ತಿಂಗಳಿಗೆ 15 ಸಾವಿರ ಸಂಬಳ: ಭೇಟಿ ನೀಡಿ ಎಸ್‌ಬಿಐ ಅಂಗಳ

First Published May 29, 2018, 2:16 PM IST
Highlights

ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ಯುವಕರಿಗಾಗಿ ಭರ್ಜರಿ ಆಫರ್ ನೀಡಿದೆ. ಎಸ್.ಬಿ.ಐ ಯೂತ್ ಫಾರ್ ಇಂಡಿಯಾ ಫೆಲೋಶಿಪ್  ಅಡಿ ತಿಂಗಳಿಗೆ 15 ಸಾವಿರ ರೂ. ಸಂಬಳದ ಯೋಜನೆ ಘೋಷಿಸಿದೆ.

ನವದೆಹಲಿ (ಮೇ 29): ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ಯುವಕರಿಗಾಗಿ ಭರ್ಜರಿ ಆಫರ್ ನೀಡಿದೆ. ಎಸ್.ಬಿ.ಐ ಯೂತ್ ಫಾರ್ ಇಂಡಿಯಾ ಫೆಲೋಶಿಪ್  ಅಡಿ ತಿಂಗಳಿಗೆ 15 ಸಾವಿರ ರೂ. ಸಂಬಳದ ಯೋಜನೆ ಘೋಷಿಸಿದೆ.

ಈ ಪ್ರಕಾರ 13 ತಿಂಗಳ ಫೆಲೋಷಿಪ್ ಪ್ರೋಗ್ರಾಮ್ ನ್ನು ಯುವಕರು ಪೂರ್ಣಗೊಳಿಸಬೇಕಾಗುತ್ತದೆ. ಗ್ರಾಮೀಣ ಭಾಗದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು, ಸ್ವಚ್ಛತೆಯ ಕುರಿತು ಜಾಗೃತಯಿ ಅಭಿಯಾನ ಹಮ್ಮಿಕೊಳ್ಳುವುದು ಹೀಗೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಈ ಕಾರ್ಯದಲ್ಲಿ ಖಾಸಗಿ ಎನ್ ಜಿಓ ಕೂಡ ಎಸ್ ಬಿಐ ಗೆ ಸಾಥ್ ನೀಡಲಿದೆ.

21 ರಿಂದ 32 ವರ್ಷ ವಯಸ್ಸಿನ ಯುವಕರು ಈ ಯೋಜನೆಗೆ ಅರ್ಹರಾಗಿದ್ದು, ಕಳೆದ ಮಾರ್ಚ್ ನಿಂದಲೇ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಜೂನ್ 5 ರ ವರೆಗೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಲಾಗಿದ್ದು, ತಿಂಗಳಿಗೆ 15 ಸಾವಿರ ರೂ. ಸಂಬಳದ ಜೊತೆಗೆ ಸಾರಿಗೆ ವೆಚ್ಛವಾಗಿ 1 ಸಾವಿರ ರೂ. ಹೆಚ್ಚಿಗೆ ನೀಡಲಾಗುವುದು ಎಂದು ಎಸ್ ಬಿಐ ತಿಳಿಸಿದೆ.

ಆಸಕ್ತರು www.youthforindia.org ಈ ವೆಬ್ ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

click me!