ಸುಂಕ ಅಧಿಕಾರಿಗಳಿಂದ 974 ಕೋಟಿ ಮೌಲ್ಯದ 3223 ಕೆಜಿ ಬಂಗಾರ ವಶ!

By Web DeskFirst Published Dec 7, 2018, 12:50 PM IST
Highlights

ದೇಶಾದ್ಯಂತ ವಿವಿಧ ಭಾಗಗಳಲ್ಲಿ ಸುಂಕ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 974 ಕೋಟಿ ರು. ಮೌಲ್ಯದ 3223 ಕೆಜಿ ಅಕ್ರಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. 

ನವದೆಹಲಿ[ಡಿ.07): 2017-18ನೇ ಸಾಲಿನಲ್ಲಿ ದೇಶಾದ್ಯಂತ ವಿವಿಧ ಭಾಗಗಳಲ್ಲಿ ಸುಂಕ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 974 ಕೋಟಿ ರು. ಮೌಲ್ಯದ 3223 ಕೆಜಿ ಅಕ್ರಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. 2016-17ರಲ್ಲಿ 472 ಕೋಟಿ ರು. ಮೌಲ್ಯದ 1422 ಕೆಜಿ ಅಕ್ರಮ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ಅಂದರೆ ಕಳೆದ ಒಂದು ವರ್ಷದಲ್ಲಿ ಅಕ್ರಮ ಚಿನ್ನ ವಶಪಡಿಸಿಕೊಳ್ಳುವ ಪ್ರಮಾಣದಲ್ಲಿ ಶೇ.103ರಷ್ಟುಏರಿಕೆಯಾಗಿದೆ. ಈ ಪೈಕಿ ಹೆಚ್ಚಿನ ಚಿನ್ನವನ್ನು ಕೋಲ್ಕತಾ, ಮುಂಬೈ, ಚೆನ್ನೈ ಮತ್ತು ದೆಹಲಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಇನ್ನು ಇದೇ ಅವಧಿಯಲ್ಲಿ ಅಧಿಕಾರಿಗಳು 26785 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಹಿಂದಿನ ವರ್ಷ ಇದು 16197ಕೆಜಿ ಆಗಿತ್ತು. ಇದಲ್ಲದೆ 70 ಲಕ್ಷ ರು.ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 34 ಕೋಟಿ ರು.ಮೌಲ್ಯದ 4.26 ಕೋಟಿ ಕಳ್ಳಸಾಗಣೆ ಮಾಡಲಾದ ಸಿಗರೆಟ್‌ ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

click me!