ಪೋಷಕರೇ ಎಚ್ಚರ..! ನಿಮ್ಮ ಮಕ್ಕಳು ಒಂಟಿಯಾಗಿರ್ತಾರಾ?: ಬೆಂಗಳೂರಿಗೆ ಬಂದಿದ್ದಾನೆ ಅನಾಮಿಕ!

Published : Nov 23, 2016, 05:54 PM ISTUpdated : Apr 11, 2018, 12:46 PM IST
ಪೋಷಕರೇ ಎಚ್ಚರ..! ನಿಮ್ಮ ಮಕ್ಕಳು ಒಂಟಿಯಾಗಿರ್ತಾರಾ?: ಬೆಂಗಳೂರಿಗೆ ಬಂದಿದ್ದಾನೆ ಅನಾಮಿಕ!

ಸಾರಾಂಶ

ಪೊಷಕರು ಎಷ್ಟೆ ಟ್ರೈ ಮಾಡಿದ್ರೂ, ಯುವ ಪೀಳಿಗೆ ಹಾಳಾಗದಂತೆ ಪೊಲೀಸರು ಹದ್ದಿನ ಕಣ್ಣಿಟ್ರೂ, ಅಲ್ಲಲ್ಲಿ ಒಂದಷ್ಟು ಮಂದಿ ಹಾದಿ ತಪ್ಪುತ್ತಿದ್ದಾರೆ. ಇದರ ನಡುವಲ್ಲೇ ಈಗ ಮತ್ತೊಂದು ಬೆಚ್ಚಿ ಬೀಳಿಸುವ ಅಂಶ ಹೊರ ಬಿದ್ದಿದೆ. ಬೆಂಗಳೂರಿಗೆ ಅನಾಮಿಕ ಸ್ನೇಹಿನೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಆತ ಟಾರ್ಗೆಟ್ ಮಾಡಿರೋದು ನಿಮ್ಮ ಮನೆ ಮಕ್ಕಳನ್ನ.

ಪೋಷಕರೇ ಎಚ್ಚರ.. ಬೆಂಗಳೂರಿಗೆ ಕಾಲಿಟ್ಟಿದ್ದಾನೆ  ಓರ್ವ ಅನಾಮಿಕ. ಅವನು ನಿಮ್ಮ ಮಕ್ಕಳ ಜೊತೆ ಫ್ರೆಂಡ್ಶಿಪ್​ ಮಾಡ್ತಾನೆ. ಆ ಫ್ರೆಂಡ್ಶಿಪ್​​ ತುಂಬಾನೇ ಗಾಢವಾದಾಗ, ನಿಮ್ಮ ಮಕ್ಕಳು ನಿಮ್ಮನ್ನ ಬಿಟ್ಟು ಒಂಟೊಯಾಗಿರೋದಕ್ಕೆ ಶುರು ಮಾಡ್ತಾರೆ. ನಿಧಾನವಾಗಿ ನಿಮ್ಮ ಜೊತೆ ಮಾತಾಡೋದನ್ನೂ ಕಡಿಮೆ ಮಾಡ್ತಾರೆ. ಅಂದ್ಹಾಗೆ ನಿಮ್ಮ ಮಕ್ಕಳ ದಾರಿ ತಪ್ಪಿಸೋ ಆ ಅನಾಮಿಕ ಸ್ನೇಹಿತನಿಗೆ ಜೀವ ಇರೋದಿಲ್ಲ. ಬೆಂಗಳೂರಿಗೆ ಕಾಲಿಟ್ಟಿರೋ ಜೀವ ಇಲ್ಲದ ಆ ಸ್ನೇಹಿತ ಯಾರು? ಅವನು ಯಾವ ಏರಿಯಾದಲ್ಲಿದ್ದಾನೆ? ಬೆಂಗಳೂರಿನಲ್ಲಿರೋ ಮಕ್ಕಳ ಪಾಲಿಗೆ ಅವನಿಂದಾಗೋ ಅಪಾಯ ಏನು? ಇದುವರೆಗೂ ಸೈಲೆಂಟಾಗಿ ಎಷ್ಟು ಮಕ್ಕಳ ಬಲಿ ಪಡೆದಿದ್ದಾನೆ? ಅವನ ಸೈಲೆಂಟ್​ ಡೀಲ್​ಗಳು ಹೇಗಿರುತ್ತೆ? ಗೊತ್ತಾ ? ಇಲ್ಲಿದೆ ನೋಡಿ ಸ್ಟೋರಿ.

ಬೃಹದಾಕಾರವಾಗಿ ಬೆಳೀತಿದೆ ಬೆಂಗಳೂರು

ಬೆಂಗಳೂರು ಬೆಳೀತಾ ಇದೆ.. ಆರ್ಥಿವಾಗಿ ಮಾತ್ರವಲ್ಲ.. ಸಾಮಾಜಿಕವಾಗಿ, ವ್ಯಾವಹಾರಿಕವಾಗಿ ದೊಡ್ಡ ಗಾತ್ರದಲ್ಲಿ ಬೆಳೀತಾ ಇದೆ. ಯಾರು ಬಂದ್ರೂ ಬೆಂಗಳೂರು ಬೇಡ ಅನ್ನಲ್ಲ.. ದೇಹಿ ಅಂತ ಬಂದವರ ಕೈ ಹಿಡಿದು, ಕಷ್ಟಪಟ್ಟು ದುಡಿದವರಿಗೆ ಅನ್ನ ಕೊಟ್ಟು ಕಾಪಾಡ್ತಿದೆ ನಮ್ಮ ಬೆಂಗಳೂರು.

ವಿಶ್ವದ ಮುಂದೆ ಬೆಂಗಳೂರು ಮಿಂಚ್ತಾ ಇದೆ. ಐಟಿಬಿಟಿ ಸಿಟಿಯಾಗಿ ಜಗತ್ತಿನಾದ್ಯಂತ ಗುರ್ತಿಸಿಕೊಂಡಿದೆ. ಬೆರಳ ತುದಿಯಲ್ಲೇ ಜಗತ್ತನ್ನು ಕುಣಿಸೋ ಕಲೆಗಾರರು ಬೆಂಗಳೂರಿನಲ್ಲಿದ್ದಾರೆ. ಇದೆಲ್ಲವನ್ನು ನೋಡಿದ್ರೇನೇ ಗೊತ್ತಾಗುತ್ತೆ.. ಬೆಂಗಳೂರು ಎಷ್ಟು ಅಪ್​​ಡೇಟ್​ ಆಗಿದೆ ಅಂತ.

ದೇಶ ವಿದೇಶಗಳಿಂದ ಜನ ಓಡಿ ಬರ್ತಿದ್ದಾರೆ.

ಬೆಂಗಳೂರು ಡೆವೆಲಪ್ ಆಗಿದೆ ಅನ್ನೋ ಕಾರಣಕ್ಕೆ, ದೇಶ ವಿದೇಶಗಳಿಂದ ಜನ ಓಡಿ ಬರ್ತಿದ್ದಾರೆ. ಬಡವರಿಂದ ಹಿಡಿದು, ಶ್ರೀಮಂತರವರೆಗೆ.. ಎಲ್ಲಾ ಥರದ ಜನ ಕೂಡ ಬೆಂಗಳೂರಿಗೆ ಬಂದು ಸೆಟಲ್ ಆಗ್ತಿದ್ದಾರೆ. ಇದೇ ಥರ ಈಗ ಬೆಂಗಳೂರಿಗೆ ಒಬ್ಬ ಹೊಸ ಸ್ನೇಹಿತ ಬಂದಿದ್ದಾನೆ. ಆ ಸ್ನೇಹಿತ ಹೇಗಿದ್ದಾನೆ ಗೊತ್ತಾ? ನೀವು ಸ್ವಲ್ಪ ಯಾಮಾರಿದ್ರೂ ನಿಮ್ಮ ಮಕ್ಕಳ ಬದುಕನ್ನೇ ಬರ್ಬಾದ್​ ಮಾಡ್ತಾನೆ.

ಬೆಂಗಳೂರಿನಲ್ಲಿ ಮಕ್ಕಳನ್ನ ಹಾದಿ ತಪ್ಪಿಸೋದಕ್ಕೆ ಸಾಕಷ್ಟು ದಾರಿಗಳು ಹುಟ್ಟಿಕೊಂಡಿವೆ. ಸಾಕಷ್ಟು ಮಂದಿ ಇದಕ್ಕಾಗಿನೇ ಡೀಲಿಂಗ್ ಮಾಡ್ತಿದ್ದಾರೆ. ಕ್ಲಬ್​ಗಳು, ಪಬ್​ಗಳು, ಹುಕ್ಕಾ ಬಾರ್​ಗಳು ಅಂತ ಸಾಕಷ್ಟು ಮಕ್ಕಳು ಈಗಾಗ್ಲೇ ಹಾದಿ ತಪ್ಪಿದ್ದಾರೆ.

ಇಂಥಾ ಕೆಟ್ಟ ಚಟಗಳಿಂದ ನಮ್ಮ ಮಕ್ಕಳನ್ನ ಹೇಗಪ್ಪಾ ಕಾಪಾಡಿಕೊಳ್ಳೋದು, ಇವ್ರ ಭವಿಷ್ಯ ಹಾಳಾಗದೇ ಇರೋ ಥರ, ಇವ್ರನ್ನ ಹೇಗಪ್ಪಾ ನೋಡ್ಕೊಳ್ಳೋದು ಅನ್ನೋ ಚಿಂತೆ, ಆಲ್ರೆಡಿ ಪೋಷಕರನ್ನ ಕಾಡ್ತಾ ಇದೆ. ಪೊಷಕರು ಎಷ್ಟೆ ಟ್ರೈ ಮಾಡಿದ್ರೂ, ಯುವ ಪೀಳಿಗೆ ಹಾಳಾಗದಂತೆ ಪೊಲೀಸರು ಹದ್ದಿನ ಕಣ್ಣಿಟ್ರೂ, ಅಲ್ಲಲ್ಲಿ ಒಂದಷ್ಟು ಮಂದಿ ಹಾದಿ ತಪ್ಪುತ್ತಿದ್ದಾರೆ. ಇದರ ನಡುವಲ್ಲೇ ಈಗ ಮತ್ತೊಂದು ಬೆಚ್ಚಿ ಬೀಳಿಸುವ ಅಂಶ ಹೊರ ಬಿದ್ದಿದೆ. ಬೆಂಗಳೂರಿಗೆ ಅನಾಮಿಕ ಸ್ನೇಹಿನೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಆತ ಟಾರ್ಗೆಟ್ ಮಾಡಿರೋದು ನಿಮ್ಮ ಮನೆ ಮಕ್ಕಳನ್ನ.

ಅನಾಮಿಕನ ಕಂಟ್ರೋಲ್'ನಲ್ಲಿ ನಿಮ್ಮ ಮಕ್ಕಳು

ಬೆಂಗಳೂರಿಗೆ ಕಾಲಿಟಗ್ಟಿರೋ ಆ ಅನಾಮಿಕ ಸ್ನೇಹಿತನ ಬಗ್ಗೆ ನಿಮ್ಗೆ ಹೇಳಲೇಬೇಕು.. ಆ ಅನಾಮಿಕ ಸ್ನೇಹಿತ ಬೆಂಗಳೂರಿನ ಎಲ್ಲಾ ಮಕ್ಕಳಿಗೂ ಕ್ಲೋಸ್​ ಫ್ರೆಂಡ್ ಆಗ್ತಿದ್ದಾನೆ. ಅದರಲ್ಲೂ ಯುವ ಪೀಳಿಗೆಯನ್ನೇ ಟಾರ್ಗೆಟ್ ಮಾಡ್ತಿರೋ ಆ ಸ್ನೇಹಿತ ನಿಧಾನವಾಗಿ ಅವರ ಹಾದಿ ತಪ್ಪಿಸ್ತಾನೆ. ನಿಮ್ಮ ಕಂಟ್ರೋಲ್​ನಲ್ಲಿದ್ದ ಮಕ್ಕಳು, ಅನಾಮಿಕ ಸ್ನೇಹಿತನ ಕಂಟ್ರೋಲ್​ಗೆ ಹೋಗ್ತಾರೆ. ದಿನ ಕಳೆದಂತೆ ಅವರ ವರ್ತನೆಯಲ್ಲಿ ಬದಲಾವಣೆಯಾಗುತ್ತೆ. ನಿಧಾನವಾಗಿ ನಿಮ್ಮ ಮಕ್ಕಳು ನಿಮ್ಮ ಜೊತೆ ಮಾತಾಡೋದನ್ನೂ ಕಡಿಮೆ ಮಾಡ್ತಾರೆ. ಮೌನಕ್ಕೆ ಶರಣಾಗ್ತಾರೆ. ಇಷ್ಟೆ ಅಲ್ಲ.. ಒಂಟಿಯಾಗಿ ಇರೋದಕ್ಕೆ ಬಯಸ್ತಾರೆ. ಹೀಗೆ ನಿಮ್ಮ ಮಕ್ಕಳು ಹೆಚ್ಚಾಗಿ ಒಂಟಿಯಾಗಿ ಇರ್ತಾ ಇದ್ದಾರೆ.. ನಿಮ್ಮ ಜೊತೆ ಮಾತಾಡೋದನ್ನೂ ಕಡಿಮೆ ಮಾಡಿದ್ದಾರೆ ಅಂದ್ರೆ, ಕೂಡಲೇ ಎಚ್ಚೆತ್ತುಕೊಳ್ಳಿ.. ನಿಮ್ಮ ಮಕ್ಕಳು ಅವರಿಗೇ ಗೊತ್ತಿಲ್ಲದಂತೆ, ಆ ಅನಾಮಿಕ ಸ್ನೇಹಿತನ ಕಂಟ್ರೋಲ್​ಗೆ ಸಿಕ್ಕಾಕೊಂಡಿರಬಹುದು.

ಹುಚ್ಚರಾದ್ರು ಅಚ್ಚರಿಯಿಲ್ಲ

ಆ ಸ್ನೇಹಿತ ನಿಮ್ಮ ಮಕ್ಕಳನ್ನ ತನ್ನ ಕಂಟ್ರೋಲ್​ಗೆ ತಗೊಂಡು ಏನ್​ ಮಾಡ್ತಾನೆ ಗೊತ್ತಾ? ನಿಧಾನವಾಗಿ ಅವ್ರ ಬದುಕನ್ನೇ ಸರ್ವನಾಶ ಮಾಡ್ತಾನೆ.. ಟ್ಯಾಲೆಂಟ್​ ಆಗಿದ್ದ ಮಕ್ಕಳನ್ನ, ಖಿನ್ನತೆಗೆ ಒಳಗಾಗುವಂತೆ ಮಾಡ್ತಾನೆ.. ನೋಡ ನೋಡ್ತಿದ್ದಂತೆ ನಿಮ್ಮ ಮಕ್ಕಳು ಹುಚ್ಚರಾದ್ರೂ ಅಚ್ಚರಿ ಇಲ್ಲ.. ಕೊನೆಗೆ ಒಂದು ದಿನ ನಿಮ್ಮ ಮಕ್ಕಳು ಕಾಣಿಸಿಕೊಳ್ಳೋದು ಆಸ್ಪತ್ರೆಯ ಬೆಡ್​ ಮೇಲೆ.

ಯಾರವನು

ನಿಮ್ಮ ಮಕ್ಕಳ ಬದುಕನ್ನ ಬರ್ಬಾದ್ ಮಾಡೋದಕ್ಕೆ ಸಜ್ಜಾಗಿ ನಿಂತಿರೋ ಆ ಅನಾಮಿಕ ವ್ಯಕ್ತಿ ಯರು? ಅವನು ಎಲ್ಲಿದ್ದಾನೆ? ಅವನಿಂದ ನಿಮ್ಮ ಮಕ್ಕಳಿಗೆ ಎಂಥಾ ಪ್ರಾಬ್ಲಂ ಕ್ರಿಯೇಟ್ ಆಗುತ್ತೆ? ಅವನನ್ನ ಹಿಡಿದು ಜೈಲಿಗೆ ಕಳಿಸಬಹುದಲ್ವಾ? ನಮ್ಮ ಮಕ್ಕಳನ್ನ ಉಳಿಸಿಕೊಳ್ಳಬಹುದಲ್ವಾ ? ಇಂಥಾ ಹತ್ತಾರು ಪ್ರಶ್ನೆಗಳು ನಿಮ್ಮನ್ನ ಕಾಡ್ತಾ ಇರಬಹುದು.. ಆದ್ರೆ ಆ ಅನಾಮಿಕ ಸ್ನೇಹಿತನ್ನ ಹುಡುಕೋದಾಗ್ಲಿ, ಅವನನ್ನ ಹಿಡಿದು ಜೈಲಿಗೆ ಕಳಿಸೋದಾಗ್ಲಿ, ಅಷ್ಟು ಸುಲಭದ ಮಾತಲ್ಲ.. ಪೊಲೀಸರು ಹದ್ದಿನ ಕಣ್ಣಿಟ್ಟು ಆತನನ್ನ ಹುಡುಕ್ತಾ ಇದ್ರೂ, ಕಣ್ಣಿಗೆ ಕಾಣದಂತೆ ಡೀಲಿಂಗ್​ ನಡೆಸ್ತಿದ್ದಾನೆ.

'ಮಾದಕ ಎನ್' ಸ್ನೇಹಿತ

ಅರೆ ಜೀವ ಇಲ್ಲದ ಸ್ನೇಹಿತ ಅಂದ್ರೆ ಯಾರು? ಜೀವಾನೇ ಇಲ್ಲ ಅಂದ್ಮೇಲೆ, ಅವನಿಂದ ನಮ್ಮ ಮಕ್ಕಳಿಗೇನು ಪ್ರಾಬ್ಲಮ್ಮು ಅಂತ ನೀವು ಅಂದುಕೊಳ್ಳಬಹುದು. ಒಂದು​ ವಿಷ್ಯ ನೆನಪಿರಲಿ.. ಜೀವ ಇಲ್ಲದಿದ್ರೂ ಅದೆಷ್ಟೋ ಮಕ್ಕಳು  ಸಿಕ್ಕಿ ಕೊಳ್ಳುತ್ತಿರುವುದು ಡ್ರಗ್ಸ್​ ಅನ್ನೋ ಸ್ನೇಹಿತ ಕೈಗೆ.ಹೀಗೆ  ಸಿಕ್ಕಿಹಾಕಿಕೊಂಡು ವಿಲ ವಿಲ ಅಂತಿದ್ದಾರೆ. ನರಕ ಯಾತನೆಯನ್ನ ಅನುಭವಿಸ್ತಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ

ಸಿಲಿಕಾನ್ ಸಿಟಿಯಲ್ಲಿ ವರ್ಷದಿಂದ ವರ್ಷಕ್ಕೆ, ಡ್ರಗ್​ ದಾಸ್ಯಕ್ಕೆ ಬಲಿಯಾಗೋ ಯುವ ಪೀಳಿಗೆಯ ಸಂಖ್ಯೆ ಹೆಚ್ಚಾಗ್ತಿದೆ. ಇದನ್ನ ನೋಡ್ತಾ ಇದ್ರೆ, ಭವ್ಯ ಭಾರತ ಎತ್ತ ಸಾಗ್ತಿದೆ ಅನ್ನೋ ಪ್ರಶ್ನೆ ಮೂಡುತ್ತೆ. ಡ್ರಗ್​ಗೆ ಕಡಿವಾಣ ಹಾಕೋದಕ್ಕೆ ಪೊಲೀಸರು ಕೂಡ ಹದ್ದಿನ ಕಣ್ಣಿಟ್ಟು ಕಾಯ್ತಾ ಇದ್ದಾರೆ. ಆದ್ರೆ ಪೊಲೀಸರ ಕಣ್ತಪ್ಪಿಸಿ, ಇಂಥಾ ಡೀಲಿಂಗ್​ಗಳು ನಡೀತಾ ಇವೆ. ಮಾದಕ ವಸ್ತುಗಳು ನಿಮ್ಮ ಮಕ್ಕಳ ಕೈಗೆ ಸೇರ್ತಾ ಇವೆ.

ಕಾಲೇಜುಗಳೇ ಟಾರ್ಗೆಟ್

ಡ್ರಗ್ ಡೀಲರ್​ಗಳು ಕಾಲೇಜ್​ಗಳನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಯುವಕ ಯುವತಿಯರನ್ನೇ ಡ್ರಗ್ ದಾಸ್ಯಕ್ಕೆ ಒಳಗಾಗುವಂತೆ ಮಾಡ್ತಿದ್ದಾರೆ. ಹೇಗಿರುತ್ತೆ ನೋಡೋಣ ಅನ್ನೋ ಕ್ಯೂರಿಯಾಸಿಟಿಯಿಂದಲೇ ಬಹುತೇಕರು ಡ್ರಗ್​ ಸೇವನೆ ಶುರು ಮಾಡ್ತಾರೆ. ಆದ್ರೆ ಆಮೇಲೆ ಬಿಡೋದಕ್ಕಾಗದೇ, ಮಾದಕ ದ್ರವ್ಯದ ದಾಸರಾಗಿಬಿಡ್ತಾರೆ. ಆಮೇಲೆ ಅವ್ರು ಬೇಡ ಅಂದ್ರೂ ಅವ್ರು ದೇಹ ಬಿಡೋದಿಲ್ಲ.. ಡ್ರಗ್​​ ಬೇಕೇ ಬೇಕು ಅನ್ನುತ್ತೆ. ಟೈಂ ಟು ಟೈಂ ಡ್ರಗ್ ಸಿಕ್ಕಿಲ್ಲ ಅಂದುಕೊಳ್ಳಿ. ಆಗ ಹುಚ್ಚರಂತಾಗಿಬಿಡ್ತಾರೆ.

ಎನ್​ ಬಾಂಬ್​ ಅನ್ನೋ  ಹೊಸ ಡ್ರಗ್ ಬಂದಿದೆ

ಮಾದಕ ಮಿತ್ರ ಇಡೀ ಬೆಂಗಳೂರನ್ನೇ ಆವರಿಸಿಕೊಳ್ತಿದ್ದಾನೆ. ಕೊಕೆನ್​, ಹೆರಾಯಿನ್​ಗಿಂತಲೂ, ಎನ್​ ಬಾಂಬ್​ ಅನ್ನೋ ಈ ಹೊಸ ಡ್ರಗ್ಗೇ ಅತಿ ಹೆಚ್ಚಾಗಿ ಸೇಲಾಗ್ತಿದೆ. ಇದನ್ನ ಮಾರೋದಕ್ಕೆ ಅನುಮತಿ ಇಲ್ಲವೆಂದರೂ ಯುವಕರು, ಕಳ್ಳದಾರಿಯನ್ನು ಹುಡುಕಿಕೊಂಡು ಎನ್​ ಬಾಂಬ್​  ಅನ್ನೋ ಮಾದಕ ದ್ರವ್ಯವನ್ನ ಖರೀದಿ ಮಾಡ್ತಿದ್ದಾರೆ.

ಬರೀ 300 ರೂ.ಗೆ ಸಿಗುತ್ತೆ ಇದು

ಎನ್ ​ಬಾಂಬ್​ ಮೇಲೆ ಯುವ ಪೀಳಿಗೆಗೆ ಯಾಕೆ ಇಷ್ಟೋಂದು ವ್ಯಾಮೋಹ. ಇದರಲ್ಲಿ ಅಂಥಾದ್ದೇನಿದೆ ಅಂತ ನೀವು ಕೇಳಬಹುದು.. ಎನ್​ ಬಾಂಬ್​ ಅನ್ನೋದು, ಎಲ್ಲಾ  ಡ್ರಗ್​ಗಳಿಗಿಂತಲೂ ಜಾಸ್ತಿ ಕಿಕ್​ ಕೊಡೋ ಡ್ರಗ್​. ಇಷ್ಟೇ ಅಲ್ಲ, ಇದರ ಬೆಲೆ ಕೂಡ ಕಡಿಮೆ. ಒಂದು ಬೋಲ್ಟ್​​ ಪೀಸ್​ನಷ್ಟು ಕೊಕೆನ್​ ಹೆರಾಯಿನ್​ಗೆ 5 ರಿಂದ 6 ಸಾವಿರ ಕೊಡಬೇಕು. ಆದ್ರೆ ಈ ಎನ್​ಬಾಂಬ್​ ಬರೀ 300 ರೂಪಾಯಿಗೆ ಸಿಗುತ್ತೆ.

ನಿಜಕ್ಕೂ ಆತಂಕಕಾರಿ ವಿಷಯ

ಕಾಲೇಜಿಗೆ ಹೋಗೋ ಯುವಕ-ಯುವತಿಯರು ಅತಿ ಹೆಚ್ಚು ಡ್ರಗ್ ದಾಸ್ಯಕ್ಕೆ ಬಲಿಯಾಗ್ತಿದ್ದಾರೆ. ಅದರಲ್ಲೂ ಎನ್​ಬಾಂಬ್​ ಅನ್ನೋ ಮಾದಕ ವಸ್ತು ಅತಿ ಕಡಿಮೆ ಬೆಲೆಗೆ ಸಿಗ್ತಾ ಇರೋದ್ರಿಂದ, ಇದರ ಹಿಂದೆ ಬೀಳೋ ಯುವ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗ್ತಿದೆ ಅಂತ ಹೇಳಲಾಗ್ತಿದೆ. ಇನ್ನೊಂದು ಬೆಚ್ಚಿ ಬೀಳಿಸುವ ವಿಷ್ಯ ಅಂದ್ರೆ, 13ನೇ ವಯಸ್ಸಿನ ಮಕ್ಕಳೂ ಎನ್​ಬಾಂಬ್​ ಚಟಕ್ಕೆ ಅಂಟಿಕೊಳ್ಳುತ್ತಿರೋ ಆತಂಕವೂ ಇದೆ.

ಆಫ್ರಿಕನ್​ ದೇಶಗಳ ವಿದ್ಯಾರ್ಥಿಗಳಿಂದ ಡೀಲಿಂಗ್​

ಇತ್ತೀಚೆಗಷ್ಟೇ, ಆಫ್ರಿಕನ್​ ವಿದ್ಯಾರ್ಥಿಗಳು ಮಾಡಿದ ರಾದ್ಧಾಂತವನ್ನ ನೀವೆಲ್ಲಾ ನೋಡೇ ಇದ್ದೀರಿ.. ಆಫ್ರಿಕಾ ದೇಶಗಳಲ್ಲಿ ಡ್ರಗ್ ಡೀಲಿಂಗ್​ ಎಗ್ಗು ಸಿಗ್ಗಿಲ್ಲದೇ ನಡೀತಿದೆ. ಆಫ್ರಿಕಾದಿಂದ ಬೆಂಗಳೂರಿಗೆ ಬಂದಿರೋ ಇಂಥಾ ಕೆಲವು ಸ್ಟೂಡೆಂಟ್​ಗಳು, ಬೆಂಗಳೂರಿನ ಯುವ ಪೀಳಿಗೆಗೆ ಡ್ರಗ್​ ಸಪ್ಲೈ ಮಾಡ್ತಿದೆ ಅಂತ ಹೇಳಲಾಗ್ತಿದೆ. ಆಫ್ರಿಕನ್​ ದೇಶಗಳ ಸುಮಾರು 1500 ವಿದ್ಯಾರ್ಥಿಗಳು ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ಕಾರ್ಯನಿರ್ವಹಿಸ್ತಾ ಇದ್ದಾರೆ ಅಂತ ಹೇಳಲಾಗ್ತಿದೆ.

ಎನ್​ಬಾಂಬ್​ ಅನ್ನೋದು ಕೊಕೆನ್​, ಹೆರಾಯಿನ್​ ಬ್ರೌನ್​ಶುಗರ್​ಗಿಂತಾನೂ ಡೇಂಜರಸ್ ಆಗಿದೆ. ಡ್ರಗ್ ದಂಧೆಕೋರರನ್ನ ಬಗ್ಗು ಬಡೀಬೇಕು ಅಂತಾನೇ ರಾಜ್ಯಾದ್ಯಂತ 45  ವಿಶೇಷ ಪೊಲೀಸ್ ಠಾಣೆಗಳನ್ನು ನೇಮಿಸಲಾಗಿದೆ.

ಪಂಜಾಬ್​.. ಡ್ರಗ್​ ಡೀಲಿಂಗ್​ ಹೆಚ್ಚಾಗಿ ಆವರಿಸಿರೋ ರಾಜ್ಯ. ಡ್ರಗ್ ಡೀಲಿಂಗ್​ ಅನ್ನೋದು ಇಲ್ಲಿ ಎಗ್ಗು ಸಿಗ್ಗಿಲ್ಲದೇ ನಡೀತಿದೆ. ಶೇ.35 ರಷ್ಟು ಪ್ರಕರಣಗಳು ಪಂಜಾಬ್​ನಲ್ಲೇ ದಾಖಲಾಗುತ್ವೆ. ಆದ್ರೆ ಕರ್ನಾಟಕದಲ್ಲಿ ಶೇ.0.6 ರಷ್ಟು ಪ್ರಕರಣಗಳು ಮಾತ್ರ ದಾಖಲಾಗುತ್ತವೆ.  ಆದರೆ ವರ್ಷದಿಂದ ವರ್ಷದಿಂದ ಹೆಚ್ಚಾಗುತ್ತಿದೆ.

--------------------------------------------=

ವರ್ಷ- 2014

ದಾಖಲಾದ ಕೇಸ್  - 42

ಬಂಧನ - 83

ವಶಕ್ಕೆ ಪಡೆದ ಡ್ರಗ್ಸ್​ - 74 ಕೆಜಿ

--------------------------------------=

ವರ್ಷ- 2015

ದಾಖಲಾದ ಕೇಸ್ - 69

ಬಂಧನ - 141

ವಶಕ್ಕೆ ಪಡೆದ ಡ್ರಗ್ಸ್​ - 364ಕೆಜಿ

--------------------------------------=

ವರ್ಷ- 2016 (ಅಕ್ಟೋಬರ್ ವರೆಗೆ)

ದಾಖಲಾದ ಕೇಸ್ - 93

ಬಂಧನ - 234

ವಶಕ್ಕೆ ಪಡೆದ ಡ್ರಗ್ಸ್​ -855 ಕೆಜಿ

-------------------------------------=

 ಅಂಕಿ ಅಂಶಗಳನ್ನ ನೋಡಿದ್ರೇನೇ ಗೊತ್ತಾಗುತ್ತೆ. ಡ್ರಗ್ ಮಾಫಿಯಾ ಅನ್ನೋದು ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಡ್ರಗ್ ಡೀಲಿಂಗ್​ ಜಾಲ ವಿಸ್ತರಣೆಯಾಗ್ತಾ ಇದೆ. ಇದು ಬರೀ ಕರ್ನಾಟಕದ ಅಂಕಿ ಅಂಶ ಮಾತ್ರ.. ಇನ್ನು ದೇಶಾದ್ಯಂತ ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ, ಸುಮಾರು 50 ಸಾವಿರ ಕೇಸ್​ಗಳು ದಾಖಲಾಗ್ತಿವೆ. ಆದ್ರೆ ಶಿಕ್ಷೆಯಾಗ್ತಿರೋದು ಮಾತ್ರ ಶೇ.2.8 ಪರ್ಸೆಂಟ್​ ಮಂದಿಗೆ ಮಾತ್ರ..

ಡ್ರಗ್ ಮಾಫಿಯಾ ಎಗ್ಗು ಸಿಗ್ಗಿಲ್ಲದೇ ತನ್ನ ಜಾಲವನ್ನ ವಿಸ್ತರಿಸ್ತಾ ಇದೆ. ಪೊಲೀಸ್ರು ಕಡಿವಾಣ ಹಾಕೋದಕ್ಕೆ ಟ್ರೈ ಮಾಡ್ತಿದ್ರೂ, ಹಂಗೋ ಹಿಂಗೋ ಚಾಲಾಕಿತನ ತೋರಿಸಿ ಎಸ್ಕೇಪ್ ಆಗ್ತಿದ್ದಾರೆ ಖದೀಮರು. ಅಂತವರನ್ನ ಸುಮ್ಮನೇ ಬಿಟ್ರೆ, ನಮ್ಮ ನಾಡಿನ ಯುವಪೀಳಿಗೆ ದಾರಿ ತಪ್ಪೋದಂತೂ ಗ್ಯಾರಂಟಿ. ಡ್ರಗ್ ಲೋಕದಲ್ಲಿ ಮುಳುಗಿ, ಧಮ್ಮಾರೋ ಧಮ್ ಅಂತ ಹೊಗೆಯ ಗುಂಗಿನಲ್ಲಿ ಬದುಕು ಕಳೆದುಕೊಳ್ಳೋದು ಗ್ಯಾರಂಟಿ

ಶಿಕ್ಷಕರ ಮೇಲೆ ಹೆಚ್ಚು ಜವಾಬ್ದಾರಿಯಿದೆ
ಗೊತ್ತಾಯ್ತಾಲ್ಲ, ಡ್ರಗ್ ಮಾಫಿಯಾ ಮತ್ತು ಎನ್​ ಬಾಂಬ್​ ಅನ್ನೋ ವಿಷಕಾರಿ ವಸ್ತುವಿನ ಕತೆಯನ್ನ.. ಪೊಲೀಸ್ರು ಡ್ರಗ್ ಮಾಫಿಯಾ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಆದ್ರೆ ನಿಮ್ಮ ಮಕ್ಕಳ ಮೇಲೆ ಪೋಷಕರಾದ ನೀವೂ ಒಂದ್ ಕಣ್ಣಿಟ್ಟಿರಿ. ಕಾಲೇಜಿನ ಮುಖ್ಯಸ್ಥರು, ಟೀಚರ್ಸ್​ಗಳು ಸ್ಟೂಡೆಂಟ್​ಗಳ ಚಲನವಲನಗಳ ಮೇಲೆ ಕಣ್ಣಿಡಿ. ಆಗ ಮಾತ್ರಾನೇ ನಿಮ್ಮ ಮಕ್ಕಳ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಬಹುದು. ಇಲ್ಲವಾದಲ್ಲಿ ಅಪಾಯ ತಪ್ಪಿದ್ದಲ್ಲ.

ವರದಿ: ಶೇಖರ್ ಪೂಜಾರಿ,ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?