
ಲಕ್ನೋ[ಜೂ.23] ರಜೆ ಕೇಳಿದ್ದಕ್ಕೆ ಹಿರಿಯ ಅಧಿಕಾರಿ ರಜೆ ನೀಡದಿದ್ದಾಗ ಆತ್ಮಹತ್ಯೆ ಲೆಟರ್ ಬರೆದ ಸುದ್ದಿಯನ್ನು ನೋಡಿದ್ದೇವೆ. ಕೇಳಿದ್ದೇವೆ. ಆದರೆ ಇಲ್ಲೊಬ್ಬ ಉತ್ತರ ಪ್ರದೇಶದ ಪೇದೆಗೆ ಆತನ ಹಿರಿಯ ಅಧಿಕಾರಿ ರಜೆ ನೀಡಿದ ಕಾರಣ ವಿಚಿತ್ರವಾಗಿದೆ. ಆತನ ರಜಾ ಅರ್ಜಿ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಹಾಗಾದರೆ ರಜೆ ಕೇಳಲು ಆತ ನೀಡಿದ ಕಾರಣ ಏನು? ಮುಂದಕ್ಕೆ ಓದಿ
ಮಹೋಬಾ ಕೋಟಿವಾಲ್ ಸ್ಟೇಶನ್‌ನ ಪೇದೆ ತನ್ನ ಸಂಸಾರ ‘ವಿಸ್ತರಣೆ’ ಮಾಡುವ ಮಹದುದ್ದೇಶದಿಂದ 30 ದಿನಗಳ ರಜೆ ಕೇಳಿದ್ದಾರೆ. ಇದನ್ನು ಒಪ್ಪಿಕೊಂಡ ಇನ್ಸ್‌ಪೆಕ್ಟರ್ ಜುನ್ 23 ರಿಂದ ಅನ್ವಯವಾಗುವಂತೆ ಬರೋಬ್ಬರಿ 45 ದಿನಗಳ ರಜೆ ದಯಪಾಲಿಸಿದ್ದಾರೆ.
ಅರ್ಜಿ ಹಾಕಿದ ಸೋಮ್ ಸಿಂಗ್‌ಗೆ ಸಖತ್ ಖುಷಿಖುಷಿಯಾಗಿ ಮನೆಗೆ ಹೋಗಿದ್ದಾರೆ. ಆದರೆ ಮೊದಲು ಸಂಸಾರ ಮಾಡಲು ಎಂದು ನೀಡಿದ್ದ ಕಾರಣವನ್ನು ಹಿರಿಯ ಅಧಿಕಾರಿಗಳ ಒತ್ತಡದ ಮೇರೆಗೆ ಬದಲಾಯಿಸಲಾಗಿದೆಯಂತೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.