ಹೀಗೊಂದು ಭಯಾನಕ ರಸ್ತೆ ಅಪಘಾತ, ಆದ್ರೂ ಮೂವರ ಪ್ರಾಣ ಕಾಪಾಡಿತು| ಹೇಗದು? ಎನ್ನುವವರಿಗೆ ಈ ವಿಡಿಯೋ ಸಾಕ್ಷಿ| ಇದನ್ನೇ ಅನ್ನೋದು ವಿಧಿ ಚಮತ್ಕಾರ
ಫಿನಿಕ್ಸ್[ಅ.26]: ರಸ್ತೆ ಅಪಘಾತದ ಸುದ್ದಿ ಸಾಮಾನ್ಯವಾಗಿ ಓದುಗರನ್ನು ಬೇಸರಗೊಳಿಸುತ್ತದೆ. ಆದರೆ ಕಳೆದ ಮಂಗಳವಾರ ಫಿನಿಕ್ಸ್ ಎರಿಜೋನ್ ನಲ್ಲಿ ನಡೆದ ಅಪಘಾತ ಕೇಳಿದ್ರೆ ಅಚ್ಚರಿ ಹಾಗೂ ಖುಷಿಯುಂಟು ಮಾಡುತ್ತದೆ.
ಹೌದು ಇಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಈ ಸಂದರ್ಭದಲ್ಲಿ ದಂಪತಿಯೊಂದು ತಮ್ಮ ಪುಟ್ಟ ಮಗುವಿನೊಂದುಇಗೆ ರಸ್ತೆ ದಾಟುತ್ತಿತ್ತು. ಮಗು ಸ್ಟ್ರೋಲರ್ ನಲ್ಲಿತ್ತು. ಅದೃಷ್ಟವಶಾತ್ ಈ ರಸ್ತೆ ಅಪಘಾತದಿಂದಾಗಿ ಈ ಮೂವರು ಬದುಕುಳಿದಿದ್ದಾರೆ.
ಯಮನಂತೆ ಬಂದಿತ್ತು ಜೀಪ್
ಸಿಗ್ನಲ್ ಬಿದ್ದಾಗ ದಂಪತಿ ತಮ್ಮ ಮಗುವಿನೊಂದಿಗೆ ರಸ್ತೆ ದಾಟುತ್ತಿತ್ತು. ಆದರೆ ಇದೇ ವೇಳೆ ಜೀಪೊಂದು ಸಿಗ್ನಲ್ ಬ್ರೇಕ್ ಮಾಡಿ ವೇಗವಾಗಿ ಬಂದಿತ್ತು. ಜೀಪ್ ಬರುವುದನ್ನು ಕಂಡ ದಂಪತಿ ಬೆಚ್ಚಿ ಬಿದ್ದಿತ್ತು. ಆದರೆ ಕ್ಷಣಾರ್ಧದಲ್ಲಿ ಮತ್ತೊಂದು ಬದಿಯಿಂದ ಆಗಮಿಸುತ್ತಿದ್ದ ಕಾರು ಜೀಪ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಮತ್ತೊಂದು ಬದಿಯಿಂದ ಬಂದು ಜೀಪಿಗೆ ಡಿಕ್ಕಿ ಹೊಡೆದ ಕಾರಿನಿಂದಾಗಿ ದಂಪತಿ ಹಾಗೂ ಪುಟ್ಟ ಮಗು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, 13 ಸೆಕೆಂಡ್ ನ ಈ ವಿಡಿಯೋವನ್ನು ಲಕ್ಷಾಂತರ ಮಂದಿ ಶೇರ್ ಮಾಡಿಕೊಂಡಿದ್ದಾರೆ.
ಸದ್ಯ ಪೊಲೀಸರು ರೆಡ್ ಲೈಟ್ ಸಿಗ್ನಲ್ ಬ್ರೇಕ್ ಮಾಡಿ ಆಗಮಿಸಿದ ಜೀಪ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಕಾರು ಚಾಲಕನಿಗೆ ಎಲ್ಲರೂ ಭೇಷ್ ಎಂದಿದ್ದಾರೆ.