ನಾರಿಮನ್ ವಾದಕ್ಕೆ ಸರ್ಕಾರ ಭರಿಸಿದ್ದು ಎಷ್ಟು ಕೋಟಿ ಎಂದುಕೊಂಡಿರಿ?

By Internet DeskFirst Published Oct 1, 2016, 3:14 PM IST
Highlights

ಬೆಳಗಾವಿ(ಅ.1): ನಿನ್ನೆ ಕಾವೇರಿ ವಿಚಾರದ ವಿಚಾರಣೆ ವೇಳೆ  ವಾದ ಮಂಡಿಸದೇ ಕರ್ನಾಟಕ ಪರ ವಕೀಲ ಫಾಲಿ ಎಸ್ ನಾರಿಮನ್ ಹಿಂದೆ ಸರಿದಿದ್ದರು. ಹೀಗಾಗಿ  ಕೃಷ್ಣಾ-ಕಾವೇರಿ ನ್ಯಾಯಾಧೀಕರಣದ ವಾದ ಮಂಡಿಸಲು ವಕೀಲರಿಗೆ ನೀಡಿದ ಹಣವನ್ನ ರಾಜ್ಯ ಸರ್ಕಾರ ಮರಳಿ ಪಡೆಯಬೇಕೆಂದು ಆರ್'ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಆಗ್ರಹಿಸಿದ್ದಾರೆ.  ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷ್ಣಾ-ಕಾವೇರಿ ನ್ಯಾಯಾಧೀಕರಣಕ್ಕೆ ಸರ್ಕಾರ ಈ ವರೆಗೂ 76 ಕೋಟಿ 21 ಲಕ್ಷ ವೆಚ್ಚ ಮಾಡಿದೆ. ಎರಡೂ ನ್ಯಾಯಾಧೀಕರಣದ ಮುಂದೆ ಸಮರ್ಥ ವಾದ ಮಂಡಿಸುವಲ್ಲಿ ವಕೀಲರು ವಿಫಲರಾಗಿದ್ದಾರೆ. ಸರ್ಕಾರ ಕೋಟಿ ಕೋಟಿ ವೆಚ್ಚ ಮಾಡಿದರು ರಾಜ್ಯಕ್ಕೆ ಹಿನ್ನಡೆ ಆಗುತ್ತಿದೆ ಎಂದು ಗಡಾದ್ ಕಿಡಿಕಾರಿದ್ದಾರೆ.

click me!