
ಮೊರಾದಾಬಾದ್(ಜೂ.19): ರಂಜಾನ್ ಹಬ್ಬದ ಸಂದರ್ಭದಲ್ಲಿ ಉತ್ತರಪ್ರದೇಶದ ಮೊರಾದಾಬಾದ್ ಯುವಕರು ತುಸು ಹೆಚ್ಚೇ ಸಂಭ್ರಮದಲ್ಲಿದ್ದರು. ಅವರ ಸಂಭ್ರಮಾಚರಣೆಗೆ ಕಾರಣ ಓರ್ವ ಅನಾಮಿಕ ಯುವತಿ ಎಂಬುದು ಮತ್ತೊಂದು ವಿಶೇಷ.
ಹೌದು, ಈದ್ ಹಬ್ಬದ ಪ್ರಯುಕ್ತ ಮೊರಾದಾಬಾದ್ ನ ಮಾಲ್ ವೊಂದರಲ್ಲಿ ಅನಾಮಿಕ ಯುವತಿಯೋರ್ವಳು ಸುಮಾರು 50 ಜನ ಯುವಕರನ್ನು ಅಪ್ಪಿಕೊಂಡು ಶುಭಾಷಯ ತಿಳಿಸಿದ್ದಾಳೆ. ಈ ಯುವತಿ ಮಾಲ್ ಹೊರಗಡೆ ಯುವಕರನ್ನು ಅಪ್ಪಿಕೊಳ್ಳಲು ಪ್ರಾರಂಭಿಸುತ್ತಿದ್ದಂತೇ ಜನಜಂಗುಳಿ ಸೇರಿದೆ.
ಒಬ್ಬರಾದ ಮೇಲೊಬ್ಬರಂತೆ ಸುಮಾರು 50 ಯುವಕರನ್ನು ಅಪ್ಪಿಕೊಂಡು ಹಬ್ಬದ ಶುಭಾಷಯ ತಿಳಿದ್ದಾಳೆ ಈ ಯುವತಿ. ಇನ್ನು ಯುವತಿಯನ್ನು ಅಪ್ಪಿಕೊಳ್ಳಲು ಯುವಕರು ಸರತಿ ಸಾಲಿನಲ್ಲಿ ಕಾಯುತ್ತಾ ನಿಂತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇಸ್ಲಾಂ ಧರ್ಮದ ಪ್ರಕಾರ ಮಹಿಳೆಯರು ಪರ ಪುರುಷರನ್ನು ಅಪ್ಪಿಕೊಳ್ಳುವುದು ನಿಷಿದ್ದ. ಆದರೆ ಈ ಯುವತಿ ಹೀಗೆ ಸಾರ್ವಜನಿಕವಾಗಿ ಯುವಕರನ್ನು ಅಪ್ಪಿಕೊಂಡಿರುವುದು ಸಂಪ್ರದಾಯವಾದಿಗಳ ಕಣರ್ಣಣು ಕೆಂಪಾಗಿಸಿದೆ. ಇದೇ ವೇಳೆ ಈ ಯುವತಿಯ ಧೈರ್ಯವನ್ನು ಕೆಲವರು ಮೆಚ್ಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.