ಅಂಬಿ ಸಾವಿನಲ್ಲೂ ವಿಕೃತಿ ಮೆರೆದ ಕಿರಾತಕರು

By Web DeskFirst Published Nov 26, 2018, 9:16 AM IST
Highlights

ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಅಗಲಿಕೆಯಿಂದ ರಾಜ್ಯವೇ ದುಃಖತಪ್ತವಾಗಿದೆ. ಇಂತಹ ಸಂದರ್ಭದಲ್ಲಿ ಕೆಲ ದುಷ್ಕರ್ಮಿಗಳು, ‘ದುಷ್ಟ ಸಂಹಾರ’ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅದರಲ್ಲಿ ಮೂವರು ಹಿರಿಯ ನಟರಿಗೆ ಕೀಳು ಮಟ್ಟದ ಭಾಷೆಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ದೂರು ದಾಖಲು ಮಾಡಲಾಗಿದೆ. 

ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಮಹಾನ್ ನಟರ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸೈಬರ್ ಕ್ರೈಂ ಠಾಣೆಗಳಿಗೆ ಕೆಪಿಸಿಸಿ ಮಾನವ ಹಕ್ಕು ವಿಭಾಗವು ಭಾನುವಾರ ದೂರು ಸಲ್ಲಿಸಿದೆ. 

ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಅಗಲಿಕೆಯಿಂದ ರಾಜ್ಯವೇ ದುಃಖತಪ್ತವಾಗಿದೆ. ಇಂತಹ ಸಂದರ್ಭದಲ್ಲಿ ಕೆಲ ದುಷ್ಕರ್ಮಿಗಳು, ‘ದುಷ್ಟ ಸಂಹಾರ’ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅದರಲ್ಲಿ ಮೂವರು ಹಿರಿಯ ನಟರಿಗೆ ಕೀಳು ಮಟ್ಟದ ಭಾಷೆಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. 

ಕೆಲ ಸಮಾಜಘಾತುಕ ಶಕ್ತಿಗಳು ಅನ್ಯ ವ್ಯಕ್ತಿಗಳ ಹೆಸರಲ್ಲಿ ಸಿಮ್‌ಗಳನ್ನು ಖರೀದಿಸಿ, ಆ ಸಂಖ್ಯೆಗಳ ನೆರವಿನಿಂದಲೇ ನಕಲಿ ಖಾತೆ ತೆರೆಯುತ್ತಾರೆ. ಯಾವುದಾ ದರೂ ಗಂಭೀರ ಘಟನೆಗಳ ಜರುಗಿದಾಗ ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್‌ನಲ್ಲಿ ಪ್ರಚೋದನಾಕಾರಿ ಸಂದೇಶ ಗಳನ್ನು ಹರಿ ಬಿಟ್ಟು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. 

ಇಂತಹ ಶಕ್ತಿಗಳನ್ನು ಮಟ್ಟ ಹಾಕಬೇಕು. ದುಷ್ಟ ಸಂಹಾರ, ದೀಪಕ್ ದೇವಯ್ಯ, ಅರ್ಪಿತಾ ಭಟ್, ಅಬ್ದು ಲ್ಲಾ ಮಂಗಳೂರ್ ಎಂಬ ಖಾತೆಗಳಿಂದ ವಿಕೃತ ಪೋಸ್ಟ್ ಗಳು ಹರಿದಾಡಿವೆ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಲಾಗಿದೆ. 

click me!