ಕರುಣಾ...ಕೊನೆಗೂ ‘ರೆಸ್ಟ್ ಇನ್ ಮರೀನಾ’ ?

First Published Aug 8, 2018, 8:51 AM IST
Highlights
  • ಮರೀನಾ ಬೀಚ್ ನಲ್ಲಿ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದ ಡಿಎಂಕೆ 
  • ಮರೀನಾದಲ್ಲಿ ಅಂತ್ಯ ಸಂಸ್ಕಾರ ನಡೆಸುವ ವಿರುದ್ಧ ಸಲ್ಲಿಸಿದ್ದ ಅರ್ಜಿ ವಾಪಸ್ 

ಚೆನ್ನೈ: ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡುವ ವಿಚಾರಕ್ಕೆ ಸಂಬಂಧಿಸಿದ ಆರು ಅರ್ಜಿಗಳನ್ನು ಮದ್ರಾಸ್ ಹೈ ಕೋರ್ಟ್ ವಜಾ ಮಾಡಿದೆ. 

ಅರ್ಜಿದಾರರು ಮರೀನಾ ಬೀಚ್ ನಲ್ಲಿ ಅಂತ್ಯಸಂಸ್ಕಾರ ನಡೆಸಲು ತಮ್ಮ ಯಾವುದೇ ವಿರೋಧ ವಿಲ್ಲ ಎಂದು ಹೇಳಿದ್ದು ಈ ನಿಟ್ಟಿನಲ್ಲಿ ಕೋರ್ಟ್ ಅರ್ಜಿ ವಾಪಸ್ ಪಡೆಯಲು ಸೂಚಿಸಿತ್ತು. ಖಾಸಗಿ ಅರ್ಜಿ ದಾರರಿಂದ  ಆಕ್ಷೇಪ ಇಲ್ಲದ ಹಿನ್ನೆಲೆಯಲ್ಲಿ ಸದ್ಯ ಅರ್ಜಿಗಳನ್ನು ಕೋರ್ಟ್ ವಜಾ ಮಾಡಿದೆ. 

ಮರೀನಾ ಬೀಚ್‌ನಲ್ಲಿ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ  ಡಿಎಂಕೆ ಪಕ್ಷವು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್, ಮಂಗಳವಾರ ರಾತ್ರಿಯೇ ಈ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಕೊಂಡಿದ್ದರು. 

ವಿಚಾರಣೆ ಆರಂಭವಾಗುತ್ತಿದ್ದಂತೆ, ಮರೀನಾ ಬೀಚ್‌ನಲ್ಲಿ ಅಂತ್ಯಸಂಸ್ಕಾರ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಎಲ್ಲಾ 5 ಅರ್ಜಿಗಳನ್ನು ಅರ್ಜಿದಾರರು ವಾಪಾಸು ಪಡೆದರು.  ಇತರ ಎಲ್ಲಾ ವಿಷಯಗಳಿಗಿಂತ ನಮಗೆಲ್ಲಾ ಕಲೈನಾರ್ ಬಹಳ ಮುಖ್ಯ. ಈಗ ಸರ್ಕಾರದ ಮುಂದೆ ಯಾವುದೇ ಕಾನೂನಾತ್ಮಕ ಅಡಚಣೆಗಳಿಲ್ಲ, ಎಂದು ಅರ್ಜಿ ವಾಪಾಸು ಪಡೆದ ಹಿರಿಯ ವಕೀಲ ದೊರೆಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.   

ಆದರೆ ಮರೀನಾ ಬೀಚ್‌ನಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನಿರಾಕರಿಸಿದ್ದು,  ತಮಿಳುನಾಡು ಸರಕಾರ ಕರುಣಾನಿಧಿ ಸಾವಿನಲ್ಲೂ ರಾಜಕಾರಣ ಮಾಡುತ್ತಿದೆ ಎಂದು ಡಿಎಂಕೆ ಆರೋಪಿಸಿತ್ತು. ಈ ನಡುವೆ ಆರೆಸ್ಸೆಸ್ ಕೂಡಾ ಡಿಎಂಕೆಯ ನಡೆಯನ್ನು ವಿರೋಧಿಸಿತ್ತು. ಮರೀನಾ ಬೀಚ್‌ನಲ್ಲಿ ಕಲೈನಾರ್ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಬಾರದೆಂದು ಅದು ಆಗ್ರಹಿಸಿತ್ತು. 

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ಪರಮೋಚ್ಛ ನೇತಾರ ಮುತ್ತುವೇಲ್ ಕರುಣಾನಿಧಿ ಮಂಗಳವಾರ ಸಾಯಂಕಾಲ ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. 

click me!