ಮಗುವಿನ ನಾಮಕರಣಕ್ಕೆ ನಡೆಯಿತು ಚುನಾವಣೆ!

First Published Jun 19, 2018, 7:27 PM IST
Highlights

ಅಲ್ಲಿ ಚುನಾವಣೆ ನಡೆದಿತ್ತು. ಆದರೆ ಎಂಎಲ್ ಸ್ಥಾನಕ್ಕಲ್ಲ, ಎಂಪಿಗೂ ಅಲ್ಲ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಸಹಕಾರಿ ಸಂಘ.. ಊಹೂ ಯಾವುದಕ್ಕೂ ಅಲ್ಲ... ಆದರೆ ಚುನಾವಣೆ ನಡೆದು ಫಲಿತಾಂಶವೂ ಹೊರಬಂದಿತ್ತು.

ಮುಂಬೈ [ಜೂನ್ 19] ಅಲ್ಲಿ ಚುನಾವಣೆ ನಡೆದಿತ್ತು. ಆದರೆ ಎಂಎಲ್ ಸ್ಥಾನಕ್ಕಲ್ಲ, ಎಂಪಿಗೂ ಅಲ್ಲ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಸಹಕಾರಿ ಸಂಘ.. ಊಹೂ ಯಾವುದಕ್ಕೂ ಅಲ್ಲ... ಆದರೆ ಚುನಾವಣೆ ನಡೆದು ಫಲಿತಾಂಶವೂ ಹೊರಬಂದಿತ್ತು.

ಹಾಗಾದರೆ ಯಾವುದಪ್ಪಾ ಈ ಚುನಾವಣೆ ಅಂತೀರಾ?ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯಲ್ಲಿ ಮಗುವಿಗೆ ನಾಮಕರಣ ಮಾಡಲು ಚುನಾವಣೆ ಮಾಡಲಾಗಿದೆ.

ಮಿಥುನ್ ಮತ್ತು ಮಾನ್ಸಿ ಬಂಗ್ ಎನ್ನುವ ದಂಪತಿ ತಮ್ಮ ಗಂಡು ಮಗುವಿಗೆ ಹೆಸರಿಡಲು ಸ್ನೇಹಿತರು ಮತ್ತು ಬಂಧು ಬಳಗದಿಂದ ಹೆಸರುಗಳನ್ನು ಆಹ್ವಾನಿಸಿದ್ದರು. ಅಂತಿಮವಾಗಿ ಯಾವ ಹೆಸರು ಆಯ್ಕೆ ಮಾಡಬೇಕು ಎಂಬ ಗೊಂದಲ ಉಂಟಾಗಿದೆ. ಹಾಗಾದರೆ ಏನು ಮಾಡುವುದು ಎಂದಾಗ ಚುನಾವಣೆ ಮೊರೆ ಹೋಗಿದ್ದಾರೆ. ಏಪ್ರಿಲ್ 5 ರಂದು ಜನಿಸಿದ ಮಗುವಿಗೆ ಹೆಸರಿಡಲು ಜೂನ್ 15 ರಂದು ಚುನಾವಣೆ ನಡೆದಿದೆ. ಸ್ನೇಹಿತರು ಮತ್ತು ಸಂಬಂಧಿಕರು ಬ್ಯಾಲೆಟ್ ಪೇಪರ್ ನಲ್ಲಿ ಮತ ಹಾಕಿದ್ದಾರೆ. ಬಾಲಕ್ ನಾಮ್ ಚಯನ್ ಆಯೋಗ ಚುನಾವಣೆ ನಡೆಸಿದೆ.

ಯಕ್ಷ್, ಯುವನ್ ಮತ್ತು ಯವಿಕ್ ಎಂಬ ಹೆಸರುಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದವು. ಒಟ್ಟು 192 ಮತಗಳು ಚಲಾವಣೆಯಾಗಿದ್ದು 92 ಮತ ಪಡೆದ ಯುವನ್ ಹೆಸರು ಅಂತಿಮವಾಗಿ ಆಯ್ಕೆಯಾಯಿತು. 

 

click me!