
ನಂಬಿದ್ರೆ-ನಂಬಿ, ಬಿಟ್ರೆ-ಬಿಡಿ ‘ಫೇಕ್ ನ್ಯೂಸ್’, ಕೊಲಿನ್ಸ್ ಡಿಕ್ಷನರಿಯಲ್ಲಿ ಪ್ರಸ್ತುತ ವರ್ಷದ ಪದ ಎಂಬ ಗೌರವಕ್ಕೆ ಪಾತ್ರವಾಗಿದೆ. ಕಳೆದ ವರ್ಷದ ಅಮೆರಿಕ ಅಧ್ಯಕ್ಷೀಯ ಎಲೆಕ್ಷನ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರು, ಮಾಧ್ಯಮಗಳ ವಿರುದ್ಧ ಹರಿಹಾಯಲು ಬಳಸುತ್ತಿದ್ದ ‘ಫೇಕ್‌ನ್ಯೂಸ್’ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿತ್ತು. ಅಲ್ಲದೆ, ಕಳೆದ 12 ತಿಂಗಳಲ್ಲಿ ಫೇಕ್ ನ್ಯೂಸ್ ಪದ ಬಳಕೆ ಶೇ.365ರಷ್ಟು ಏರಿಕೆಯಾಗಿದ್ದನ್ನು ಬ್ರಿಟನ್ ನಿಘಂಟು ರಚನೆಕಾರ ಕಂಡುಕೊಂಡಿದ್ದಾರೆ. ಹಾಗಾಗಿ, ಫೇಕ್‌ನ್ಯೂಸ್‌ಗೆ ಈ ಗೌರವ ನೀಡಲಾಗಿದೆಯಂತೆ. ಕಳೆದ ವರ್ಷ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ಸಂದರ್ಭದಲ್ಲಿ ಹೆಚ್ಚು ಬಳಕೆಯಾಗಿದ್ದ ಡೆಫಿನೇಟಿವ್(ನಿರ್ಣಾಯಕ) ವರ್ಷದ ಪದ ಎಂಬ ಗೌರವ ಮುಡಿಗೇರಿಸಿಕೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.