ಅಂಬರೀಷ್ ರಾಜ್ಯ ರಾಜಕಾರಣದಿಂದ ನಿವೃತ್ತಿ ಘೋಷಿಸ್ತಾರಾ? ಸಕ್ರಿಯ ರಾಜಕಾರಣದಿಂದ ದೂರ ಹೋಗಲು ಪ್ಲಾನ್ ಮಾಡಿದ್ರಾ? ಕೈ ನಿಂದ ಕಾಲ್ಕಿತ್ತು ತೆನೆ ಹೊತ್ತ ಮಹಿಳೆಯತ್ತ ಚಿತ್ತ ಹರಿಸಲಿದ್ದಾರಾ ಅಂಬರೀಶ್ ಎಂಬ ಅನುಮಾನ ಹುಟ್ಟು ಹಾಕಿದೆ.
ಮಂಡ್ಯ (ನ. 03): ಮಂಡ್ಯ ಲೋಕಸಭಾ ಉಪಚುನಾವಣೆಯ ಮತದಾನ ಬಳಿಕ ನಟ ಅಂಬರೀಶ್ , ಈ ಚುನಾವಣೆಯಲ್ಲಿ ಉತ್ಸಾಹವೇ ಇಲ್ಲ. ನಮ್ಮ ತಮ್ಮಣ್ಣ ಅವರ ಊರು ಅಂತ ಇಲ್ಲಿ ಉತ್ಸಾಹ ಇದೆ. 11 ನೇ ತಾರೀಖು ಬನ್ನಿ ಎಲ್ಲ ಹೇಳ್ತಿನಿ ಎಂದು ನಗೆ ಚಟಾಕಿ ಹಾರಿಸಿದ್ದಾರೆ ಅಂಬರೀಶ್.
ರಮ್ಯಕ್ಕಾ, ಎಲ್ಲಿದ್ದೀಯಕ್ಕ? ಇವತ್ತಾದ್ರೂ ಬಂದು ವೋಟ್ ಮಾಡಕ್ಕಾ!
undefined
ಐದಕ್ಕೆ ಐದು ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಗೆಲ್ಲಲಿದೆ. ಈಗ ಚುನಾವಣೆ ಆಗುತ್ತಿರುವುದು ಸರಿ ಇಲ್ಲ. ಮೂರು ತಿಂಗಳಿಗಾಗಿ ಚುನಾವಣೆ ನಡೆಯುತ್ತಿದೆ. ನಂತರ ಮತ್ತೇ ಚುನಾವಣೆ ಬರಲಿದ್ದು, ಈ ಚುನಾವಣೆ ಸರಿ ಇಲ್ಲ ಎಂದಿದ್ದಾರೆ.
ರಾಮನಗರ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದ ವಿಚಾರವಾಗಿ ಮಾತನಾಡುತ್ತಾ, ಈ ಬೆಳವಣಿಗೆಯೇ ಸರಿ ಇಲ್ಲ. ಆಂತರಿಕವಾಗಿ ಏನಾಗಿದೆ, ಏನು ಮಾತುಕತೆ ನಡೆದಿದೆ ಎಂಬುದು ಗೊತ್ತಿಲ್ಲ.ಯಾವುದೋ ಮನಸ್ತಾಪದಿಂದ ಹೀಗೆ ಆಗಿದೆ ಅಷ್ಟೇ ಎಂದು ಹೇಳಿದ್ದಾರೆ.
ಉಪಚುನಾವಣೆ: ಮಂಡ್ಯ ಮತದಾರರ ಲೆಕ್ಕಾಚಾರ ಹೀಗಿದೆ
ನವೆಂಬರ್ 11 ರ ನಂತರ ಸೀಕ್ರೆಟ್ ಹೇಳುತ್ತೇನೆ ಎಂದಿರುವ ಅಂಬರೀಶ್ ಹೇಳಿಕೆ ಬಗ್ಗೆ ಕುತೂಹಲ ಹೆಚ್ಚಿದೆ. ರಾಜ್ಯ ರಾಜಕಾರಣದಲ್ಲಿ ಅಂಬರೀಷ್ ಹೇಳಿಕೆ ಹೆಚ್ಚಿನ ಮಹತ್ವ ಪಡೆದಿದೆ.
ಅಂಬರೀಷ್ ರಾಜ್ಯ ರಾಜಕಾರಣದಿಂದ ನಿವೃತ್ತಿ ಘೋಷಿಸ್ತಾರಾ? ಸಕ್ರಿಯ ರಾಜಕಾರಣದಿಂದ ದೂರ ಹೋಗಲು ಪ್ಲಾನ್ ಮಾಡಿದ್ರಾ? ಕೈ ನಿಂದ ಕಾಲ್ಕಿತ್ತು ತೆನೆ ಹೊತ್ತ ಮಹಿಳೆಯತ್ತ ಚಿತ್ತ ಹರಿಸಲಿದ್ದಾರಾ ಅಂಬರೀಶ್ ಎಂಬ ಅನುಮಾನ ಹುಟ್ಟು ಹಾಕಿದೆ.