ಇನ್ಸುಲಿನ್ ಶೃಂಗಸಭೆ : ಡಯಾಬಿಟೀಸ್ ಆರೈಕೆ ಬಗ್ಗೆ ಕುಂಬ್ಳೆ ಬ್ಯಾಟಿಂಗ್

By Web DeskFirst Published Sep 8, 2019, 10:50 AM IST
Highlights

ಬೆಂಗಳೂರಿನಲ್ಲಿ ನಡೆದ 13ನೇ ರಾಷ್ಟ್ರೀಯ ಇನ್ಸುಲಿನ್ ಶೃಂಗಸಭೆ ನಡೆಯಿತು. ಇಲ್ಲಿ ಪ್ರಮುಖ ನಿರ್ನಾಳಗ್ರಂಥಿ-ತಜ್ಞರು ಮತ್ತು ಮಧುಮೇಹ-ತಜ್ಞರನ್ನೂ ಒಳಗೊಂಡಂತೆ 450 ಕ್ಕೂ ಹೆಚ್ಚು ವೈದ್ಯರು ಪಾಲ್ಗೊಂಡಿದ್ದರು. ಇಲ್ಲಿ ಡಯಾಬಿಟೀಸ್ ಸಂಬಂಧಿಸಿದಂತೆ ಪ್ರಮುಖ ವಿಚಾರಧಾರೆಗಳನ್ನು ಪ್ರಸ್ತುತಪಡಿಸಲಾಯಿತು. 

ಬೆಂಗಳೂರು [ಸೆ.08]: ಉಪವಾಸದಲ್ಲಿ ರಕ್ತದ ಸಕ್ಕರೆಯ ಮಟ್ಟವನ್ನು ಪತ್ತೆಹಚ್ಚಿ ಚಿಕಿತ್ಸೆಯನ್ನು ಆರಂಭಿಸುವ ಪಾಶ್ಚಿಮಾತ್ಯ ವಿಧಾನವು ಭಾರತದಲ್ಲಿ ಮಧುಮೇಹವಿರುವವರಿಗೆ ಸೂಕ್ತವಾಗಿರುವುದಿಲ್ಲ. ಕಾರ್ಬೊಹೈಡ್ರೇಟ್ ಅಧಿಕವಾಗಿರುವ ಆಹಾರದ “ಭಾರತೀಯ ವಾಸ್ತವತೆ"ಯು ಊಟದ ನಂತರ ರಕ್ತದ ಸಕ್ಕರೆಯ ಮಟ್ಟದ ಹೆಚ್ಚಳಕ್ಕೆ ಕಾರಣವಾಗುತ್ತದೆ, ಅದನ್ನೂ ಸಹ ಪತ್ತೆ ಹಚ್ಚಬೇಕಾಗುತ್ತದೆ.  ಉಪವಾಸದ ಮತ್ತು ಊಟದ ನಂತರದ ರಕ್ತದ ಸಕ್ಕರೆಯ ಮಟ್ಟಗಳೆರಡನ್ನೂ ಪತ್ತೆಹಚ್ಚಿ ಚಿಕಿತ್ಸೆ ನೀಡುವ ವಿಧಾನವು ಮಧುಮೇಹವಿರುವ ಹೆಚ್ಚಿನ ಭಾರತೀಯರಿಗೆ ಹೆಚ್ಚು ಸೂಕ್ತವಾಗುತ್ತದೆ. ಎಂದು ಡಾ. ವಿ ಮೋಹನ್ (ಚೇರ್ಮನ್, ಡಾ. ಮೋಹನ್ಸ್ ಡಯಾಬಿಟಿಸ್ ಸ್ಪೆಸಿಯಾಲಿಟಿಸ್ ಸೆಂಟರ್ ಪ್ರೈವೇಟ್ ಲಿ.) ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ 13ನೇ ರಾಷ್ಟ್ರೀಯ ಇನ್ಸುಲಿನ್ ಶೃಂಗಸಭೆಯಲ್ಲಿ (ಎನ್ಐಎಸ್)  ಭಾರತದಾದ್ಯಂತದ ವೈದ್ಯರೊಂದಿಗೆ ನಡೆಸಿದ ಸಮೀಕ್ಷೆಯೊಂದರ ಫಲಿತಾಂಶಗಳನ್ನು ಡಾ.ವಿ ಮೋಹನ್ ಪ್ರಸ್ತುತಪಡಿಸಿದರು. ಈ ಶೃಂಗಸಭೆಯಲ್ಲಿ ಪ್ರಮುಖ ನಿರ್ನಾಳಗ್ರಂಥಿ-ತಜ್ಞರು ಮತ್ತು ಮಧುಮೇಹ-ತಜ್ಞರನ್ನೂ ಒಳಗೊಂಡಂತೆ 450 ಕ್ಕೂ ಹೆಚ್ಚು ವೈದ್ಯರು ಪಾಲ್ಗೊಂಡಿದ್ದರು.

ಸಮೀಕ್ಷೆಯ ಮುಖ್ಯಾಂಶಗಳು : ಪಾಶ್ಚಾತ್ಯ ಆಹಾರದಲ್ಲಿ ಕಂಡುಬರುವಂತೆ 40% ಕಾರ್ಬೋಹೈಡ್ರೇಟ್‌ ಆಹಾರ ಪದ್ದತಿಗೆ ವಿರುದ್ಧವಾಗಿ ತಮ್ಮ(ಭಾರತೀಯ) ರೋಗಿಗಳ ಆಹಾರದಲ್ಲಿ 65% ಕಾರ್ಬೋಹೈಡ್ರೇಟ್‌ ಮಟ್ಟವಿದೆ ಎಂದು ಶೇ 74% ವೈದ್ಯರು ಹೇಳಿದ್ದಾರೆ.  80% ರಷ್ಟು ವೈದ್ಯರು ತಮ್ಮ ರೋಗಿಗಳಲ್ಲಿ ಹೆಚ್ಚಿನವರು ಸರಿಯಾದ ಮಧುಮೇಹ ಆರೈಕೆಗೆ ಅಗತ್ಯವಾದ ಸರಿಯಾದ ಆಹಾರವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಾರೆ ಎಂದು ಹೇಳಿದ್ದಾರೆ.

ಅನಿಲ್ ಕುಂಬ್ಳೆ ಭಾಗಿ :  ಭಾರತೀಯ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ನೋವೊ ನಾರ್ಡಿಸ್ಕ್ ಬ್ರ್ಯಾಂಡ್‌ ಅಂಬಾಸಿಡರ್, ಅನಿಲ್ ಕುಂಬ್ಳೆ ಅವರೂ ಸಹ ಬೆಂಗಳೂರಿನಲ್ಲಿ ನಡೆದ 13ನೇ ರಾಷ್ಟ್ರೀಯ ಇನ್ಸುಲಿನ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ವಿವಿಧ ಖಂಡಗಳಲ್ಲಿ ವಿವಿಧ ಪರಿಸ್ಥಿತಿಗಳಲ್ಲಿ ಅವರು ಆಡಿದ ದಿನಗಳನ್ನು ನೆನಪಿಸಿಕೊಂಡ ಅವರು, ಅಲ್ಲಿದ್ದ ಸ್ಥಿತಿಗಳಿಗೆ ಅನುಗುಣವಾಗಿ ಅವರು ತಮ್ಮ ಆಟದ ಯೋಜನೆಯನ್ನು ಸರಿಹೊಂದಿಸಬೇಕಾಗಿತ್ತು. ಆ ಮೂಲಕ ಅವರು ಮಧುಮೇಹ ಆರೈಕೆಗೆ “ಭಾರತೀಯ ನೈಜತೆ”ಯನ್ನು ಪರಿಗಣಿಸಬೇಕು ಎಂಬುದನ್ನು ಸೂಚಿಸಿದರು.

ಭಾರತೀಯ ರಿಯಾಲಿಟಿಯೊಳಗೆ ಕೆಲಸ ಮಾಡಲು ನಿರಂತರ ಸಹಕಾರವನ್ನು ಖಚಿತಪಡಿಸಿಕೊಳ್ಳಲು ರೋಗಿಗಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ದೇಶದ ವೈವಿಧ್ಯತೆಯನ್ನು ವೈದ್ಯರು ಗಮನದಲ್ಲಿರಿಸಿಕೊಳ್ಳಬೇಕು ಮತ್ತು ರೋಗಿಗಳ ನಿರ್ವಹಣೆಯಲ್ಲಿ ಸಂಕೀರ್ಣ ಮತ್ತು ಕಷ್ಟಕರವಾದ ಚಿಕಿತ್ಸೆಯ ದಿನಚರಿಗಳ ಚಿಂತೆ ಮಧುಮೇಹ ಎಂದು ಎಂಡೋಕ್ರೈನ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ-ಚುನಾಯಿತ ಡಾ. ಸಂಜಯ್ ಕಲ್ರಾ ಹೇಳಿದರು.

ಇನ್ನು ಈ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ಡಾ. ಎ ಕೆ ದಾಸ್, ಕನ್ವೆನರ್ ಮಾತನಾಡಿ, 2021 ರ ವೇಳೆಗೆ ದೇಶದ ಸರಾಸರಿ HbA1c ಅನ್ನು 1% ನಷ್ಟು ಕಡಿಮೆ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ 1000-ದಿನಗಳ ಚಾಲೆಂಜ್ ಕಾರ್ಯಕ್ರಮ - ನೋವೊ ನಾರ್ಡಿಸ್ಕ್ಸ್ ಇಂಪ್ಯಾಕ್ಟ್ ಇಂಡಿಯಾದ ಭಾಗವಾಗಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.

ಸಮಾಜದಲ್ಲಿ ಶಾಶ್ವತವಾದ ಬದಲಾವಣೆಯನ್ನು ತರಲು ಎಲ್ಲಾ ಪಾಲುದಾರರ ಸಂಘಟಿತ ಪ್ರಯತ್ನದ ಅಗತ್ಯವಿದೆ. ಇಂಪ್ಯಾಕ್ಟ್ ಇಂಡಿಯಾ ಎಂಬುದು ಈ ಅಗತ್ಯತೆಯನ್ನು ಪೂರೈಸುವುದಕ್ಕಾಗಿ ಆರಂಭಿಸ ಲಾಗಿರುವ ಒಂದು ವಿಭಿನ್ನ ಉಪಕ್ರಮವಾಗಿದೆ ಹಾಗೂ ನಾವು ಈ ಕಾರ್ಯಕ್ರಮದಿಂದ ಸಕಾರಾತ್ಮಕ ಫಲಿತಾಂಶವನ್ನು ಎದುರುನೋಡುತ್ತೇವೆ ಎಂದರು. 

click me!