Fact Check| ಕಾಶ್ಮೀರ ಹಿಂದುಗಳಿಗೆ ಮಾತ್ರ ಸೇರಿದ್ದು ಎಂದ ಸೌದಿ ಪ್ರಿನ್ಸ್‌!

By Web DeskFirst Published Jun 18, 2019, 10:17 AM IST
Highlights

‘ಜಮ್ಮು ಮತ್ತು ಕಾಶ್ಮೀರ ಹಿಂದುಗಳ ಭೂಮಿ. ಅದರ ಮೇಲೆ ಪಾಕಿಸ್ತಾನಕ್ಕಾಗಲೀ, ಮುಸ್ಲಿಮರಿಗಾಗಲೀ ಯಾವುದೇ ಹಕ್ಕಿಲ್ಲ’ ಎಂದು ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಹೇಳಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಸುದ್ದಿ ನಿಜಾನಾ? ಇಲ್ಲಿದೆ ನೋಡಿ ವಾಸ್ತವಾಂಶ

ಶ್ರೀನಗರ[ಜೂ.18]: ‘ಜಮ್ಮು ಮತ್ತು ಕಾಶ್ಮೀರ ಹಿಂದುಗಳ ಭೂಮಿ. ಅದರ ಮೇಲೆ ಪಾಕಿಸ್ತಾನಕ್ಕಾಗಲೀ, ಮುಸ್ಲಿಮರಿಗಾಗಲೀ ಯಾವುದೇ ಹಕ್ಕಿಲ್ಲ’ ಎಂದು ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಹೇಳಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಆಜಾದ್‌ ಭಾರತ್‌ ಎಂಬ ಫೇಸ್‌ಬುಕ್‌ ಪುಟದಲ್ಲಿ ಈ ಕುರಿತು ಪೋಸ್ಟ್‌ ಮಾಡಲಾಗಿದ್ದು, ಅದು 6000ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದೆ. ಸೌದಿ ಅರೇಬಿಯಾವು ಭಾರತದ ಸ್ನೇಹಿತ ರಾಷ್ಟ್ರ. ಅಲ್ಲದೆ ಕಟ್ಟರ್‌ ಮುಸ್ಲಿಂ ರಾಷ್ಟ್ರವೂ ಹೌದು. ಆ ದೇಶದ ಸರ್ಕಾರದ ಮುಖ್ಯಸ್ಥರಲ್ಲಿ ಒಬ್ಬನಾಗಿರುವ ಪ್ರಿನ್ಸ್‌ ಸಲ್ಮಾನ್‌ ಹೀಗೆ ಹೇಳಿರುವುದು ಕಾಶ್ಮೀರದ ಮುಸ್ಲಿಮರಿಗೆ ಹಾಗೂ ಪಾಕಿಸ್ತಾನಕ್ಕೆ ಆದ ದೊಡ್ಡ ಹಿನ್ನಡೆ ಎಂದು ಸಾಕಷ್ಟು ಚರ್ಚೆಯಾಗಿದೆ.

ಆದರೆ, ಪ್ರಿನ್ಸ್‌ ಸಲ್ಮಾನ್‌ ಹೀಗೆ ಹೇಳಿದ್ದು ನಿಜವೇ ಎಂದು ಇಂಟರ್ನೆಟ್‌ನಲ್ಲಿ ಹುಡುಕಿದಾಗ ಈ ವರ್ಷದ ಫೆಬ್ರವರಿಯಲ್ಲಿ ಆಸ್ಪ್ರೇಲಿಯಾದ ಮೌಲ್ವಿಯೊಬ್ಬರು ಮಾಡಿದ ಟ್ವೀಟ್‌ ದೊರೆತಿದೆ. ಇಮಾಮ್‌ ಮೊಹಮ್ಮದ್‌ ತಾಹಿದಿ ಎಂಬ ಮೌಲ್ವಿ ಮಾಡಿದ ಟ್ವೀಟ್‌ನಲ್ಲಿರುವ ಹೇಳಿಕೆಯನ್ನು ಪ್ರಿನ್ಸ್‌ ಸಲ್ಮಾನ್‌ ನೀಡಿದ ಹೇಳಿಕೆ ಎಂದು ಇಂಟರ್ನೆಟ್‌ನಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ.

I’M NOT A SAUDI PRINCE. pic.twitter.com/q4dVxRvECN

— Imam Mohamad Tawhidi (@Imamofpeace)

ತಮ್ಮ ಹೇಳಿಕೆ ವೈರಲ್‌ ಆದಾಗ ಸ್ವತಃ ತಾಹಿದಿ ಸ್ಪಷ್ಟನೆ ನೀಡಿ, ‘ನಾನು ಸೌದಿ ಅರೇಬಿಯಾದ ಪ್ರಿನ್ಸ್‌ ಅಲ್ಲ. ನನ್ನ ಹೇಳಿಕೆಯನ್ನು ಅವರ ಹೆಸರಿನಲ್ಲಿ ಹರಡಲಾಗುತ್ತಿದೆ’ ಎಂದಿದ್ದಾರೆ. ಹೀಗಾಗಿ ಕಾಶ್ಮೀರ ಕೇವಲ ಹಿಂದುಗಳಿಗೆ ಮಾತ್ರ ಸೇರಿದ್ದು, ಅದರ ಮೇಲೆ ಮುಸ್ಲಿಮರಿಗೆ ಹಕ್ಕಿಲ್ಲ ಎಂದು ಸೌದಿ ಪ್ರಿನ್ಸ್‌ ಹೇಳಿರುವುದು ಸುಳ್ಳು.

click me!