
ಮೈಸೂರು : ಶಾಸಕರ ಮನೆಗೆ ತೆರಳಿ ಟ್ರೀಟ್ಮೆಂಟ್ ಕೊಡದ ಹಿನ್ನೆಲೆಯಲ್ಲಿ ವೈದ್ಯೆಯನ್ನೇ ಎತ್ತಂಗಡಿ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯಿಂದ ವೈದ್ಯೆಯನ್ನು ಚಿತ್ರದುರ್ಗ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ಪಿರಿಯಾಪಟ್ಟಣ JDS ಶಾಸಕ ಕೆ ಮಹದೇವ್ ಮನೆಗೆ ಹೋಗಿ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ.ವೀಣಾಸಿಂಗ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
ವೈದ್ಯೆಗೆ ಮನೆಗೆ ಬಂದು ಚಿಕಿತ್ಸೆ ನೀಡಲು ಹೇಳಿದ್ದರು. ಈ ವೇಳೆ ಅವರು ಮನೆ ಬರಲು ನಿರಾಕರಿಸಿದ್ದು, ಇದರಿಂದ ವೈದ್ಯೆಯನ್ನು ತರಾಟೆಗೆ ತೆಗೆದುಕೊಂಡು, ವೈದ್ಯೆ ವಿರುದ್ಧ ವಿಧಾನಸೌಧದಲ್ಲಿ ದೂರು ನೀಡಿದ್ದರು.
ಆದರೆ ಸರ್ಕಾರದ ಯಾವುದೇ ಸರ್ಕಾರಿ ವೈದ್ಯರು ಆಸ್ಪತ್ರೆ ಬಿಟ್ಟು ಮನೆಗೆ ತೆರಳಿ ಚಿಕಿತ್ಸೆ ನೀಡುವ ಯಾವುದೇ ನಿಯಮವಿಲ್ಲ ಎಂದು ಹೇಳುವ ಮೂಲಕ, ದೂರನ್ನು ತಿರಸ್ಕರಿಸಲಾಗಿತ್ತು.
ಇದಾಗಿ ಹಲವು ತಿಂಗಳು ಕಳೆದಿದ್ದು, ಇದೀಗ ವೈದ್ಯೆಯನ್ನು ಪಿರಿಯಾಪಟ್ಟಣದಲ್ಲಿ ವೈದ್ಯ ಹುದ್ದೆ ಖಾಲಿ ಇದ್ದರೂ ವರ್ಗಾವಣೆ ಮಾಡಲಾಗಿದೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ರಾಮಾಪುರದ ಸಮುದಾಯ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.