ರಾಜ್ಯದಲ್ಲಿ ಸಂಪುಟ ಸರ್ಕಸ್: ರಾಹುಲ್ ಇಸ್ ನಾಟ್ ಸೀರಿಯಸ್

First Published May 29, 2018, 2:07 PM IST
Highlights

ಕರ್ನಾಟಕದ ಸಂಪುಟ ಮಾತುಕತೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ಅಮೆರಿಕಕ್ಕೆ ಹೋಗಿರುವುದು ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ತೀವ್ರ ಇರಿಸು ಮುರುಸು ತಂದಿದೆ.

ರಾಹುಲ್ ಇಸ್ ನಾಟ್ ಸೀರಿಯಸ್

ಕರ್ನಾಟಕದ ಸಂಪುಟ ಮಾತುಕತೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ಅಮೆರಿಕಕ್ಕೆ ಹೋಗಿರುವುದು ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ತೀವ್ರ ಇರಿಸು ಮುರುಸು ತಂದಿದೆ. ದೇಶದಲ್ಲಿಯೇ ಕಾಂಗ್ರೆಸ್ ನಾಮವಶೇಷ ಆಗುತ್ತಿರುವಾಗ ಬಂದಿರುವ ಒಂದು ಸರ್ಕಾರವನ್ನು ದಡಕ್ಕೆ ಹಚ್ಚದೇ ಅಮೆರಿಕಕ್ಕೆ ಹಾರಿರುವುದು ರಾಜ್ಯದ ನಾಯಕರಿಗೆ ಬೇಸರ ತಂದಿದೆ.ರಾಹುಲ್ ಇಸ್ ನಾಟ್ ಸೀರಿಯಸ್ ಎಂದು ಎಲ್ಲರೂ ಖಾಸಗಿಯಾಗಿ ಹೇಳುತ್ತಿದ್ದಾರೆ.

Latest Videos

ಉಗ್ರಪ್ಪ ಮತ್ತು ಗುರೂಜಿ

ಉಗ್ರಪ್ಪ ಇಲ್ಲಿಯವರೆಗೆ ಜ್ಯೋತಿಷ್ಯ ಭವಿಷ್ಯ ಎಲ್ಲ ನಂಬುತ್ತಿರಲಿಲ್ಲವಂತೆ. . ಆದರೆ ಕುಮಾರಸ್ವಾಮಿ ಅದ್ರಷ್ಟಾ ನೋಡಿ ಉಗ್ರಪ್ಪ ನವರಿಗೂ ಸ್ವಲ್ಪ ಭವಿಷ್ಯದ ಜ್ಯೋತಿಷಿ ಗಳ ಬಗ್ಗೆ ನಂಬಿಕೆ ಬರಲು ಆರಂಭವಾಗಿದೆ . ಹೀಗಾಗಿ ಇತ್ತೀಚ್ಛೆಗೆ ಯಾರೋ ಬೆಂಬಲಿಗರು ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಪಕ್ಕಾ ಹೇಳಿದ್ದ ವಿನಯ್ ಗುರೂಜಿ ಹತ್ತಿರ ಹೋಗಿ ಒಂದು ಗಂಟೆ ಮಾತನಾಡಿಕೊಂಡು ಬಂದರಂತೆ.

ತಿಮ್ಮಪುರ ಈಗ ಬೇಡ

ಪ್ರತಿ ಬಾರಿ ಸಂಪುಟ ವಿಸ್ತರಣೆ ನಡೆದಾಗ ದಲಿತ ಎಡ ವರ್ಗಕ್ಕೆ ಆರ್ ಬಿ ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ಓಡಾಡುತ್ತಿದ್ದ ಕೆ ಎಚ್ ಮುನಿಯಪ್ಪ ಈ ಸಲ ಮಾತ್ರ ತನ್ನ ಶಿಷ್ಯ ತಿಮ್ಮಾಪುರ ಬೇಡ ದಲಿತ ಎಡ್ ಕೋಟಾ ದಲ್ಲಿ ತನ್ನ ಮಗಳು ರೂಪ ಶಶಿಧರ್ ಗೆ ಮಂತ್ರಿ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ. ಮುನಿಯಪ್ಪ ಅವರ ದಲಿತ ಎಡ  ಶಿಷ್ಯಂದಿರು ಈ ಬಾರಿ ಗುರು ಪುತ್ರಿಗೆ ಕೊಡಬೇಡಿ ಎಂದು ಓಡಾಡುತ್ತಿದ್ದಾರೆ.

ಡ್ಯಾನಿಷ್‌ಗೆ 37ರ ನಿರಾಸೆ

ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಇಂದ ದೇವೇಗೌಡರಿಗೆ ರಾಜಕೀಯ ಲಾಭ ಏನು ಇಲ್ಲವಾದರೂ ಕೂಡ ಅದೇನೋ ದಿಲ್ಲಿಗೆ ಬಂದಾಗ ಮುಸ್ಲಿಂ ಮುಖ ಇರಬೇಕು ಎಂದು ಇಟ್ಟು ಕೊಂಡಿದ್ದು ಆದರೆ ಎಷ್ಟೇ ಕೇಳಿಕೊಂಡರು ಅಧಿಕಾರ ಮಾತ್ರ ಕೊಟ್ಟಿಲ್ಲ.ಈ ಬಾರಿಯೂ ಜೆ ಡಿ ಎಸ್ ಗೆ 45 ಕ್ಕಿಂತ ಹೆಚ್ಚಿಗೆ ಬಂದರೆ ರಾಜ್ಯಸಭಾ ಸಿಗಬಹುದು ಎಂದು ಉತ್ಸಾಹದಲ್ಲಿದ್ದ ಡ್ಯಾನಿಷ್ ಅಲಿ 37 ಬಂದಿದ್ದು ನೋಡಿ ತುಂಬಾ ಬೇಸರಗೊಂಡಿದ್ದಾರೆ.ಇನ್ನು ಗಾಯದ ಮೇಲೆ ಉಪ್ಪು ಎಂಬಂತೆ ಕುಮಾರಸ್ವಾಮಿ ಇನ್ನೊಬ್ಬ ಮುಸ್ಲಿಂ ಫಾರೂಕ್ ರನ್ನು ಮಂತ್ರಿ ಮಾಡುತ್ತಿರುವುದು ಡ್ಯಾನಿಷ್ ಅಲಿಗೆ ಬಹಳ ಬೇಜರಾಗಿದೆ ಅಂತೆ.

ಮಹಾತ್ಮನ ಸಮಾಧಿ ಎದುರು

2009ರಲ್ಲಿ ದೇವೇಗೌಡರು ದೆಹಲಿಯಲ್ಲಿ ಯಮುನೆಯ ಪಕ್ಕದಲ್ಲಿರುವ ರಾಜಘಾಟ್ ನಲ್ಲಿರುವ ಮಹಾತ್ಮಾ ಗಾಂಧಿ ಸಮಾಧಿ ಎದುರು ಧರಣಿ ಕುಳಿತು ಮಗ ಬಿಜೆಪಿ ಜೊತೆ ಹೋಗಿದ್ದಕ್ಕೆ ಪಶ್ಚಾತ್ತಾಪ ಸತ್ಯಾಗ್ರಹ ಎಂದು ಹೇಳಿಕೊಂಡಿದ್ದರು. ಇದನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದ ಮಗ ಕುಮಾರಸ್ವಾಮಿ ದೆಹಲಿಗೆ ಬಂದು ಮಾಡಿದ ಮೊದಲ ಕೆಲಸ ಮಹಾತ್ಮನ ಸಮಾಧಿಗೆ ಪುಷ್ಪ ನಮನ.

ಕನ್ನಡ ಪ್ರಭದಲ್ಲಿ ಪ್ರಕಟವಾದ ಸುವರ್ಣ ನ್ಯೂಸ್ ದಿಲ್ಲಿ ವಿಶೇಷ ಪ್ರತಿನಿಧಿ ಪ್ರಶಾಂತ್ ನಾತು ಅವರ 'ಇಂಡಿಯಾ ಗೇಟ್' ಅಂಕಣದ ಆಯ್ದ ಭಾಗವಿದು.

click me!