
ನವದೆಹಲಿ[ಅ.03]: ನೇರ ಮಾತುಗಳಿಗೆ ಹೆಸರಾಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ತಾನು ಮೊದಲು ನಕ್ಸಲನಾಗಿದ್ದೆ, ಬಳಿಕ ಆರ್‌ಎಸ್‌ಎಸ್ ಸೇರಿಕೊಂಡೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮಾರುಕಟ್ಟೆಗೆ ಬಂತು ಸೆಗಣಿ ಸೋಪ್, ಬಿದಿರಿನ ಬಾಟಲ್!
ಕೇರಳದ ಹೆದ್ದಾರಿ ಯೋಜನೆಯೊಂದಕ್ಕೆ ಅನುಮತಿ ನೀಡಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಡ್ಡಿಯಾಗಿರುವ ಕುರಿತು ದೂರು ನೀಡಲು ಕೇರಳ ಸಿಎಂ ಪಿಣಯಾಯಿ ವಿಜಯನ್ ಮಂಗಳವಾರ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದರು.
ಈ ವೇಳೆ ಅಧಿಕಾರಿಗಳ ವರ್ತನೆಯಿಂದ ಕೆಂಡಾಮಂಡಲರಾಗಿದ್ದ ಗಡ್ಕರಿ, ಯೋಜನೆಗೆ ಅಡ್ಡಿಯಾಗಿದ್ದ ಕೆಲ ಅಧಿಕಾರಿಗಳನ್ನು ತಮ್ಮ ಕೊಠಡಿಗೆ ಕರೆಸಿಕೊಂಡು, ‘ಈ ಮೊದಲು ನಾನು ನಕ್ಸಲನಾಗಿದ್ದೆ, ಬಳಿಕ ಆರ್‌ಎಸ್‌ಎಸ್ ಸೇರಿಕೊಂಡೆ. ನಾನು ಮತ್ತೆ ನಕ್ಸಲ್ ಆಗುವಂತೆ ಮಾಡಬೇಡಿ. ಈ ಯೋಜನೆಗೆ ಯಾರು ಅಡ್ಡಿಯಾಗಿದ್ದಾರೆ ಎಂಬುದು ನನಗೆ ಗೊತ್ತಿದೆ. ಈ ಕಚೇರಿಯಲ್ಲಿ ನಾನೇ ಬಾಸ್. ಒಂದೇ ಯೋಜನೆಗೆ ಬಗ್ಗೆ ಸಿಎಂ ದೂರು ಹೇಳಿಕೊಂಡು ಬರುತ್ತಿರುವುದು ಇದು 5ನೇ ಬಾರಿ. ಇಂಥ ಘಟನೆಗಳಿಂದ ನನಗೇ ನಾಚಿಕೆಯಾಗುತ್ತಿದೆ. ಇದೆಲ್ಲಾ ನಡೆಯೋಲ್ಲ. ಇಂದು ಸಂಜೆಯೊಳಗೆ ಯೋಜನೆಗೆ ಅನುಮತಿ ಸಿಗಬೇಕು ’ ಎಂದು ಎಚ್ಚರಿಕೆ ನೀಡಿ ಕಳುಹಿಸಿದರು.
2 ವರ್ಷದಲ್ಲಿ ಎಲ್ಲಾ ಬಸ್ ಎಲೆಕ್ಟ್ರಿಕ್ ಆಗಿ ಪರಿವರ್ತನೆ: ಗಡ್ಕರಿ
ಕೊನೆಗೆ ಯೋಜನೆಗೆ ಅಧಿಕಾರಿಗಳು ಸಂಜೆಯೊಳಗೆ ಅನುಮತಿ ನೀಡಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಕೆಲಸಕ್ಕೆ ಗ್ರೀನ್‌ಸಿಗ್ನಲ್ ಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.