
ಬಾಗಲಕೋಟೆ (ಜೂ. 23): ಚುನಾವಣೆ ಮುಗಿದ ಬೆನ್ನಲ್ಲೆ ಮಾಜಿ ಡಿಸಿಎಂ ಈಶ್ವರಪ್ಪ ಬಾಗಲಕೋಟೆಯಲ್ಲಿ ಜೂನ್ 25 ರಂದು ಸಭೆ ಕರೆದಿದ್ದಾರೆ. ಉತ್ತರ ಕನಾ೯ಟಕದ 4 ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ ಜಿಲ್ಲೆಗಳ ನಾಯಕರ ಸಭೆ ಕರೆದಿದ್ದಾರೆ. ಈಶ್ವರಪ್ಪ ಕರೆದ ಸಭೆಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಒಳಗೊಳಗೆ ಅಪಸ್ವರ ಎದ್ದಿದೆ.
ಚುನಾವಣೆಯಲ್ಲಿ ಬ್ರಿಗೇಡ್’ನಲ್ಲಿದ್ದವರಿಗೆ ಟಿಕೆಟ್ ನೀಡದೇ ಇದ್ದದ್ದು, ಅಸಮಾಧಾನಗೊಂಡು ಕಾಂಗ್ರೆಸ್ ಗೆ ಹೋಗುವವರನ್ನ ತಡೆಯದೇ ಇದ್ದದ್ದು, ಈ ಹಿಂದೆ ಬಿಜೆಪಿ ಸೂಚನೆಯಂತೆ ದೂರ ಉಳಿದಿದ್ದ ಬ್ರಿಗೇಡ್ ಈಶ್ವರಪ್ಪ ಗೆ ಮಾತ್ರ ಟಿಕೆಟ್ ನೀಡೋಕೆ ಸೀಮಿತವಾಗಿದ್ದು ಪಕ್ಷದೊಳಗಿನ ಅಸಮಾಧಾನಕ್ಕೆ ಕಾರಣವಾಗಿದೆ.
ಬಾಗಲಕೋಟೆಯಲ್ಲಿ ಜೂನ್ 25 ರಂದು ಪರಿವೀಕ್ಷಣಾ ಮಂದಿರದಲ್ಲಿ ಸಭೆ ನಡೆಯಲಿದೆ. ಇದೀಗ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚುರುಕುಗೊಂಡಿದೆ. ಮತ್ತೆ ಬಿಜೆಪಿ ಗೆ ತಲೆನೋವಾಗುತ್ತಾ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎನ್ನುವುದು ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.