
ಕೋಳಿ ಪ್ರಿಯರೇ ಎಚ್ಚರ ! ನೀವು ತಿನ್ನುತ್ತಿರೋ ಕೋಳಿ ನಿಮ್ಮನ್ನ ರೋಗಿಗಳನ್ನಾಗಿಸಬಹುದು. ಅದು ನಿಮ್ಮ ಮೇಲೆ ಯಾವ ಔಷಧಿಯೂ ಪರಿಣಾಮ ಬೀರದಂತೆ ಮಾಡಬಹದು. ಯಾಕಂದ್ರೆ ನಮ್ಮ ಕೋಳಿ ಫಾರಂಗಳಲ್ಲಿ ಒಂದು ವಿಚಿತ್ರ ಬೆಳವಣಿಗೆ ನಡೀತಿದೆ. ಆ ಬೆಳವಣಿಗೆ ಏನು ಅನ್ನೋದನ್ನ ನಮ್ಮ ಕವರ್ಸ್ಟೋರಿ ತಂಡ ಅಧ್ಯಯನ ಮಾಡಿ ಪತ್ತೆ ಹಚ್ಚಿದೆ. ಅದರ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.
ಯಾಕಂದ್ರೆ ನೀವು ಇಷ್ಟಪಟ್ಟು ಚಪ್ಪರಿಸಿ ಚಪ್ಪರಿಸಿ ತಿನ್ನೋ ಈ ಚಿಕನ್ ನಿಮ್ಮೊಳಗಿನ ರೋಗ ನಿರೋಧಕ ಶಕ್ತಿಯನ್ನೇ ನಾಶ ಮಾಡುತ್ತಿರಬಹುದು. ನಿಮ್ಮ ಮೇಲೆ ಯಾವುದೇ ಔಷಧಿಯೇ ಕೆಲಸ ಮಾಡದಂತೆ ಮಾಡಬಹುದು. ಕೋಳಿ ಖಾದ್ಯ ನಿಮ್ಮ ಹೃದಯ, ಕಿಡ್ನಿ, ಲಿವರಿಗೆ ಇನ್ನಿಲ್ಲದ ಬೇನೆ ಕೊಡಬಹುದು. ನಾನಾ ಮಾರಣಾಂತಿಕ ಸೋಂಕು ಕಾಯಿಲೆಯಿಂದ ಕಾಡಿಸಿ, ಕಾಡಿಸಿ ಕೊಲ್ಲಬಹದು.
ನಮ್ಮ ನಾಡಿನ ಕೋಳಿ ಫಾರಂಗಳಲ್ಲಿ ಒಂದು ವಿಚಿತ್ರ ಬೆಳವಣಿಗೆ ನಡೀತಿದೆ. ಅದೇನಂದ್ರೆ ಕಾಯಿಲೆ ವಾಸಿ ಮಾಡಲು ಬಳಸಬೇಕಾದ ರೋಗ ನಿರೋಧಕ ಔಷಧಿಗಳನ್ನ ಕೋಳಿಗಳ ತೂಕ ಹೆಚ್ಚಿಸೋಕೆ ಬಳಸುತ್ತಿದ್ದಾರೆ. ಈ ಕಟುಸತ್ಯವನ್ನ ಕವರ್ಸ್ಟೋರಿ ತಂಡ ಮಾಡಿದ ರಹಸ್ಯ ಕಾರ್ಯಾಚರಣೆಯಲ್ಲಿ ಕೋಳಿ ಫಾರಂ ಮಾಲೀಕರೇ ಒಪ್ಪಿಕೊಳ್ತಾರೆ.
ಸಸ್ಯಾಹಾರಿಗಳಿಗೂ ಅಪಾಯವೇ
ಆಹಾರದ ಮೂಲಕ ಆಂಟಿ ಬಯೋಟಿಕ್ ಅನ್ನ ಕೋಳಿ ತಿನ್ನಿಸೋದ್ರಿಂದ ಸೂಪರ್ ಬಗ್ ಸಮಸ್ಯೆ ಕಾಡಬಹುದು. ಯಾವುದೇ ರೋಗಕ್ಕೆ ಔಷಧಿ ಪರಿಣಾಮ ಬೀರದೆ ದೊಡ್ಡ ದುರಂತವೇ ಸಂಭವಿಸಬಹುದು. ಆದ್ರೆ ಇಂಥಾ ಗಭೀರ ಸಮಸ್ಯೆ ಬಗ್ಗೆ ಗಮನಹರಿಸದೆ ನಮ್ಮ ರಾಜ್ಯ ಸರ್ಕಾರ ಯಾವ ಮೌನ ವಹಿಸಿರೋದು ಆತಂಕಕಾರಿ ವಿಚಾರ.
ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.