ತಾಲಿಬಾನ್ ಜೊತೆ ಶಾಂತಿ ಮಾತುಕತೆ ರದ್ದುಗೊಳಿಸಿದ ಟ್ರಂಪ್!

Published : Sep 08, 2019, 07:21 PM IST
ತಾಲಿಬಾನ್ ಜೊತೆ ಶಾಂತಿ ಮಾತುಕತೆ ರದ್ದುಗೊಳಿಸಿದ ಟ್ರಂಪ್!

ಸಾರಾಂಶ

ತಾಲಿಬಾನ್ ಜೊತೆ ಶಾಂತಿ ಮಾತುಕತೆ ನಿಲ್ಲಿಸಿದ ಅಮೆರಿಕ ಅಧ್ಯಕ್ಷ| ಕಾಬೂಲ್ ಕಾರ್ ಬಾಂಬ್ ದಾಳಿಯಲ್ಲಿ ಅಮೆರಿಕ ಯೋಧನ ಸಾವು| ಶಾಂತಿ ಮಾತುಕತೆ ರದ್ದುಪಡಿಸಿರುವುದಾಗಿ ಡೋನಾಲ್ಡ್ ಟ್ರಂಪ್ ಘೋಷಣೆ| ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯುವ ನಿರ್ಧಾರದಿಂದ ಹಿಂದೆ ಸರಿದ ಟ್ರಂಪ್|  

ವಾಷಿಂಗ್ಟನ್(ಸೆ.08): ಮಹತ್ವದ ಬೆಳವಣಿಗೆಯೊಂದರಲ್ಲಿ ತಾಲಿಬಾನ್’ನೊಂದಿಗೆ ಶಾಂತಿ ಒಪ್ಪಂದ ರದ್ದಪಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.  

ಕಾಬೂಲ್’ನಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ ಅಮೆರಿಕ ಯೋಧನೋರ್ವ ಸಾವನ್ನಪ್ಪಿದ್ದು, ದಾಳಿಯ ಹೊಣೆ ಹೊತ್ತ ತಾಲಿಬಾನ್ ಜೊತೆ ಶಾಂತಿ ಮಾತುಕತೆ ರದ್ದುಪಡಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. 

ಇದೇ ವೇಳೆ ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯುವ (ಕ್ಯಾಂಪ್ ಡೇವಿಡ್)ಒಪ್ಪಂದವನ್ನು ಅಮೆರಿಕ ರದ್ದುಪಡಿಸಿದ್ದಾಗಿ ಬಿಬಿಸಿ ನ್ಯೂಸ್ ವರದಿ ಮಾಡಿದೆ. 

ಅಮೆರಿಕದ ಸಂಧಾನಕಾರ ಜಲ್ಮೇ ಖಲೀಲ್ ಜಾದ್ ಕಳೆದ ಸೋಮವಾರ ತಾಲಿಬಾನ್ ಜೊತೆ ಶಾಂತಿ ಒಪ್ಪಂದವನ್ನು ತಾತ್ವಿಕವಾಗಿ ಘೋಷಿಸಿದ್ದರು. ಕತಾರ್’ ರಾಜಧಾನಿ ದೋಹಾದಲ್ಲಿ ನಡೆದ ಅಮೆರಿಕ ಮತ್ತು ತಾಲಿಬಾನ್ ಪ್ರತಿನಿಧಿಗಳ ನಡುವಿನ 9 ಸುತ್ತಿನ ಮಾತುಕತೆಯ ನಂತರ ಈ ಘೋಷಣೆ ಹೊರಡಿಸಲಾಗಿತ್ತು. 

ಆದರೆ ಕಾಬೂಲ್ ದಾಳಿಯ ಬಳಿಕ ಅಫ್ಘಾನಿಸ್ತಾನದೊಂದಿಗೆ ಶಾಂತಿ ಮಾತುಕತೆ ರದ್ದುಪಡಿಸಿರುವುದಾಗಿ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. 

ತಾಲಿಬಾನ್ ನಡೆಸಿದ ಕಾಬೂಲ್ ಕಾರ್ ಬಾಂಬ್ ದಾಳಿಯಲ್ಲಿ ಅಮೆರಿಕ ಸೈನಿಕ ಸೇರಿದಂತೆ 12 ಜನರು ಸಾವನ್ನಪ್ಪಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಚಾಲನಾ ಸಿಬ್ಬಂದಿ ಭತ್ಯೆ ಪರಿಷ್ಕರಣೆ: ಸರ್ಕಾರದ ಹೊಸ ಆದೇಶ, ರಾಮನವಮಿಗೆ ಬಿಗ್ ಗಿಫ್ಟ್
18 ಮಕ್ಕಳ ತಂದೆ, ಇಬ್ಬರು ಹೆಂಡಿರ ಮುದ್ದಿನ ಗಂಡನ ಭೀಕರ ಕೊಲೆ! ಮುಖ್ಯಸ್ಥನ ಕಥೆ ಮುಗಿಸಿ, ಮೂಟೆ ಕಟ್ಟಿ ಎಸೆದ ಪ್ರೇಯಸಿ!