
ಕಲಬುರಗಿ (ಮಾ.05): ಇಲ್ಲಿನ ಮಹಾನಗರ ಪಾಲಿಕೆ ನೂತನ ಕಛೇರಿ ಮೇಲೆ ಉರ್ದು ನಾಮಫಲಕ ಹಾಕಿದ್ದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಪಾಲಿಕೆ ಕಛೇರಿ ಮೇಲಿನ ಉರ್ದು ನಾಮಫಲಕ ತೆರವು ವಿರೋಧಿಸಿ ಕಲಬುರಗಿಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ನಿನ್ನೆಯಷ್ಟೆ ಪಾಲಿಕೆಯ ಕೆಲ ಸದಸ್ಯರು ಕಟ್ಟಡದ ಮೇಲೆ ಅನಧಿಕೃತವಾಗಿ ಉರ್ದು ನಾಮಫಲಕ ಹಾಕಿಸಿದ್ದರು. ವಿವಾದವಾಗುತ್ತೆ ಅಂತ ಅಧಿಕಾರಿಗಳು ಉರ್ದು ನಾಮಫಲಕವನ್ನ ನಿನ್ನೆ ಸಂಜೆ ತೆರವುಗೊಳಿಸಿದ್ದರು. ಆದರೆ ನಾಮಫಲಕ ತೆರವುಗೊಳಿಸಿದ್ದಕ್ಕೆ ವಿವಿಧ ಮುಸ್ಲಿಂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಉರ್ದು ನಾಮಫಲಕ ಬೇಡವೆಂದರೆ ಕನ್ನಡ ಇಂಗ್ಲಿಷ್ ನಾಮಫಲಕವೂ ಬೇಡ ಎಂದು ಕನ್ನಡ ನಾಮಫಲಕಕ್ಕೆ ಕಿಡಿಗೇಡಿಗಳು ಕಪ್ಪು ಮಸಿ ಬಳಿದಿದ್ದಾರೆ. 30 ಕ್ಕೂ ಅಧಿಕ ಪ್ರತಿಭಟನಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಲಿಕೆ ಬಳಿ ಜಿಲ್ಲಾ ಪೊಲೀಸ್ ಇಲಾಖೆ ಭದ್ರತೆ ಬಿಗಿಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.