
ಚೆನ್ನೈ : ಡಿಎಂಕೆ ಅನ್ನು 50 ವರ್ಷಗಳ ಕಾಲ ಮುನ್ನಡೆಸಿದ್ದ ಕರುಣಾನಿಧಿ ಇಹಲೋಕ ತ್ಯಜಿಸುವುದರೊಂದಿಗೆ ಪಕ್ಷದ ಭವಿಷ್ಯವೇನು ಎಂಬ ಪ್ರಶ್ನೆ ಎದ್ದಿದೆ. ಹಾಗೆ ನೋಡಿದರೆ, ಕರುಣಾನಿಧಿ ಹಾಗೂ ಜಯಲಲಿತಾರಂತಹ ದಿಗ್ಗಜ ನಾಯಕರ ಅಸ್ತಂಗತದೊಂದಿಗೆ ತಮಿಳುನಾಡಿನ ರಾಜಕಾರಣವೇ ಕವಲು ಹಾದಿಯಲ್ಲಿದೆ. ಜಯಲಲಿತಾ ನಿಧನದ ಬಳಿಕ ಅಣ್ಣಾಡಿಎಂಕೆ ಹೋಳಾಗಿದ್ದು, ಬಂಡಾಯ ಚಟುವಟಿಕೆಗಳು ತಾರಕಕ್ಕೇರಿವೆ.
ಕರುಣಾನಿಧಿ ನಿಧನದೊಂದಿಗೆ ಡಿಎಂಕೆಗೂ ಅಂತಹುದೇ ಸನ್ನಿವೇಶ ಎದುರಾದರೂ ಅಚ್ಚರಿ ಇಲ್ಲ ಎಂಬ ವಾದವಂತೂ ಇದೆ. ಕರುಣಾನಿಧಿ ಅವರ ಉತ್ತರಾಧಿಕಾರಿ ವಿಚಾರ ಡಿಎಂಕೆಯಲ್ಲಿ ಬಹುದೊಡ್ಡ ಸಂಘರ್ಷ ಸೃಷ್ಟಿಸಿದ್ದ ನಿದರ್ಶನಗಳು ಇವೆ. ಕರುಣಾನಿಧಿ ಸ್ಥಾನ ಅಲಂಕರಿಸಲು ಅವರ ಪುತ್ರರಾದ ಎಂ.ಕೆ. ಅಳಗಿರಿ ಹಾಗೂ ಎಂ.ಕೆ. ಸ್ಟಾಲಿನ್ ನಡುವೆ ದಶಕದಿಂದ ಹೋರಾಟವೇ ನಡೆಯುತ್ತಿದೆ. ಸದ್ಯದ ಸ್ಥಿತಿ ನೋಡಿದರೆ ಡಿಎಂಕೆ ನಾಯಕತ್ವವನ್ನು ಸ್ಟಾಲಿನ್ ಅವರೇ ಹೊತ್ತುಕೊಳ್ಳುವ ಸಾಧ್ಯತೆ ಇದೆ.
ಅಳಗಿರಿ ಅವರಿಂದಾಗಿಯೇ ದಕ್ಷಿಣ ತಮಿಳುನಾಡಿನಲ್ಲಿ ಡಿಎಂಕೆ ಬಲವೃದ್ಧಿಸಿತ್ತು. ಸ್ಟಾಲಿನ್‌ಗೆ ಕರುಣಾನಿಧಿ ಅವರು ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದುದರಿಂದ 2016 ರ ವಿಧಾನಸಭೆ ಚುನಾವಣೆ ವೇಳೆ ಅಳಗಿರಿ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದರು. ಅದರ ಲಾಭ ಪಡೆದ ಸ್ಟಾಲಿನ್ ಅವರು ಅಳಗಿರಿ ಕೋಟೆಯಲ್ಲೇ ತಮ್ಮದೇ ಬೆಂಬಲಿಗರ ಪಡೆ ಸೃಷ್ಟಿಸಿಕೊಂಡಿದ್ದಾರೆ. ಜತೆಗೆ ಅಳಗಿರಿ ಅವರ ಬಲ ಕುಸಿದಿದೆ ಎಂಬ ಮಾತುಗಳೂ ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.