
ಕೋಲ್ಕತ್ತಾ(ಜು.29): ಸಂಚಾರ ನಿಯಮ ಉಲಂಘನೆ ಪ್ರಶ್ನಿಸಿದ ಪೊಲೀಸ್ ಗೆ ಸಿಕ್ಕಿದೆ ಬಂಪರ್ ಆಫರವೊಂದು ಸಿಕ್ಕಿದೆ. ಮದ್ಯದ ಅಮಲಿನಲ್ಲಿ ಕಾರು ಓಡಿಸಿಕೊಂಡು ಬಂದ ಮಹಿಳೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವುದನ್ನ ಪ್ರಶ್ನಿಸಿದ ಪೊಲೀಸ್‍ಗೆ ಮುತ್ತಿನ ಮಳೆಗೆರೆದಿದ್ದಾಳೆ.
26ರಂದು ರಾತ್ರಿ ಪಾರ್ಟಿಯೊಂದರಲ್ಲಿ ಭಾಗವಹಿಸಿ ಮದ್ಯದ ಅಮಲಿನಲ್ಲಿ ಗಾಡಿ ಓಡಿಸಿಕೊಂಡು ಬಂದ 30 ಹರೆಯದ ಮಹಿಳೆಯೊಬ್ಬರು ಕೊಲ್ಕತದ ಸಾಲ್ಟ್ ಲೇಕ್ ಬಳಿಯ ರಸ್ತೆ ವಿಭಜಕಕ್ಕೆ ವಾಹನ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದುದನ್ನು ನೋಡಿ ಅಲ್ಲಿದ್ದ ಟ್ಯಾಕ್ಸಿ ಡ್ರೈವರ್ ಮಹಿಳೆಯ ಸಹಾಯಕ್ಕೆ ಆಗಮಿಸಿದಾಗ ಮಹಿಳೆ ಆ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನ ಪ್ರಶ್ನಿಸಿದಕ್ಕೆ ಟ್ರಾಫಿಕ್ ಪೊಲೀಸ್‍ನ್ನು ಆಲಿಂಗಿಸಿ ಮುತ್ತಿನ ಮಳೆಗೆರೆದ ಘಟನೆಯೊಂದು ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆ ಮತ್ತು ಓರ್ವ ವ್ಯಕ್ತಿಯನ್ನು ಪೊಲೀಸರು ಬಿದಾನ್‍ನಗರ್ ದಕ್ಷಿಣ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಮಹಿಳೆ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.