Fact Check : ಭಾರತೀಯ ಸೇನೆ ಕಾಶ್ಮೀರಿ ಮುಸ್ಲಿಮರಿಗೆ ಥಳಿಸಿದ್ರಾ?

By Web DeskFirst Published Sep 19, 2019, 8:22 AM IST
Highlights

ಭಾರತೀಯ ಸೇನೆಯ ಸಮವಸ್ತ್ರ ಧರಿಸಿರುವ ವ್ಯಕ್ತಿಗಳು ಮುಸ್ಲಿಮರಿಗೆ ಒದೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದನ್ನು ಪೋಸ್ಟ್‌ ಮಾಡಿ ‘ಭಾರತೀಯ ಸೇನೆ ಕಾಶ್ಮೀರಿ ಮುಸ್ಲಿಮರಿಗೆ ಥಳಿಸುತ್ತಿದೆ’ ಎಂದು ಹೇಳಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಭಾರತೀಯ ಸೇನೆಯ ಸಮವಸ್ತ್ರ ಧರಿಸಿರುವ ವ್ಯಕ್ತಿಗಳು ಮುಸ್ಲಿಮರಿಗೆ ಒದೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದನ್ನು ಪೋಸ್ಟ್‌ ಮಾಡಿ ‘ಭಾರತೀಯ ಸೇನೆ ಕಾಶ್ಮೀರಿ ಮುಸ್ಲಿಮರಿಗೆ ಥಳಿಸುತ್ತಿದೆ’ ಎಂದು ಹೇಳಲಾಗಿದೆ. ಇದರೊಂದಿಗೆ, ‘ಈ ವಿಡಿಯೋವನ್ನು ನಿಮ್ಮ ಸುತ್ತಮುತ್ತಲಿನವರಿಗೆ ಕಳುಹಿಸಿ. ಕಾಶ್ಮೀರಿ ಮುಸ್ಲಿಮರಿಗೆ ಭಾರತೀಯ ಸೇನೆ ಏನು ಮಾಡುತ್ತಿದೆ ಎನ್ನುವುದು ಎಲ್ಲರಿಗೂ ತಿಳಿಯಲಿ’ ಎಂದು ಬರೆಯಲಾಗಿದೆ. 10 ನಿಮಿಷವಿರುವ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದರಲ್ಲೂ ಫೇಸ್‌ಬುಕ್‌ನಲ್ಲಿ ಭಾರಿ ವೈರಲ್‌ ಆಗಿದೆ.

ಆದರೆ ನಿಜಕ್ಕೂ ಕಾಶ್ಮೀರದಲ್ಲಿರುವ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ಅವರಿಗೆ ಹಿಂಸೆ ನೀಡುತ್ತಿದೆಯೇ ಎಂದು ಪರಿಶೀಲಿಸಿದಾಗ ಇದು 10 ವರ್ಷ ಹಿಂದಿನ ಪಾಕಿಸ್ತಾನದ ವಿಡಿಯೋ ಎಂದು ತಿಳಿದುಬಂದಿದೆ. 2009ರಲ್ಲಿ ಇದೇ ರೀತಿಯ ವಿಡಿಯೋ ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಆಗಿದೆ.

ಅದರ ಕೆಳಗೆ ‘ಪಾಕಿಸ್ತಾನ ಸೇನೆಯು ಯುವ ಮುಸ್ಲಿಮರನ್ನು ಥಳಿಸುತ್ತಿದೆ’ ಎಂದು ಹೇಳಲಾಗಿದೆ. ಇದರ ಜಾಡು ಹಿಡಿದು ಆಲ್ಟ್‌ನ್ಯೂಸ್‌ ಸುದ್ದಿ ಸಂಸ್ಥೆಯು ಸುದ್ದಿವಾಹಿನಿಗಳ ವರದಿ ಹುಡುಕಿದಾಗ ಬಿಬಿಸಿ ವಾಹಿನಿಯ ವರದಿಯೊಂದು ಲಭ್ಯವಾಗಿದೆ. ಅಕ್ಟೋಬರ್‌ 1, 2009ರ ಬಿಬಿಸಿ ವರದಿಯಲ್ಲಿ 10 ನಿಮಿಷದ ವಿಡಿಯೋದಲ್ಲಿ ‘ಪಾಕಿಸ್ತಾನಿ ಸೈನಿಕರು ತಾಲಿಬಾನಿಗಳೆಂಬ ಶಂಕೆಯ ಮೇಲೆ ಥಳಿಸುತ್ತಿರುವ ದೃಶ್ಯ’ ಎಂದಿದೆ. ಆದರೆ ಘಟನೆ ನಡೆದ ಸ್ಥಳ ಯಾವುದು, ವಿಡಿಯೋ ಮಾಡಿದ್ದು ಯಾರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

click me!