
ವಾಷಿಂಗ್ಟನ್(ಅ.14): ಪ್ರತಿಭೆ ಇದ್ದವರಿಂದ ದೇಶಕ್ಕೆ ಅನುಕೂಲವಾಗಲಿದ್ದು, ಅಂತಹವರು ಮಾತ್ರ ಅಮೆರಿಕಾಕ್ಕೆ ಬನ್ನಿ, ಆದರೆ, ಕಾನೂನುಬಾಹಿರವಾಗಿ ದೇಶದೊಳಗೆ ನುಸುಳಲು ಪ್ರಯತ್ನಿಸಬೇಡಿ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಗಡಿ ಭದ್ರತೆ ವಿಚಾರದಲ್ಲಿ ತಮ್ಮ ಸರ್ಕಾರ ಯಾವುದೇ ರಾಜಿಗೆ ಸಿದ್ಧವಿಲ್ಲ ಎಂದು ಹೇಳಿರುವ ಟ್ರಂಪ್, ನ್ಯಾಯಯುತ ರೀತಿಯಲ್ಲಿ ದೇಶದೊಳಗೆ ಬನ್ನಿ ಎಂದು ವಿದೇಶಿಗರಿಗೆ ಸಲಹೆ ನೀಡಿದ್ದಾರೆ.
ಪ್ರತಿಭೆ ಆಧಾರದ ಮೇಲೆ ದೇಶಕ್ಕೆ ಬರುವವರನ್ನು ಸ್ವಾಗತಿಸುವುದಾಗಿ ಹೇಳಿರುವ ಟ್ರಂಪ್, ಇದರಿಂದಾಗಿ ಭಾರತದಂತಹ ತಂತ್ರಜ್ಞಾನ ವೃತ್ತಿಪರರಿಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕಾಕ್ಕೆ ಅತಿ ಹೆಚ್ಚಿನ ಸಂಖ್ಯೆಯ ಜನರು ವಲಸೆ ಬರುತ್ತಾರೆ. ನಮ್ಮ ದೇಶದಲ್ಲಿ ವಿವಿಧ ಕ್ಷೇತ್ರದ ಅತ್ಯುನ್ನತ ಕಂಪನಿಗಳಿವೆ. ದೇಶಕ್ಕೆ ಜನರ ಅಗತ್ಯವಿದ್ದು, ಪ್ರತಿಭೆ ಇದ್ದವರಿಗೆ ಮಾತ್ರ ಮಣೆ ಹಾಕಲಾಗುವುದು ಎಂದು ಟ್ರಂಪ್ ಅಮೆರಿಕ ಕುರಿತ ತಮ್ಮ ಭವಿಷ್ಯದ ದೃಷ್ಟಿಕೋನವನ್ನು ತೆರೆದಿಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.