂಡ ಪ್ರತಿಭಟನೆಗೆ ಹೋರಾಟಗಾರ ಸಿರಿಗರೆ ನಾಗರಾಜ್, ನಟ ಚೇತನ್ ಹಾಗೂ ಕೆಲ ಸಂಘಟನೆಗಳು ಕೈಜೋಡಿಸಿದ್ದು ಪ್ರತಿಭಟನೆ ತೀವ್ರಗೊಳ್ಳುತ್ತಿದೆ.

ಈ ಮಧ್ಯೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ನಡೆದ ಬರ ಅಧ್ಯಯನ ಸಭೆಯಲ್ಲೂ ಈ ವಿಷ್ಯ ಪ್ರಸ್ತಾಪವಾದಾಗ ನಿರ್ಗತಿಕ ಆದಿವಾಸಿಗಳಿಗೆ ಅದೇ ಸ್ಥಳದಲ್ಲಿ ವಾಸಕ್ಕೆ ಯೋಗ್ಯ ಸೌಲಭ್ಯ ಒದಗಿಸೋ ಭರವಸೆ ಸಿಕ್ಕಿದೆ. ಸಚಿವರು ಇಷ್ಟೆಲ್ಲಾ ಹೇಳುತ್ತಿದ್ದರೂ ಇತ್ತ ಜಿಲ್ಲಾಡಳಿತ ಮಾತ್ರ ಆ ಸ್ಥಳದಲ್ಲಿ ನಿವೇಶನ ನೀಡಲು ಸಾಧ್ಯವೇ ಇಲ್ಲ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಿದ್ದಾರೆ.

ಇತ್ತ ಮಂಗಳೂರಲ್ಲಿ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ನೇತೃತ್ವದಲ್ಲಿ  ಆದಿವಾಸಿಗಳಿಗೆ ನ್ಯಾಯ ಒದಗಿಸುವಂತೆ ಅರಣ್ಯ ಸಚಿವ ರಮಾನಾಥ ರೈಗೆ ಮನವಿ ಸಲ್ಲಿಕೆಯಾಗಿದೆ. ಸಚಿವರು ನ್ಯಾಯ ಒದಗಿಸೋ ಭರವಸೆ ನೀಡಿದ್ದಾರೆ. ದೊಡ್ಡವರನ್ನೆಲ್ಲ ಬಿಟ್ಟು ಸರ್ಕಾರ ಚಿಕ್ಕವರನ್ನು ಹಿಡಿದುಕೊಂಡಿದೆ. ತಲತಲಾಂತರದಿಂದ ಅರಣ್ಯವೇ ತಮ್ಮ ಗ್ರಾಮ ಎಂದುಕೊಂಡು ಗಿರಿಶಿಖರಗಳ ಮಧ್ಯೆ ಬದುಕು ಕಟ್ಟಿಕೊಂಡ ಹಾಡಿ ಜನರ ಮೇಲೆ ಅರಣ್ಯ ಇಲಾಖೆ ಏಕಾಎಕಿ ಒಕ್ಕಲೆಬ್ಬಿಸಿ ದೌರ್ಜನ್ಯ ಎಸಗಿದ್ದು ನಿಜಕ್ಕೂ ಬೇಸರದ ಸಂಗತಿ. ಒಂದು ವೇ ಖಾಲಿ ಮಾಡಿಸಲೇಬೇಕೆಂದಾದಲ್ಲಿ ಮೊದಲು ಪರ್ಯಾಯ ವ್ಯವಸ್ಥೆ ಮಾಡಿಕೊಡುವುದು ಕೂಡಾ ಸರ್ಕಾರದ ಜವಾಬ್ದಾರಿ.

click me!