![[ಸುಳ್ಳು ಸುದ್ದಿ ] ಕರ್ನಾಟಕದಲ್ಲಿ ಬಿಜೆಪಿ ಗೆಲ್ಲೋದಾದರೆ ಚುನಾವಣೆ ಮಾಡಲ್ಲ : ಚುನಾವಣಾ ಆಯೋಗ](https://static.asianetnews.com/images/w-412,h-232,imgid-ca4b1a25-42eb-409f-b4aa-17e1b4e0c0fa,imgname-image.jpg)
ಬೆಂಗಳೂರು : ಇತ್ತೀಚೆಗೆ ಯಾವ ರಾಜ್ಯದಲ್ಲಿ ಚುನಾವಣೆ ನಡೆಸಿದರೂ ಬಿಜೆಪಿಯೇ ಗೆಲ್ಲುತ್ತಿದೆ. ಅಲ್ಲದೇ ಚುನಾವಣೆಯಲ್ಲಿ ಬಹುಮತ ಗಳಿಸಲು ಆಗದೇ ಇದ್ದರೆ, ಬೆರಳೆಣಿಕೆಯಷ್ಟು ಸೀಟು ಗೆದ್ದರೂ ಇತರ ಪಕ್ಷಗಳನ್ನು ಬುಟ್ಟಿಗೆ ಹಾಕಿಕೊಂಡು ಬಿಜೆಪಿಯೇ ಸರ್ಕಾರ ರಚಿಸುತ್ತಿದೆ.
ಎಲ್ಲಾ ರಾಜ್ಯಗಳಲ್ಲಿ ಈ ರೀತಿ ಆಗುವುದಾದರೆ ಚುನಾವಣೆಯನ್ನೇ ನಡೆಸಬೇಕಾಗಿಲ್ಲ. ರಾಜ್ಯಪಾಲರು ನೇರವಾಗಿ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಬಹುದು.
ಇನ್ನು ಕರ್ನಾಟಕ ದಲ್ಲೂ ನಾವೇ ಗೆಲ್ಲುತ್ತೇವೆ ಎಂದು ಮೋದಿ ಹಾಗೂ ಅಮಿತ್ ಶಾ ಘೋಷಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಹೇಗಿದ್ದರೂ ಬಿಜೆಪಿಯೇ ಗೆಲ್ಲುತ್ತದೆ ಎನ್ನುವುದಾದರೆ ಚುನಾವಣೆ ನಡೆಸಬೇಕಾದ ಅಗತ್ಯವೇ ಇಲ್ಲ. ಚುನಾವಣೆ ಹೆಸರಿನಲ್ಲಿ ನೂರಾರು ಕೋಟಿ ರು. ಹಣ ಖರ್ಚು ಮಾಡುವುದು ಉಳಿಯಲಿದೆ ಎಂದು ಗೊತ್ತಾಗಿದೆ. [ಸುಳ್ಳು ಸುದ್ದಿ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.