Fact Check : ಚೀನಾದೊಳಗೆ ನುಗ್ಗಿ ಪಹರೆ ನಡೆಸಿದ್ರಾ ಭಾರತೀಯ ಸೈನಿಕರು?

By Web DeskFirst Published Sep 28, 2019, 11:31 AM IST
Highlights

ಲೇಹ್‌-ಲಡಾಖ್‌ ವಲಯದಲ್ಲಿ ಚೀನಾದ ವಶದಲ್ಲಿರುವ ಪಾಂಗೊಂಗ್‌ ಸರೋವರದ ದಡದಲ್ಲಿ ಭಾರತೀಯ ಸೈನಿಕರು ಮುಕ್ತವಾಗಿ ಪಹರೆ ನಡೆಸಿದ್ದಾರೆ. ಚೀನಾದ ಸೇನಾಪಡೆ ಈ ಬಗ್ಗೆ ಆಕ್ಷೇಪ ತೆಗೆದರೂ ಭಾರತದ ಯೋಧರು ಕ್ಯಾರೇ ಎಂದಿಲ್ಲ. ಎಚ್ಚರ, ಚೀನಾ ಯೋಧರು ಈ ಅತಿಕ್ರಮಣಕಾರರಿಗೆ ಟೀ ನೀಡಲಿಲ್ಲ! ಹೀಗೊಂದು ಸಂದೇಶ ಟ್ವೀಟರ್‌ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಪಾಕಿಸ್ತಾನದಲ್ಲಿ ಭಾರತದ ವಾಯುಪಡೆಯ ಯೋಧ ಅಭಿನಂದನ್‌ ವರ್ತಮಾನ್‌ಗೆ ಟೀ ನೀಡಿದ್ದನ್ನು ಸ್ಮರಿಸಿ, ತಮ್ಮ ದೇಶದೊಳಗೆ ನುಗ್ಗಿದ ಭಾರತದ ಯೋಧರಿಗೆ ಚೀನಿ ಯೋಧರು ಟೀ ನೀಡಲಿಲ್ಲ ಎಂದು ಈ ಟ್ವೀಟ್‌ ಮಾಡಿದ ಇವಾ ಝೆಂಗ್‌ ಎಂಬಾಕೆ ಬರೆದಿದ್ದಾಳೆ.

Fact chek ಮೋದಿ ಕಾಲದಲ್ಲಿ ದೇಶದಲ್ಲಿ ಒಂದೂ ವಿಶ್ವದರ್ಜೆ ವಿವಿ ಇಲ್ಲ!

ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚೀನಾದ ವಶದಲ್ಲಿರುವ ಭಾರತದ ಭೂಮಿಯನ್ನು ಭಾರತೀಯ ಯೋಧರು ಯಶಸ್ವಿಯಾಗಿ ಮರಳಿ ಪಡೆದಿದ್ದಾರೆ, ಇದು ಮೋದಿಯವರ ತಾಕತ್ತು ಎಂದೆಲ್ಲ ಕಮೆಂಟ್‌ಗಳು ಬಂದಿವೆ.

ನಿಜವಾಗಿಯೂ ಭಾರತದ ಯೋಧರು ಚೀನಾ ವಶದಲ್ಲಿರುವ ಪಾಂಗೊಂಗ್‌ ಸರೋವರದ ಪ್ರದೇಶಕ್ಕೆ ನುಗ್ಗಿ ಪಹರೆ ನಡೆಸಿದ್ದಾರೆಯೇ ಎಂದು ಟೈಮ್ಸ್‌ ಫ್ಯಾಕ್ಟ್ ಚೆಕ್‌ ತಂಡ ಪರಿಶೀಲನೆ ನಡೆಸಿದೆ. ಆಗ ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ. 2017ರಲ್ಲಿ ಲಡಾಖ್‌ನ ಪಾಂಗೊಂಗ್‌ ಸರೋವರ ಪ್ರದೇಶದಲ್ಲಿ ಭಾರತದ ಯೋಧರು ಮತ್ತು ಚೀನಾ ಯೋಧರ ನಡುವೆ ಘರ್ಷಣೆ ನಡೆದಿತ್ತು. ಆಗ ಒಂದು ವಿಡಿಯೋ ಶೂಟ್‌ ಮಾಡಲಾಗಿತ್ತು. ಆ ವಿಡಿಯೋದಿಂದ ‘ಜಿಫ್‌’ ಫೈಲ್‌ ಸೃಷ್ಟಿಸಿ ಅದನ್ನು ಇವಾ ಝೆಂಗ್‌ ಹಾಗೂ ಇನ್ನೂ ಅನೇಕರು ಟ್ವೀಟ್‌ ಮಾಡಿದ್ದಾರೆ.

- ವೈರಲ್ ಚೆಕ್ 

click me!