ಅಕ್ರಮ ವಲಸಿಗರನ್ನು ಹೊರ ದಬ್ಬುತ್ತೇವೆ: ಅಸ್ಸಾಂನಲ್ಲಿ ಶಾ ಗುಡುಗು!

By Web Desk  |  First Published Sep 8, 2019, 6:34 PM IST

ಅಸ್ಸಾಂ ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ| NRC ಪ್ರಕ್ರಿಯೆ ಬಳಿಕ ಅಸ್ಸಾಂಗೆ ಕಾಲಿಟ್ಟ ಅಮಿತ್ ಶಾ| ಒಬ್ಬನೇ ಒಬ್ಬ ಅಕ್ರಮ ವಲಸಿಗನನ್ನು ರಾಜ್ಯದಲ್ಲಿ ಇರಲು ಬಿಡಲ್ಲ ಎಂದ ಶಾ| ಅಕ್ರಮ ವಲಸಿಗರನ್ನು ಹೊರ ದಬ್ಬುವುದು ಪಕ್ಕಾ ಎಂದ ಗೃಹ ಸಚಿವ| ಈಶಾನ್ಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ| 


ಗುವಹಾಟಿ(ಸೆ.08): ಅಸ್ಸಾಂನಲ್ಲಿ NRC ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿದ್ದು, ಅಕ್ರಮ ವಲಸಿಗರನ್ನು ಗುರುತಿಸಿ ಹೊರ ದಬ್ಬಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

Union Home Min Amit Shah at 68th Plenary Session of North Eastern Council, in Guwahati: Mahabharat ke yudh ke andar, Babruvahan ho ya Ghatotkach ho,dono Northeast ke the. Arjun ki shadi bhi yahin Manipur mein hui thi.Sri Krishna ke pote ka vyaah bhi Northeast mein hua tha. pic.twitter.com/7KnGPYhthV

— ANI (@ANI)

ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಅಸ್ಸಾಂ ಪ್ರವಾಸ ಕೈಗೊಂಡಿರುವ ಅಮಿತ್ ಶಾ, ಒಬ್ಬೇ ಒಬ್ಬ ಅಕ್ರಮ ವಲಸಿಗನನ್ನೂ ರಾಜ್ಯದಲ್ಲಿ ನೆಲೆಸಲು ನಾವು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

Tap to resize

Latest Videos


ಅಸ್ಸಾಂ ರಾಜಧಾನಿ ಗುವಹಾಟಿಯಲ್ಲಿ ನಡೆದ ಈಶಾನ್ಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, NRC ಪ್ರಕ್ರಿಯೆ ಸಂಪೂರ್ಣ ಮುಗಿದ ಬಳಿಕ ಅಕ್ರಮ ವಲಸಿಗರನ್ನು ಹೊರ ದಬ್ಬುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ನುಡಿದರು.

Union Home Minister Amit Shah at the 68th Plenary Session of North Eastern Council, in Guwahati: Article 371 of the Indian Constitution is a special provision. BJP government respects Article 371 & will not alter it in any way. pic.twitter.com/Bkbn6824Wf

— ANI (@ANI)

ಇತ್ತೀಚಿಗೆ ಮುಕ್ತಾಯ ಕಂಡ  NRC ಪ್ರಕ್ರಿಯೆಯಲ್ಲಿ ಸುಮಾರು 19 ಲಕ್ಷ ನಾಗರಿಕರನ್ನು NRC ಪಟ್ಟಿಯಿಂದ ಹೊರ ಹಾಕಲಾಗಿದ್ದು, ಇವರೆಲ್ಲರನ್ನೂ ದೇಶದಿಂದ ಹೊರ ಹಾಕುವ ಭೀತಿ ಎದುರಾಗಿದೆ.

click me!