
ಲಾಹೋರ್: ಜುಲೈ 25 ರಂದು ನಡೆಯಲಿರುವ ಪಾಕಿಸ್ತಾನ ಸಂಸತ್ ಚುನಾವಣೆಗೆ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ 265 ಜನ ಸ್ಪರ್ಧಿಸಿದ್ದಾರೆ.
ಇದರಲ್ಲಿ ಸಂಘಟನೆಯ ನಾಯಕ ಹಫೀಜ್ ಸಯೀದ್ ಮತ್ತು ಆತನ ಅಳಿಯ ಕೂಡಾ ಸೇರಿದ್ದಾರೆ. ಸಯೀದ್, ಮಿಲ್ಲಿ ಮುಸ್ಲಿಂ ಲೀಗ್ ಎಂಬ ತನ್ನ ಮುಖವಾಣಿ ಸಂಸ್ಥೆಯನ್ನು ರಾಜಕೀಯ ಪಕ್ಷವಾಗಿ ನೊಂದಾಯಿಸಿ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿದ್ದ.
ಆದರೆ ಉಗ್ರ ನಂಟುಹೊಂದಿರುವ ಕಾರಣಕ್ಕೆ ಅದಕ್ಕೆ ಪಕ್ಷದ ಮಾನ್ಯತೆ ನೀಡಲು ಚುನಾವಣಾ ಆಯೋಗ ನಿರಾಕರಿಸಿತ್ತು. ಹೀಗಾಗಿ ಸಯೀದ್ ಎಎಟಿ ಎಂಬ ಪಕ್ಷದ ಮೂಲಕ ಕಣಕ್ಕೆ ಇಳಿದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.