ಕ್ಯಾಪ್ಟನ್ ಆಫ್ ರೊಮಾನ್ಸ್.. ಮಗಳ ಮೇಲೂ ಟ್ರಂಪ್ ಕಣ್ಣು

Published : Oct 22, 2016, 09:44 AM ISTUpdated : Apr 11, 2018, 01:11 PM IST
ಕ್ಯಾಪ್ಟನ್ ಆಫ್ ರೊಮಾನ್ಸ್.. ಮಗಳ ಮೇಲೂ ಟ್ರಂಪ್ ಕಣ್ಣು

ಸಾರಾಂಶ

ರಿಪಬ್ಲಿಕನ್ ಪಕ್ಷದಿಂದ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಶುದ್ಧ ಪೋಲಿ ಸ್ವಭಾವದಾವರು. ಅಲ್ಲಿ ಚುನಾವಣೆ ಕಾವೇರುತ್ತಿದ್ದಂತೆ ಟ್ರಂಪ್ ತಮ್ಮೊಂದಿಗೆ ತುಂಟತನದಿಂದ ವರ್ತಿಸಿದ್ದನ್ನು ಮಹಿಳಾಮಣಿಗಳು ಹೇಳಿಕೊಳ್ತಿದ್ದಾರೆ. ಈ ಪಟ್ಟಿಯಲ್ಲಿ ಅವರ ಮಗಳೂ ಇದ್ದಾಳೆ!

ವಾಷಿಂಗ್ಟನ್(ಅ.22): ರಿಪಬ್ಲಿಕನ್ ಪಕ್ಷದಿಂದ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಶುದ್ಧ ಪೋಲಿ ಸ್ವಭಾವದಾವರು. ಅಲ್ಲಿ ಚುನಾವಣೆ ಕಾವೇರುತ್ತಿದ್ದಂತೆ ಟ್ರಂಪ್ ತಮ್ಮೊಂದಿಗೆ ತುಂಟತನದಿಂದ ವರ್ತಿಸಿದ್ದನ್ನು ಮಹಿಳಾಮಣಿಗಳು ಹೇಳಿಕೊಳ್ತಿದ್ದಾರೆ. ಈ ಪಟ್ಟಿಯಲ್ಲಿ ಅವರ ಮಗಳೂ ಇದ್ದಾಳೆ!

ಅದೊಂದು ಟಿವಿ ಶೋ. ಕ್ಯಾಮೆರಾ ಲೈವ್‌ನಲ್ಲಿ ರೆಕಾರ್ಡ್‌ಗೆ ಇಳಿದಿತ್ತು. ಇವಾಂಕಾ ಎಂಬ ಸುರದ್ರೂಪಿ ಹೆಣ್ಣಿನ ಮುಂದೆ ಡೊನಾಲ್ಡ್ ಟ್ರಂಪ್ ಕುಳಿತು, ‘ಇವಾಂಕಾ ನನ್ನ ಮಗಳಲ್ಲದೇ ಇದ್ದಿದ್ದರೆ ನಾನು ಇಷ್ಟೊತ್ತಿಗಾಗಲೇ ಇವಳೊಂದಿಗೆ ರೊಮ್ಯಾನ್ಸ್ ಮಾಡಿರುತ್ತಿದ್ದೆ’ ಎಂದಿದ್ದರು! ಇದಾಗಿ ಕೆಲವೇ ದಿನಗಳಲ್ಲಿ ಇವಾಂಕಾ ಕೂಡ ಹೇಳಿಕೆ ಕೊಟ್ಟಿದ್ದರು. ‘ಅಪ್ಪನದ್ದು ಪೋಲಿ ಸ್ವಭಾವ. ನನ್ನಲ್ಲೂ ಅವರು ಹಾಲಿವುಡ್ ನಟಿಯನ್ನು ಹುಡುಕುತ್ತಾರೆ’ ಎಂದು!

ಡೊನಾಲ್ಡ್ ಟ್ರಂಪ್ ಅವರ ವ್ಯಕ್ತಿತ್ವ ಅಳೆಯಲು ಬಹುಶಃ ಇವೆರಡು ಹೇಳಿಕೆ ಸಾಕು. ಯಾಕೆ ಮಹಿಳೆಯರು ಟ್ರಂಪ್‌ನನ್ನು ಓರೆಗಣ್ಣಿನಿಂದ ನೋಡ್ತಾರೆ ಅನ್ನೋದಕ್ಕೂ ಕಾರಣ ಇಲ್ಲಿದೆ. ಅಮೆರಿಕದಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಟ್ರಂಪ್ ಅವರ ಮೇಲೆ ಹತ್ತಾರು ಆರೋಪಗಳಿವೆ. ಟ್ರಂಪ್ ವಲಸಿಗರಿಗೆ ಬೆಲೆ ಕೊಡೋದಿಲ್ಲ, ಮುಸ್ಲಿಮರ ಬದ್ಧ ದ್ವೇಷಿ- ಎಂಬೆಲ್ಲ ದೂರುಗಳ ನಡುವೆ ‘ಟ್ರಂಪ್ ಮಹಿಳಾ ವಿರೋಧಿ’ ಎಂಬ ಆರೋಪವೂ ಪ್ರಮುಖ. ಆದರೆ, ಟ್ರಂಪ್ ಮೊದಲಿನಿಂದ ಇರೋದೇ ಹಾಗೆ. ಮಗಳು ಇವಾಂಕಾ ಅನೇಕ ಸಲ ಅಪ್ಪನ ಜೊತೆಗೆ ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಮುಜುಗರ ಪಟ್ಟಿದ್ದೂ ಉಂಟು. ಮೊದಲನೇ ಪತ್ನಿಯ ಮಗಳಾದ ಕಾರಣ ಐವಾಂಕಾ ಈಗಲೂ ಟ್ರಂಪ್ ಜೊತೆಗೆ ವಾಸಿಸುತ್ತಿಲ್ಲ.

ಚುನಾವಣಾ ಪ್ರಚಾರಕ್ಕೆಂದು ಟ್ರಂಪ್ ಅಮೆರಿಕದ ಉದ್ದಗಲಕ್ಕೂ ಓಡಾಡ್ತಿದ್ದಾರೆ. ಈ ಹಿಂದೆ ಟ್ರಂಪ್‌ನಿಂದ ದೌರ್ಜನ್ಯಕ್ಕೆ ಗುರಿಯಾದ ಮಹಿಳೆಯರೆಲ್ಲ ಒಬ್ಬೊಬ್ಬರಾಗಿ ದೂರುಗಳನ್ನು ಮುಂದಿಡುತ್ತಿದ್ದಾರೆ. ಟ್ರಂಪ್ ಮಹಾನ್ ರಸಿಕ ಎನ್ನುವುದಕ್ಕಿಂತ, ‘ಯವ್ವನದಲ್ಲಿ ಟ್ರಂಪ್ ಮಹಿಳೆಯನ್ನು ಕೇವಲ ಸೆಕ್ಸ್ ದೃಷ್ಟಿಯಲ್ಲಿ ನೋಡುತ್ತಿದ್ದರು’ ಎಂದು ನೇರವಾಗಿ ಆರೋಪಿಸಿದವರೂ ಇದ್ದಾರೆ. ಹಾಲಿವುಡ್‌ನ ನಟಿ ಜೆನ್ನಿರ್ ಮರ್ಫಿಗೂ ಟ್ರಂಪ್ ಅವರ ಪೋಲಿತನದ ಅನುಭವವಾಗಿದೆ. ಟ್ರಂಪ್ ಕಚೇರಿಗೆ ಅವರು ಸಂದರ್ಶನಕ್ಕೆ ಹೋಗಿದ್ದರಂತೆ. ಇಂಟರ್‌ವ್ಯೆ ಮುಗಿದ ಮೇಲೆ ಜೆನ್ನಿರ್‌ಳನ್ನು ಬೀಳ್ಕೊಡಲು ಲ್‌ಟಿ ತನಕ ಬಂದರು ಟ್ರಂಪ್. ಬಹುಶಃ ಲ್‌ಟಿನಲ್ಲಿ ಬಿಟ್ಟು, ಮರಳಿ ಛೇಂಬರ್‌ಗೆ ಹೋಗುತ್ತಾರೆಂದೇ ಜೆನ್ನಿರ್ ಭಾವಿಸಿದ್ದರು. ಆದರೆ, ಟ್ರಂಪ್ ಮಾಡಿದ್ದೇ ಬೇರೆ. ಜೆನ್ನಿರ್ ಅವರ ತುಟಿಗೆ ಮುತ್ತಿಕ್ಕಿ, ಅಂಗಾಂಗಗಳನ್ನು ಸ್ಪರ್ಶಿಸಿದ್ದರು ಟ್ರಂಪ್. ‘ಅದೊಂದು ಮ್ಯಾಗ್ನೆಟ್ ಕಿಸ್. ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ. ಏನಾದರೂ ಮಾಡಲಿಯೆಂದು ಸುಮ್ಮನಿದ್ದುಬಿಟ್ಟೆ. ಮದುವೆಯ ಪ್ರಸ್ತಾಪವನ್ನೂ ಮುಂದಿಟ್ಟರು. ಆದರೆ, ನಾನಾಗ ಎಂಗೇಜ್ ಆಗಿದ್ದೆ’ ಎಂದು ಜೆನ್ನಿರ್ ಒಂದು ಸಂದರ್ಶನದಲ್ಲಿ ಹೇಳಿಕೊಂಡರು.

ಇನ್ನು ‘ಪೀಪಲ್’ ಮ್ಯಾಗಜಿನ್‌ನ ಹೆಸರಾಂತ ಲೇಖಕಿ ನತಾಶಾ ಸ್ಟೊಯ್ನೋಫ್ ಅವರನ್ನೂ ಟ್ರಂಪ್ ಕಾಡಿದ್ದರು. ಟ್ರಂಪ್ ಅವರ ಪತ್ನಿ ಮೆಲಾನಿಯಾ ಅವರನ್ನು ಭೇಟಿಯಾಗಲು ನತಾಶಾ ಹೋಗಿದ್ದರಂತೆ. ಆದರೆ, ಮೆಲಾನಿಯ ಬರುವುದು ತುಸು ತಡವಾಗಿತ್ತು. ಅಷ್ಟರಲ್ಲೇ ಟ್ರಂಪ್, ನತಾಶಾಗೆ ಪ್ರೊಪೋಸ್ ಮಾಡಿ, ಬೆಡ್‌ರೂಮಿಗೆ ಕರೆದೊಯ್ದಿದ್ದರು. ಗೋಡೆಗೆ ಒತ್ತಿಕೊಂಡು ಆಕೆಗೆ ಬಲವಂತವಾಗಿ ಮುತ್ತಿಕ್ಕಿದ್ದರು. ಇತ್ತೀಚೆಗಷ್ಟೇ ನತಾಶಾ ‘ನ್ಯೂಯಾರ್ಕ್ ಟೈಮ್ಸ್’ನ ಸಂದರ್ಶನದಲ್ಲಿ ಇದನ್ನೆಲ್ಲ ಹೇಳಿಕೊಂಡಿದ್ದರು. ಟ್ರಂಪ್ ಈ ಹೇಳಿಕೆಯನ್ನು ನಿರಾಕರಿಸಿ, ‘ನತಾಶಾ ಕಲ್ಪನೆಯಲ್ಲಿಯೇ ರೊಮ್ಯಾಂಟಿಕ್ ದೃಶ್ಯಗಳನ್ನು ಹೆಣೆದಿದ್ದಾರೆ. ಅವರು ಹೇಳಿರುವುದು ನನಗೆ ತಿಳಿದೇ ಇಲ್ಲ. ನನ್ನನ್ನು ಮಹಿಳಾ ದ್ವೇಷಿ ಮಾಡಿಸುವುದಷ್ಟೇ ಅವರ ಉದ್ದೇಶ’ ಎಂದು ಜಾರಿಕೊಂಡರು.

ಜೆಸ್ಸಿಕಾ ಲೀಡ್ಸ್ ಎಂಬಾಕೆ ಇನ್ನೊಂದು ಆರೋಪವನ್ನು ಮುಂದಿಡುತ್ತಾರೆ. ‘ಟ್ರಂಪ್ ಯವ್ವನದಲ್ಲಿದ್ದಾಗ ವಿಮಾನಯಾನದಲ್ಲಿ ಜೊತೆಯಾದರು. ಪಕ್ಕದಲ್ಲಿ ಕುಳಿತ ನನ್ನನ್ನು ಮೃದುವಾಗಿ ಮುಟ್ಟುತ್ತಾ, ಅಂಗಾಂಗಗಳನ್ನು ಸ್ಪರ್ಶಿಸಿ ಸುಖ ಹೀರಿದ್ದರು’ ಎನ್ನುತ್ತಾರೆ ಲೀಡ್ಸ್. ಹಾಲಿವುಡ್ ನಟಿ ಆ್ಯಂಬರ್ ಟಾಂಬ್ಲಿನ್ ಇತ್ತೀಚೆಗೆ ಇನ್‌ಸ್ಟಗ್ರಾಮ್‌ನಲ್ಲಿ ಡೊನಾಲ್ಡ್ ಟ್ರಂಪ್ ಜೊತೆಗಿರುವ ಫೋಟೋವನ್ನು ಹಾಕಿದ್ದರು. ‘ತೀರಾ ಸಣ್ಣ ವಯಸ್ಸಿನಲ್ಲಿಯೇ ಟ್ರಂಪ್ ಜೊತೆಗೆ ನನಗೆ ಸೆಕ್ಸ್ ಆಗಿತ್ತು. ಕ್ಲಬ್‌ನಲ್ಲಿ ಟ್ರಂಪ್ ನನ್ನನ್ನು ಭೇಟಿ ಆಗಿದ್ದಾಗ ಮುಜುಗರ ಆಗುವಂತೆ ತುಂಟಾಟ ನಡೆಸಿದ್ದರು’ ಎಂದು ಹೇಳಿಕೊಂಡಿದ್ದಾರೆ.

ಟ್ರಂಪ್‌ನ ಇಷ್ಟೆಲ್ಲ ಪೋಲಿತನಗಳನ್ನು ಸಹಿಸಿಕೊಂಡೂ ಪತ್ನಿ ಮೆಲಾನಿಯಾ, ಟ್ರಂಪ್ ಅವರನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ. ಮೆಲಾನಿಯಾ ಇವರಿಗೆ ಮೂರನೇ ಹೆಂಡತಿ. ‘ಟ್ರಂಪ್‌ಗೆ ಮಹಿಳೆಯರ ಮೇಲೆ ಅಪಾರ ಗೌರವವಿದೆ. ಅವರೆಂದೂ ಅನುಚಿತವಾಗಿ ವರ್ತಿಸಲೇ ಇಲ್ಲ. ಪ್ರಚಾರಕ್ಕಾಗಿ ಕೆಲವರು ಟ್ರಂಪ್ ಜೊತೆಗಿನ ಸಂಬಂಧದ ಬಗ್ಗೆ ಹೇಳಿಕೊಳ್ಳುತ್ತಾರೆ’ ಎನ್ನುವುದು ಮೆಲಾನಿಯಾ ವಾದ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!
ತೋಷಖಾನಾ–2 ಪ್ರಕರಣ: ಇಮ್ರಾನ್ ಖಾನ್–ಬುಷ್ರಾ ಬೀಬಿಗೆ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ಕೋರ್ಟ್!