ಆದಾಯ ಮೀರಿದ ಆಸ್ತಿ : ಮಾಜಿ ಸಚಿವನಿಗೆ 5 ವರ್ಷ ಜೈಲು

Published : Jun 22, 2018, 12:08 PM IST
ಆದಾಯ ಮೀರಿದ ಆಸ್ತಿ : ಮಾಜಿ ಸಚಿವನಿಗೆ 5 ವರ್ಷ ಜೈಲು

ಸಾರಾಂಶ

ಮಾಜಿ ಕಂದಾಯ ಸಚಿವ ದುಲೈ ಭುಯಾನ್ ಶಿಕ್ಷೆಗೊಳಗದವರು ಸಿಬಿಐ ವಿಶೇಷ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ 

ರಾಂಚಿ[ಜೂ.22]: ಆದಾಯ ಮೀರಿದ ಆಸ್ತಿ ಹೊಂದಿದ ಮೇಲೆ ಜಾರ್ಖಂಡ್‌ನ ಮಾಜಿ ಸಚಿವರೊಬ್ಬರಿಗೆ ಸಿಬಿಐ ವಿಶೇಷ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ ವಿಧಿಸಿದೆ.

ಮಾಜಿ ಕಂದಾಯ ಸಚಿವ ದುಲೈ ಭುಯಾನ್ ಶಿಕ್ಷೆಗೊಳಗದವರು. ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುವಂತೆ ಕೋರ್ಟ್ ಆದೇಶಿಸಿದೆ.

ಭುಯಾನ್ ಅವರು ಮಧು ಕೋಡ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಅಕ್ರಮವಾಗಿ 1.3 ಕೋಟಿ ಹೊಂದಿದ್ದರು ಎಂದು ಸಿಬಿಐ ಭುಯಾನ್‌ ವಿರುದ್ಧ 2013ರಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವಂತೆ ಜಾರ್ಖಂಡ್‌ ಹೈಕೋರ್ಟ್ ಆದೇಶಿಸಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್‌ನಿನೋ ಪ್ರಕೋಪ ಜಗತ್ತು ತತ್ತರ : ಭಾರತದಲ್ಲೇ 15,800ಕ್ಕೂ ಹೆಚ್ಚು ಸಾವು, ಮುಂಬರುವ ತಿಂಗಳಲ್ಲಿ ತಾಪಮಾನ ಏರಿಕೆ!
ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಆಫರ್, ಐಕ್ಲೌಡ್, ಆ್ಯಪಲ್ ಟಿವಿ, ಆ್ಯಪಲ್ ಆರ್ಕೇಡ್ ಉಚಿತ