ಅಪಘಾತದಲ್ಲಿ ದೇಹದಿಂದ ಬೇರ್ಪಟ್ಟ ಕಂದಮ್ಮನ ರುಂಡ: ಮಗುವಿಗೆ ಹೊಸ ಬದುಕು ಕೊಟ್ಟ ವೈದ್ಯರು!

By Suvarna Web DeskFirst Published Jan 7, 2017, 5:16 AM IST
Highlights

ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ 16 ತಿಂಗಳ ಕಂದಮ್ಮನ ತಲೆಯು ದೇಹದಿಂದ ಬೇರ್ಪಟ್ಟಿತ್ತು. ಆದರೆ ವೈದ್ಯರು ತಮ್ಮ ಪ್ರಯತ್ನದಿಂದ ಚಮತ್ಕಾರವೊಂದನ್ನು ಮಾಡಿದ್ದು, ಇದೀಗ ಮಗುವಿಗೆ ಹೊಸ ಬದುಕು ಲಭಿಸಿದೆ.

ಕ್ಯಾನ್ಬೆರಾ(ಜ.07): ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ 16 ತಿಂಗಳ ಕಂದಮ್ಮನ ತಲೆಯು ದೇಹದಿಂದ ಬೇರ್ಪಟ್ಟಿತ್ತು. ಆದರೆ ವೈದ್ಯರು ತಮ್ಮ ಪ್ರಯತ್ನದಿಂದ ಚಮತ್ಕಾರವೊಂದನ್ನು ಮಾಡಿದ್ದು, ಇದೀಗ ಮಗುವಿಗೆ ಹೊಸ ಬದುಕು ಲಭಿಸಿದೆ.

ಆಂತರಿಕವಾಗಿ ದೇಹದಿಂದ ಬೇರ್ಪಟ್ಟ ಮಗುವಿನ ರುಂಡ

ಈ ಚಮತ್ಕಾರದಿಂದ ಹೊಸ ಜೀವ ಪಡೆದ ಮಗು ಜಾಕ್ಸನ್ ಟೇಲರ್. ಈತನ ತಾಯಿ ತನ್ನ ಮಗಳು ಹಾಗೂ ಈ ಪುಟ್ಟ ಕಂದಮ್ಮನೊಂದಿಗೆ ಕಳೆದ ಸಪ್ಟೆಂಬರ್ 15 ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಮಗುವಿನ ರುಂಡ ಆಂತರಿಕವಾಗಿ ದೇಹದಿಂದ ಬೇರ್ಪಟ್ಟಿತ್ತು. ದುರ್ಘಟನೆಯ ಬಳಿಕ ಮಗುವನ್ನು ಬ್ರಿಸ್'ಬನ್'ನ ಒಂದು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಇಲ್ಲಿನ ವೈದ್ಯರ ತಂಡ ಮಗುವಿನ ಪಕ್ಕೆಲುಬಿನ ವೈರ್ ಒಂದರ ಸಹಾಯದಿಂದ ರುಂಡವನ್ನು ಕುತ್ತಿಗೆಗೆ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆಪರೇಷನ್ ಮಾಡಲು ಬರೋಬ್ಬರಿ ಆರು ಗಂಟೆ ಶ್ರಮಿಸಿದ್ದಾರೆ.

ಉಪಕರಣಗಳಿಂದ ತಲೆ ಜೋಡಿಸಿದ್ದರೂ ಆರೋಗ್ಯವಂತನಾಗಿದ್ದಾನೆ ಟೇಲರ್

ಈ ಕೇಸ್ ಕುರಿತಾಗಿ ಮಾತನಾಡಿದ ಸ್ಪೈನಲ್ ಸರ್ಜನ್ ಗಿಯೋನ್ ಆಸ್ಕಿನ್ 'ಬಹುತೇಕ ಮಕ್ಕಳು ಇಷ್ಟು ಗಾಯಳುವಾಗಿದ್ದರೆ ಬದುಕುವುದಿಲ್ಲ. ಒಂದು ವೇಳೆ ಬದುಕಿದರೂ ಅವರಿಗೆ ನಡೆದಾಡಲು ಸಾಧ್ಯವಾಗುವುದಿಲ್ಲ. ಆದರೆ ಟೇಲರ್ ಸಾಮಾನ್ಯ ಹಾಗೂ ಆರೋಗ್ಯವಂತನಾಗಿದ್ದಾನೆ. ಈತನಿಗೆ ಯಾವುದೇ ಸಮಸ್ಯೆ ಆಗಿಲ್ಲ. ಸದ್ಯ ಈತನ ಕುತ್ತಿಗೆ ಭಾಗಕ್ಕೆ ಉಪಕರಣಗಳನ್ನು ಅಳವಡಿಸಿದ್ದೇವೆ, ಆದರೆ ಎಂಟು ವಾರಗಳಲ್ಲಿ ಇದನ್ನು ತೆಗೆಯಲಾಗುವುದು' ಎಂದಿದ್ದಾರೆ . ಮಗುವಿನ ಹೆತ್ತವರು ಇದೊಂದು ಚಮತ್ಕಾರವೇ ಸರಿ ಎಂದಿದ್ದಾರೆ.

click me!