
ಬೆಂಗಳೂರು(ಮೇ.27): ಡೋಂಗಿ ಬಾಬಾನ ಕರಾಳ ದಂಧೆಯ ಇನ್ನೊಂದು ಮುಖವನ್ನ ಸುವರ್ಣ ನ್ಯೂಸ್ ಜನರಿಗೆ ಪರಿಚಯ ಮಾಡಿತ್ತು. ಬಾಬಾನ ಅಸಲಿ ಮುಖ ಗೊತ್ತಾಗುತ್ತಿದ್ದಂತೆ ಇದೀಗ ಸಾಲು ಸಾಲು ಜನರು ಬಾಬನ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲಿರಿದ್ದಾರೆ. ಧನಂಜಯ ಸ್ವಾಮಿ ಊರಿಗೆ ತೆರಳಿದ್ದ ಸುವರ್ಣ ನ್ಯೂಸ್ ತಂಡ ನಕಲಿ ಸ್ವಾಮಿಯ ಇನ್ನಷ್ಟು ಕರ್ಮಕಾಂಡಗಳನ್ನ ಬಯಲು ಮಾಡಿದೆ.
ಸುವರ್ಣ ನ್ಯೂಸ್ ರಹಸ್ಯ ಕಾರ್ಯಚರಣೆ ಮೂಲಕ ಡೋಂಗಿ ಬಾಬನ ಅಸಲಿ ಮುಖವನ್ನು ಎಳೆ ಎಳೆಯಾಗಿ ಪರಿಚಯ ಮಾಡುವ ಮೂಲಕ ಬಾಬನ ಕರಾಳ ದಂಧೆಯ ಮುಖವನ್ನು ಜನರಿಗೆ ಪರಿಚಯ ಮಾಡಿತ್ತು. ಬಾಬನ ಮೋಸದಾಟವನ್ನು ತಿಳಿಯಲು ನಿನ್ನೆ ಸುವರ್ಣ ನ್ಯೂಸ್ ಟಿಂ ಡೊಂಗಿ ಬಾಬನ ಊರು ಬಿದನಕೆರೆಗೆ ಪ್ರಯಾಣ ಬೆಳೆಸಿತ್ತು. ಊರಿಗೆ ಪ್ರವೇಶಿಸುತ್ತಿದ್ದಂತೆಯೇ ಸುವರ್ಣ ನ್ಯೂಸ್ ಟಿಂ ಮೇಲೆ ಬಾಬಾ ಚೇಲಾಗಳು ಹಲ್ಲೆಗೆ ಮುಂದಾಗಿದ್ದರು.
ಊರಿನಲ್ಲಿ ಚಿತ್ರಿಕರಣ ಮಾಡದಂತೆ ಸುವರ್ಣ ನ್ಯೂಸ್ ವರದಿಗಾರನಿಗೆ ಡೋಂಗಿ ಬಾಬನ ಚೇಲಾಗಳು ಧಮ್ಕಿ ಹಾಕೋ ಮೂಲಕ ಹಲ್ಲೆಗೆ ಕೂಡ ಮುಂದಾಗಿದ್ರು. ಬಾಬಾನ ದಾಂಡಿಗರು ವರದಿಗಾರನ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಂತೆ ಕುಣಿಗಲ್ ಪೊಲೀಸರು ಎಂಟ್ರಿ ಕೋಟ್ಟು ಬಾಬನ ಚೇಲಾಗಳನ್ನ ತಣ್ಣಾಗಾಗಿಸಿದ್ದರು. ಈ ಮಧ್ಯೆ ಬಾಬ ವಿರುದ್ಧ ಅದೇ ಊರಿನ ನಾರಾಯಣ್ ಎಂಬುವರು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 341, 504, 506 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಡೋಂಗಿ ಬಾಬನಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇನ್ನು ಸುವರ್ಣ ನ್ಯೂಸ್ ಸ್ಟೋಡಿಯೋದಲ್ಲಿ ಮೋಸಹೋದವರಿಗೆ ಹಣ ವಾಪಸ್ಸು ಮಾಡುತ್ತೇನೆ ಎಂದಿದ್ದ ಭೂಪ ಧನಂಜಯ್ಯ ಆಲಿಯಾಸ್ ಡೋಂಗಿ ಬಾಬ ನಿನ್ನೆ ನಾಪತ್ತೆಯಾಗಿದ್ದಾನೆ.
ಒಟ್ಟಿನಲ್ಲಿ ಸದ್ಯದಲ್ಲೇ ಬಾಬನ ಇನ್ನಷ್ಟು ಕರ್ಮಕಾಂಡಗಳು ಹೊರಬರಲಿವೆ. ಇನ್ನು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಾಬನ ವಿರುದ್ದ ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ತಾರೋ ಎನ್ನುವುದನ್ನು ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.