
ಬೆಂಗಳೂರು(ಜೂ.19): ಗಾಂಜಾ ಮತ್ತಿತರ ಮಾದಕ ದ್ರವ್ಯ ವಸ್ತುಗಳು ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಇಂದಿನ ಯುವಪೀಳಿಗೆಯಲ್ಲಿ ಬಹುತೇಕರು ಈ ದುಶ್ಚಟಗಳ ದಾಸರಾಗಿದ್ದಾರೆ.
ಇದೇ ವೇಳೆ ಗಾಂಜಾ ಸೇರಿದಂತೆ ಇತರ ಮಾದಕ ವಸ್ತುಗಳು ಮನುಷ್ಯನ ಮೇಲೆ ಬೀರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳ ಕುರಿತು ಎಲ್ಲೆಡೆ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಅದರಂತೆ ನೂತನ ಸಂಶೋಧನೆ ಪ್ರಕಾರ ಗಾಂಜಾ(ಮರಿಜುವಾನಾ) ಸೇವಿಸುವ ಪುರುಷ ಮತ್ತು ಮಹಿಳೆಯರಲ್ಲಿ ಕಾಮೋತ್ತೇಜನ ಇತರರಿಗಿಂತ ಹೆಚ್ಚು ಎಂಬ ಅಂಶ ಬೆಳಕಿಗೆ ಬಂದಿದೆ.
ನೂತನ ಸಂಶೋಧನೆ ಪ್ರಕಾರ ಗಾಂಜಾ ಸೇವಿಸುವವರಲ್ಲಿ ಇತರರಿಗಿಂತೆ ಶೇ.20 ರಷ್ಟು ಹೆಚ್ಚು ಕಾಮೋತ್ತೇಜನ ಇರುತ್ತದೆ. ಗಾಂಜಾ ಸೇವನೆಯ ಕೇವಲ ನಾಲ್ಕು ವಾರಗಳಲ್ಲೇ ಇವರಲ್ಲಿ ಕಾಮೋತ್ತೇಜನ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಸಂಶೋಧನೆ ಹೇಳಿದೆ.
ಇದಕ್ಕೆ ಕಾರಣವನ್ನೂ ನೀಡಿರುವ ಸಂಶೋಧಕರು, ಗಾಂಜಾ ಸೇವನೆ ಬಳಿಕ ಮಿಲನದ ಆಸೆ ಹೆಚ್ಚಾಗುತ್ತದೆ. ಅಲ್ಲದೇ ಸಾಮಾನ್ಯ ವೇಳೆಯಲ್ಲಿ ಹೆಚ್ಚು ದೈಹಿಕ ಪರಿಶ್ರಮ ಹಾಕುವ ಅನಿವಾರ್ಯತೆ ಗಾಂಜಾ ಸೇವನೆ ಬಳಿಕ ಇರುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಆದರೆ ನಿರಂತರ ಗಾಂಜಾ ಸೇವನೆ ಮಹಿಳೆಯರಲ್ಲಿ ಬಂಜೆತನ ಮತ್ತು ಹೆರಿಗೆ ಸಂದರ್ಭದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.