ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಗಲಭೆ-ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಬಂಧನ| 18 ತಿಂಗಳೊಳಗೆ ಕಾಶ್ಮೀರಿ ನಾಯಕರ ಬಿಡುಗಡೆ: ಕೈಗೆ ಸಚಿವ ಸಿಂಗ್ ಟಾಂಗ್|
ನವದೆಹಲಿ[ಸೆ.19]: ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಗಲಭೆ-ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಬಂಧನದಲ್ಲಿಡಲಾಗಿರುವ ರಾಜ್ಯದ ರಾಜಕೀಯ ನಾಯಕರನ್ನು 18 ತಿಂಗಳ ಒಳಗಾಗಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ.
ಈ ಮೂಲಕ 1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ ಮೇಲೆ ಹೇರಿದ್ದ ತುರ್ತುಪರಿಸ್ಥಿತಿ ಉಲ್ಲೇಖಿಸದೇ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳ ನಾಯಕರನ್ನು ಟೀಕೆ ಮಾಡಿದ್ದಾರೆ.
ಜಮ್ಮುವಿನ ಕತ್ರಾದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್, ‘ಪ್ರತೀ ಬಾರಿಯು ಪತ್ರಕರ್ತರು ಪೊಲೀಸ್ ವಶದಲ್ಲಿರುವ ಜಮ್ಮು-ಕಾಶ್ಮೀರದ ರಾಜಕೀಯ ನಾಯಕರನ್ನು ಯಾವಾಗ ಬಿಡುಗಡೆ ಮಾಡುತ್ತೀರಿ ಎಂಬ ಪ್ರಶ್ನೆ ಇಡುತ್ತಾರೆ. ಇದಕ್ಕೆ ನಾನು 18 ತಿಂಗಳ ಒಳಗಾಗಿ ಎಂಬ ಉತ್ತರವನ್ನೇ ನೀಡುತ್ತಿದ್ದೇನೆ’ ಎಂದು ಹೇಳಿದರು.