ಕೀರ್ತಿಗೆ ನಾಗರತ್ನರಿಂದ ಕೊಲೆ ಬೆದರಿಕೆ : ಪೊಲೀಸರಿಗೆ ದುನಿಯಾ ವಿಜಯ್ ಪತ್ರ

Published : Sep 30, 2018, 08:57 PM ISTUpdated : Oct 01, 2018, 09:42 AM IST
ಕೀರ್ತಿಗೆ ನಾಗರತ್ನರಿಂದ ಕೊಲೆ ಬೆದರಿಕೆ : ಪೊಲೀಸರಿಗೆ ದುನಿಯಾ ವಿಜಯ್ ಪತ್ರ

ಸಾರಾಂಶ

ಸೆ.23 ರಂದು ನಾಗರತ್ನರವರು  ಕೀರ್ತಿಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಇಂದು ನನ್ನನ್ನು ಭೇಟಿ ಮಾಡಲು ಬರುವ ಸಮಯದಲ್ಲಿ ಕಾರಿನ ಚಾಲಕ  ಮಹಮ್ಮದ್  ಅವರಿಗೆ ಕರೆ ಮಾಡಿ  ಕೀರ್ತಿಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧಮಕಿ ಹಾಕಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ಈ ಕಾರಣದಿಂದ ಕೀರ್ತಿ ಅವರು ಸಹ ಮಾನಸಿಕವಾಗಿ ನೊಂದಿದ್ದು ಮತ್ತೇ ಇದೇ ರೀತಿಯ ಘಟನೆ ಜರುಗಿದರೆ ಆತ್ಮಹತ್ಯೆ  ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಬೆಂಗಳೂರು[ಸೆ.30]: ತನ್ನ ಎರಡನೇ ಹೆಂಡತಿ ಕೀರ್ತಿ ಗೌಡಳಿಗೆ ಮೊದಲ ಪತ್ನಿ ನಾಗರತ್ನಳಿಂದ ಜೀವ ಬೆದರಿಕೆಯಿದ್ದು ರಕ್ಷಣೆ ಒದಗಿಸುವಂತೆ ನಟ ದುನಿಯಾ ವಿಜಯ್ ಅವರು ಗಿರಿನಗರ ಪೊಲೀಸ್ ಠಾಣೆಗೆ ಪರಪ್ಪನ ಅಗ್ರಹಾರದ ಜೈಲಿನಿಂದಲೇ ಪತ್ರ ಬರೆದಿದ್ದಾರೆ.

ಸೆ.23 ರಂದು ನಾಗರತ್ನರವರು ಕೀರ್ತಿಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಇಂದು ನನ್ನನ್ನು ಭೇಟಿ ಮಾಡಲು ಬರುವ ಸಮಯದಲ್ಲಿ ಕಾರಿನ ಚಾಲಕ ಮಹಮ್ಮದ್  ಅವರಿಗೆ ಕರೆ ಮಾಡಿ  ಕೀರ್ತಿಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧಮಕಿ ಹಾಕಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ಈ ಕಾರಣದಿಂದ ಕೀರ್ತಿ ಅವರು ಸಹ ಮಾನಸಿಕವಾಗಿ ನೊಂದಿದ್ದು ಮತ್ತೇ ಇದೇ ರೀತಿಯ ಘಟನೆ ಜರುಗಿದರೆ ಆತ್ಮಹತ್ಯೆ  ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಒಂದು ವೇಳೆ  ಕೀರ್ತಿಯವರಿಗೆ ಏನಾದರೂ ತೊಂದರೆಯಾದಲ್ಲಿ ಅದಕ್ಕೆ ನಾಗರತ್ನರವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಕಾರಣದಿಂದ ಕೀರ್ತಿ ಗೌಡ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ

ಜಿಮ್ ತರಬೇತುದಾರ ಮಾರುತಿ ಗೌಡ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಳೆದ ಒಂದು ವಾರದಿಂದ ದುನಿಯಾ ವಿಜಯ್ ಹಾಗೂ ಮೂವರು ಸಹಚರರು ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದು ಅ.1ರಂದು ಮತ್ತೇ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉ.ಕ. ಪರ ಕೇಂದ್ರಕ್ಕೆ ಅಸೆಂಬ್ಲಿ 7 ನಿರ್ಣಯ
ಚುನಾವಣಾ ಆಯೋಗ ಆದೇಶಕ್ಕೂ ಮೊದಲೇ ಧಾರವಾಡದಲ್ಲಿ ಎಸ್ಐಆರ್