
ಕುರುಕ್ಷೇತ್ರ, ಹರ್ಯಾಣ (ಅ.30): ಪಾಕಿಸ್ತಾನ ಸೈನಿಕರು ಹಾಗೂ ಉಗ್ರಗಾಮಿಗಳು ಜಂಟಿಯಾಗಿ ನಡೆಸಿದ ದಾಳಿಗೆ ಶುಕ್ರವಾರ ಹುತಾತ್ಮರಾದ ಮನ್ ದೀಪ್ ಸಿಂಗ್’ಗೆ ಇಂದು ಅಂತಿಮ ನಮನ ಸಲ್ಲಿಸಲಾಯಿತು.
ಹರ್ಯಾಣದ ಕುರುಕ್ಷೇತ್ರದಲ್ಲಿರುವ ಹುಟ್ಟೂರು ಅಂತೇಡಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ವೀರಮರಣವನ್ನಪ್ಪಿದ 27 ವರ್ಷ ಪ್ರಾಯದ ಮನದೀಪ್ ಸಿಂಗ್’ಗೆ ಶ್ರದ್ದಾಂಜಲಿ ಸಲ್ಲಿಸಿದರು.
ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಪಾಕಿಸ್ತಾನ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮನದೀಪ್ ಮೃತಪಟ್ಟಿದ್ದರು; ಬಳಿಕ ಪಾಕಿಸ್ತಾನ ಸೇನೆಯೊಂದಿಗಿದ್ದ ಉಗ್ರಗಾಮಿಗಳು ಅವರ ಮೃತದೇಹವನ್ನು ವಿರೂಪಗೊಳಿಸಿದ್ದರು.
ಟ್ರಕ್ ಚಾಲಕನ ಮಗನಾಗಿರುವ ಮನದೀಪ್ 2009ರಲ್ಲಿ ಸೇನೆಗೆ ಸೇರಿದ್ದರು. ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಸೇವೆಯಲ್ಲಿರುವ ಪ್ರೇರಣಾರನ್ನು 2014 ರಲ್ಲಿ ಮನದೀಪ್ ಮದುವೆಯಾಗಿದ್ದರು.
ಮನದೀಪ್ ಕುಟುಂಬಕ್ಕೆ ರೂ.50 ಲಕ್ಷಗಳ ಹಣಕಾಸು ನೆರವನ್ನು ಘೋಷಿಸಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.