ಹಿಂದೂ ದೇವಾಲಯಗಳ ಹುಂಡಿ ಹಣ: ಹೈಕೋರ್ಟ್ ಹೇಳಿದ್ದೇನು?

By Web DeskFirst Published Sep 28, 2018, 2:59 PM IST
Highlights

ರಾಜ್ಯದ 81 ಅಧಿಸೂಚಿತ ದೇವಾಲಯಗಳ ಹುಂಡಿ ಹಣವನ್ನು ಸಿಎಂ ಪರಿಹಾರ ನಿಧಿಗೆ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ. 

ಬೆಂಗಳೂರು, [ಸೆ. 28]: ರಾಜ್ಯದ 81 ಅಧಿಸೂಚಿತ ದೇವಾಲಯಗಳ ಹುಂಡಿ ಹಣವನ್ನು ಸಿಎಂ ಪರಿಹಾರ ನಿಧಿಗೆ ವರ್ಗಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ. 

ಈ ಹಿಂದೆ ನೀಡಿದ್ದ ಆದೇಶವನ್ನ ಮಾರ್ಪಾಡುಗೊಳಿಸಿರುವ ಸರ್ಕಾರ ದೇವಾಲಯಗಳು ಸ್ವಯಿಚ್ಛೆಯಿಂದ ಸಿಎಂ ಪರಿಹಾರ ‌ನಿಧಿಗೆ ಹುಂಡಿ ಹಣ ನೀಡಬಹುದು ಎಂದು ಮಾರ್ಪಾಡುಗೊಳಿಸಿರುವ ಹಿನ್ನೆಲೆಯಲ್ಲಿ ಅರ್ಜಿ ಇತ್ಯರ್ಥಪಡಿಸಲಾಗಿದೆ.

ಮಾನವೀಯತೆಗಿಂತ ಧರ್ಮ ದೊಡ್ಡದಲ್ಲ. ದೇವಾಲಯಗಳಿಗೆ ನೀವು ದೇಣಿಗೆ ನೀಡಿದ್ದೀರೋ ಅಥವಾ ಠೇವಣಿ ಇಟ್ಟಿದ್ದೀರೋ..? ಎಂದು ಅರ್ಜಿದಾರರ ಪರ ವಕೀಲರಿಗೆ ಸಿಜೆ ಪ್ರಶ್ನಿಸಿದ್ದಾರೆ. 

ಒಮ್ಮೆ ದಾನ ನೀಡಿದರೆ ಪ್ರತಿಯಾಗಿ ಏನನ್ನೂ ಬಯಸಬಾರದು. ನಾವು ಕೊಡುವ ದೇಣಿಗೆಯನ್ನು ನಾವು ಗೌರವಿಸಬೇಕು. ಶಾಸ್ತ್ರಗಳೂ ಇದನ್ನೇ ಹೇಳುತ್ತವೆ. ಮಾನವೀಯತೆ ಇಲ್ಲದೆ ಧರ್ಮವಿಲ್ಲ.  ದೇವಾಲಯದ ಹಣವನ್ನು ಮಾನವೀಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

 ಅದರಿಂದ ನಿಜಕ್ಕೂ ತೊಂದರೆಯಾಗಿರುವವರು ಸಂಬಂಧಪಟ್ಟ ಪ್ರಾಧಿಕಾರಗಳ ಮುಂದೆ ಮನವಿ ಸಲ್ಲಿಸಲಿ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

click me!