ಭಾರತ ಪಾಕ್ ಯುದ್ಧವಾದರೆ ಪಾಕ್ ನಾಶ, ಭಾರತದಲ್ಲಾಗುವ ಸಾವು,ನೋವು,ಗಂಡಾಂತರ ಎಷ್ಟು ಗೊತ್ತೆ?

By Internet DeskFirst Published Oct 1, 2016, 2:50 PM IST
Highlights

ಎರಡೂ ದೇಶಗಳ ಬಳಿ ಸರಿ ಸುಮಾರು 100ಕ್ಕೂ ಹೆಚ್ಚು ಅಣ್ವಸ್ತ್ರಗಳಿವೆ. ಆದರೆ ಹೆಚ್ಚು ಶಕ್ತಿಶಾಲಿಯಾದ ಬಹುದೂರ ಕ್ರಮಿಸುವ ಅಣ್ವಸ್ತ್ರಗಳು ಇರುವುದು ಭಾರತದ ಬಳಿಯಲ್ಲಿ.

ನವದೆಹಲಿ(ಅ.1): ಉರಿ ಘಟನೆಗೆ ಪ್ರತ್ಯುತ್ತರವಾಗಿ ಭಾರತ ಪ್ರಪ್ರಥಮವಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸರ್ಜಿಕಲ್(ನಿರ್ದಿಷ್ಟ ದಾಳಿ) ಮೂಲಕ ಉಗ್ರಗಾಮಿ ಶಿಬಿರಗಳನ್ನು ನಾಶ ಮಾಡಿ 38 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಸದೆಬಡಿದಿತ್ತು.

ಇದರಿಂದ ಎರಡೂ ದೇಶಗಳ ನಡುವೆ ಅಣ್ವಸ್ತ್ರ ಯುದ್ಧ ನಡೆಯುವ ಸಂಭವವಿದೆ ಎಂಬ ಮಾತುಗಳು ಭಾರತವೂ ಸೇರಿದಂತೆ ವಿಶ್ವದಾದ್ಯಂತ ಹರಿದಾಡುತ್ತಿದೆ. ಒಂದು ವೇಳೆ ಎರಡೂ ದೇಶಗಳ ನಡುವೆ ಯುದ್ಧ ಸಂಭವಿಸಿದರೆ ಸಾವು ನೋವಿನ ಪ್ರಮಾಣ ಉಹಿಸಲು ಅಸಾಧ್ಯವಾದುದು.

100 ಕ್ಕೂ ಹೆಚ್ಚು ಅಣ್ವಸ್ತ್ರಗಳು

ಎರಡೂ ದೇಶಗಳ ಬಳಿ ಸರಿ ಸುಮಾರು 100ಕ್ಕೂ ಹೆಚ್ಚು ಅಣ್ವಸ್ತ್ರಗಳಿವೆ. ಆದರೆ ಹೆಚ್ಚು ಶಕ್ತಿಶಾಲಿಯಾದ ಬಹುದೂರ ಕ್ರಮಿಸುವ ಅಣ್ವಸ್ತ್ರಗಳು ಇರುವುದು ಭಾರತದ ಬಳಿಯಲ್ಲಿ.

ಪಾಕ್'ನ ಶಾಹೀನ್, ಘಜ್ನಿ'ಗಿಂತ ನಮ್ಮ ಅಗ್ನಿ ಅತೀ ಭಯಂಕರ

ಪಾಕಿಸ್ತಾನದಲ್ಲಿ ಘಜ್ನಿ ಹಾಗೂ ಶಾಹೀನ್ ಅಣ್ವಸ್ತ್ರಗಳು ಹೆಚ್ಚು ದೂರ ಹಾಗೂ ಶಕ್ತಿಶಾಲಿಯಾದ ಅಣ್ವಸ್ತ್ರ. ಇದನ್ನು ಪಾಕ್  ಉಡಾವಣೆ ಮಾಡಿದರೆ 270ರಿಂದ 750 ಕಿ.ಮೀ ದೂರ ಕ್ರಮಿಸಬಹುದು. ಅಂದರೆ ರಾಷ್ಟ್ರ ರಾಜಧಾನಿ ನವದೆಹಲಿ, ಅಹಮದಾಬಾದ್, ಲೂಧಿಯಾನ, ಜೈಪುರ ನಗರಗಳನ್ನು ಧ್ವಂಸ ಮಾಡಬಲ್ಲದು. ಬೆಂಗಳೂರು ಹಾಗೂ ಚೆನ್ನೈ, ಹೈದರಾಬಾದ್ ನಗರಗಳನ್ನು ಮುಟ್ಟಲು ಸಾಧ್ಯವಿಲ್ಲ.

ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಅಗ್ನಿ ಅಣ್ವಸ್ತ್ರವನ್ನು ಪ್ರಯೋಗಿಸಿದರೆ ಪಾಕಿಸ್ತಾನದ ಯಾವುದೇ ನಗರವನ್ನು ನಾಶಮಾಡುತ್ತದೆ. ಅಂದರೆ ಪ್ರಮುಖ ಪಟ್ಟಣಗಳಾದ ಲಾಹೋರ್, ಇಸ್ಲಾಮಾಬಾದ್, ಕರಾಚಿ, ಮುಲ್ತಾನ್, ರಾವಲ್ಪಿಂಡಿ ಸೇರಿದಂತೆ ಯಾವ ನಗರವನ್ನು ಬೇಕಾದರೂ ನಾಶ ಮಾಡಬಲ್ಲದ್ದು.

ಪಾಕ್ ನಾಶವಾದರೆ, ಭಾರತದಲ್ಲಿ 25 ಕೋಟಿ ಮಂದಿ ಸಾಯುತ್ತಾರೆ

ಎರಡೂ ದೇಶಗಳು ಅಣ್ವಸ್ತ್ರ ಯುದ್ಧದಿಂದ ಪಾಕ್ ಬಹುತೇಕ ನಾಶವಾದರೆ ನಮ್ಮಲ್ಲಿ 25 ಕೋಟಿಗೂ ಅಧಿಕ ಮಂದಿ ಸಾವಿಗೀಡಾಗುವ ಸಾಧ್ಯತೆಯಿದೆ. ಅಲ್ಲದೆ ಯುದ್ಧದ ನಂತರದ ಕೆಲವು ವರ್ಷಗಳಲ್ಲಿ ಇನ್ನೊಂದಷ್ಟು ಕೋಟಿ ಮಂದಿ ರೋಗರುಜಿನಗಳಿಂದ ಸಾಯಬಹುದು. ಇದು ಮೂರನೇ ಜಾಗತಿಕ ಮಹಾಯುದ್ಧಕ್ಕೂ ಕಾರಣವಾಗಬಹುದು.

ಚೇತರಿಸಿಕೊಳ್ಳಲು 50 ವರ್ಷ ಬೇಕು

ಯುದ್ಧದ ನಂತರ ಭಾರತ ಚೇತರಿಸಿಕೊಳ್ಳಲು ಕನಿಷ್ಠ 50 ವರ್ಷ ಬೇಕು. ಆರ್ಥಿಕ ಸ್ಥಿತಿ ತೀರ ಹದಗೆಡುತ್ತದೆ. ಲಕ್ಷಾಂತರ ಕೋಟಿ ರೂ. ನಷ್ಟವಾಗುತ್ತದೆ. ಈ ಕಾರಣದಿಂದ ಯುದ್ಧ ನಡೆಯದಿದ್ದರೆ 2 ರಾಷ್ಟ್ರಗಳಿಗೂ ಒಳ್ಳೆಯದು. ವಿಶ್ವಸಂಸ್ಥೆ ಸೇರಿದಂತೆ ಪ್ರಮುಖ ರಾಷ್ಟ್ರಗಳು ಸಹ ಯುದ್ಧ ನಡೆಯಬಾರದು ಎಂಬ ಸಲಹೆ, ಪ್ರಯತ್ನಗಳನ್ನು ನೀಡುತ್ತಿವೆ.      

 

click me!