
ನವದೆಹಲಿ(ಸೆ.30): ಭಾರತಕ್ಕೆ ಶಾಂತಿ ಮುಖ್ಯ, ಆದರೆ ನಮ್ಮ ಆತ್ಮ ಗೌರವವನ್ನು ಬಲಿ ಕೊಡುವ ಮೂಲಕವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ ಅದಕ್ಕಾಗಿ ನಮ್ಮ ಆತ್ಮಗೌರವವನ್ನು ಬಲಿ ಕೊಡುವುದಿಲ್ಲ. ಬಹುಶಃ ನಮ್ಮ ಸೈನಿಕರು ಯಾವುದೇ ಪರಿಸ್ಥಿತಿಗೂ ಸೂಕ್ತ ಉತ್ತರ ನೀಡಲಿದ್ದಾರೆ ಎಂಬುದು ಬಹುಶಃ ಎಲ್ಲರಿಗೂ ಅರ್ಥವಾಗಿರಬೇಕು ಎಂದು ಮೋದಿ ಪಾಕಿಸ್ತಾನವನ್ನು ಚುಚ್ಚಿದ್ದಾರೆ.
ಎಂತಹುದೇ ಪರಿಸ್ಥಿತಿಯಲ್ಲಿ ಭಾರತದ ಶಾಂತಿ ಕದಡಲು ನಮ್ಮ ಸೈನಿಕರು ಅನುವು ಮಾಡಿಕೊಡುವುದಿಲ್ಲ. ಶಾಂತಿಗೆ ನಾವು ಖಂಡಿತಾ ಬದ್ಧ ಆದರೆ, ಸ್ವಾಭಿಮಾನ ಮತ್ತು ಸಾರ್ವಭೌಮತ್ವದ ಬಲಿ ಕೊಡುವುದರಲ್ಲಿ ಅರ್ಥವಿಲ್ಲ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಭಾರತೀಯ ಸೇನೆ ಮತ್ತು ಗಡಿ ಭದ್ರತೆ ಕುರಿತು ಮಾತನಾಡಿದರು. ಭಾರತದ ಪ್ರತೀಯೋರ್ವ ಯುವಕನೂ ಭಾರತೀಯ ಸೇನೆ ಕುರಿತು ಅರಿಯಬೇಕು ಎಂದು ಹೇಳಿದರು. ವಿಶ್ವಯುದ್ಧದ ಸಂದರ್ಭದಲ್ಲಿ ದೇಶದ 2 ಲಕ್ಷಕ್ಕೂ ಅಧಿಕ ಮಂದಿ ಸೈನಿಕರು ಬಲಿದಾನ ಮಾಡಿದ್ದಾರೆ. ನಮ್ಮ ಧ್ಯೇಯ ಕೇವಲ ವಿಶ್ವಶಾಂತಿ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.