
ವಿಜಯಪುರ[ನ.14] ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ನಕಲಿ ಖಾತೆ ನೋಡಿ ವಿಜಯಪುರ ಜಿಲ್ಲೆಯ ಇಂಡಿ ಶಾಸಕರು ಬೆಚ್ಚಿ ಬಿದ್ದಿದ್ದಾರೆ. ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಹೆಸರಿನಲ್ಲಿವೇ ಹತ್ತಾರು ಫೇಕ್ ಅಕೌಂಟ್ ಗಳು ತೆರೆದುಕೊಂಡಿದೆ.
ಈ ಹಿನ್ನೆಲೆಯಲ್ಲಿ ಶಾಸಕರ ಪಿಎ ರುದ್ರೇಶ ಎಸ್. ಸಿ. ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ನಕಲಿ ಅಕೌಂಟ್ ತೆರದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ಸಲ್ಲಿಸಿದ್ದಾರೆ.
ಗುಡ್ ನ್ಯೂಸ್: ವಾಟ್ಸಪ್‌ನಂತೆ ಫೇಸ್ಬುಕ್‌ನಲ್ಲೂ ಬರಲಿದೆ ಈ ಆಪ್ಶನ್!
ಬೆಳಕಿಗೆ ಬಂದಿದ್ದು ಹೇಗೆ? Y. V. Patil ಹೆಸರಿನಿಂದ ಫೇಸ್ಬುಕ್ ಫ್ರೆಂಡ್ ವೊಬ್ಬರ ಜೊತೆ ಮೆಸೆಂಜರ್ನ್ ನಲ್ಲಿ ನಕಲಿ ವ್ಯಕ್ತಿ ಚಾಟ್ ಮಾಡಿದ್ದಾನೆ. ಹೌದು ಪ್ರೀಯ ಸ್ನೇಹಿತ ನನಗ ನಿಜವಾಗಿಯೂ 50 ಸಾವಿರ ಡಾಲರ್ ಅಗತ್ಯವಿದೆ. ನಾನು ನಂತರ ಅದನ್ನು ಡಬಲ್ ಹಣ ಹಿಂದಿರುಗಿಸುತ್ತೇನೆ ಎಂದು ಚಾಟಿಂಗ್ ನಲ್ಲಿ ಹೇಳಿದ್ದಾನೆ. ಈ ರೀತಿ ಶಾಸಕರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಶಾಸಕರು ಅವರ ಪಿಎ ಲಿಖಿತ ದೂರು ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.