
ಬೆಂಗಳೂರು(ಅ.30): ದೀಪಾವಳಿಯ ಹಬ್ಬದಲ್ಲಿ ಪಟಾಕಿ ಹೊಡೆಯವ ಸಂದರ್ಭದಲ್ಲಿ ಕಣ್ಣಿಗೆ ಪೆಟ್ಟಾಗಿ ಸುಮಾರು 10ಕ್ಕೂ ಹೆಚ್ಚು ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟಾಕಿ ತಂದ ಅವಾಂತರದಿಂದಾಗಿ ಚಾಮರಾಜಪೇಟೆ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. 8 ವರ್ಷದ ಧರಣ್ ಹಾಗೂ ಹಲಸೂರಿನ ಕವಿತಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಪಟಾಕಿ ಅವಾಂತರದಿಂದಾಗಿ ರಾಜಾಜಿನಗರ ನಾರಾಯಣ ಆಸ್ಪತ್ರೆಯಲ್ಲಿ ಏಳು, ನಾರಾಯಣ ನೇತ್ರಾಲಯ ಬೊಮಸಂದ್ರದಲ್ಲಿ ಇಬ್ಬರು, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆದಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿಯಿಂದ ಆಗಿರುವ ಗಾಯಾಳುಗಳ ಸಂಖ್ಯೆ ಕಡಿಮೆಯಾಗಿದೆ. ಆದರು ಚಿಕ್ಕಮಕ್ಕಳು ಪಟಾಕಿ ಹೊಡೆಯುವಾಗ ಎಚ್ಚರವಿರಲ್ಲಿ. ಚಿಕ್ಕ ಮಕ್ಕಳಿಗೆ ಅಪಾಯಕಾರಿಯಾದ ಪಟಾಕಿ ಹೊಡೆಯಲು ಬಿಡದಿರಿ. ಸಂಭ್ರಮದ ದೀಪಾವಳಿ ಆಚರಣೆ ಅವಾಂತರಕ್ಕೆ ಕಾರಣವಾಗದಿರಲ್ಲಿ. ಬೆಳಕಿನ ಹಬ್ಬ ನಮ್ಮ ಬೆಳಕನ್ನು ಆರಸದಿರಲ್ಲಿ .ಪುಟಾಣಿಗಳೇ ಎಚ್ಚರವಿರಲ್ಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.