ಶಾಸಕ ಶ್ರೀ ರಾಮುಲು ಕೋರ್ಟ್‌ಗೆ ಹಾಜರ್‌

By Web Desk  |  First Published Jun 18, 2019, 10:15 AM IST

ಮೊಣಕಾಲ್ಮೂರು ಶಾಸಕ ಬಿ ಶ್ರೀರಾಮುಲು ಕೋರ್ಟ್ ಗೆ ಹಾಜರಾಗಿದ್ದಾರೆ. ಅವರ ಮೇಲಿನ ಪ್ರಕರಣ ಒಂದರ ಸಂಬಂಧ ವಿಚಾರಣೆ ನಡೆದಿದ್ದು ಈ ವಿಚಾರಣೆಗೆ ಹಾಜರಾದರು.


ಬಳ್ಳಾರಿ [ಜೂ.18] :  ಮಾನನಷ್ಟಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಹಾಗೂ ಮೊಣಕಾಲ್ಮುರು ಶಾಸಕ ಬಿ. ಶ್ರೀರಾಮುಲು ಇಲ್ಲಿನ ಜೆಎಂಎಫ್‌ಸಿ ನ್ಯಾಯಲಯಕ್ಕೆ ಸೋಮವಾರ ಹಾಜರಾದರು. 

ಈ ಹಿಂದೆ ಜನಾರ್ದನ ರೆಡ್ಡಿ ಸಂಪಾದಕತ್ವದ ದಿನಪತ್ರಿಕೆಯಲ್ಲಿ ಮಾಜಿ ಸಚಿವ ಎಂ. ದಿವಾಕರ ಬಾಬು ವಿರುದ್ಧ ಮಾನ ಹಾನಿಯಾಗುವಂತಹ ವರದಿ ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ರೆಡ್ಡಿ ಬಳ್ಳಾರಿಗೆ ಬರದಂತೆ ಸುಪ್ರೀಂ ಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಇಷ್ಟುದಿನ ಕೋರ್ಟ್‌ಗೆ ಹಾಜರಾಗಿರಲಿಲ್ಲ. 

Tap to resize

Latest Videos

ರೆಡ್ಡಿ, ರಾಮುಲು ಸೇರಿ ನಾಲ್ವರ ಹಾಜರಿ ಕುರಿತಂತೆ ಇನ್ನು ಮುಂದೆ ಪ್ರಕರಣ ಬೆಂಗಳೂರು ಕೋರ್ಟ್‌ಗೆ ಸ್ಥಳಾಂತರಿಸಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ, ಇದೊಂದು ಪ್ರಕರಣ ಕೋರ್ಟಿನಲ್ಲಿತ್ತು. ಕೋರ್ಟ್‌ ಆದೇಶ ಹಿನ್ನೆಲೆ ಹಾಜರಾಗಿದ್ದೇನೆ ಎಂದು ಹೇಳಿದರು.

click me!