
ಬೆಂಗಳೂರು[ಜು.7] ಕರುಣಾನಿಧಿ ಅಂತ್ಯವಾಗಿದ್ದಾರೆ, ಬಾರದ ಲೋಕಕ್ಕೆ ಪ್ರಯಾಣ ಬಬೆಳೆಸಿದ್ದಾರೆ. 12 ಸಾರಿ ಶಾಸಕರಾಗಿ ತಮಿಳುನಾಡು ವಿಧಾನಸಭೆ ಪ್ರವೇಶಿಸಿದ್ದ ಕರುಣಾನಿಧಿ ಅತಿ ಹಿರಿಯ ಮುಖ್ಯಮಂತ್ರಿ ಎಂಬ ಶ್ರೇಯಸ್ಸನ್ನು ಪಡೆದುಕೊಂಡಿದ್ದರು.
ಕರುಣಾನಿಧಿ ಮೃದು
ಕರ್ನಾಟಕದ ಲೆಕ್ಕಾಚಾರ ಅಥವಾ ಕಾವೇರಿ ವಿಚಾರ ಬಂದಾಗ ಕರುಣಾನಿಧಿ ಜಯಲಲಿತಾಗೆ ಹೋಲಿಕೆ ಮಾಡಿದರೆ ಸ್ವಲ್ಪ ಮೃದುವಾಗಿಯೇ ನಡೆದುಕೊಂಡವರು. ನಿಸರ್ಗ ಸಹ ಈ ಕರುಣಾನಿಧಿ ಅವಧಿಯಲ್ಲಿ ಸಹಾಯ ಮಾಡಿದ್ದು ಒಂದು ಕಾರಣ ಇರಬಹುದು. ಆದರೆ ಪ್ರತಿ ಸಾರಿ ಬಿರು ಬೇಸಿಗೆ ಎದುರಾದಾಗ ತಮಿಳುನಾಡಿನಲ್ಲಿ ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದರೆ ಕರ್ನಾಟಕದ ಚುಕ್ಕಾಣಿ ಹಿಡಿದವರಿಗೆ ತಲೆಬಿಸಿ ಸ್ವಲ್ಪ ಕಡಿಮೆ ಇರುತ್ತಿತ್ತು. ಅದು ಎಸ್.ಎಂ.ಕೃಷ್ಣ ಅವಧಿಯಲ್ಲಿ ಇರಬಹುದು. ಅಥವಾ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭ ಇರಬಹುದು.
ಕರುಣಾನಿಧಿ ನಿಧನಕ್ಕೆ ಕರ್ನಾಟಕ ಪ್ರತಿಕ್ರಿಯಿಸಿದ್ದು ಹೀಗೆ
ವೀರಪ್ಪನ್ ಪ್ರಕರಣ
ವರನಟ ಡಾ.ರಾಜ್ ಕುಮಾರ್ ಅವರನ್ನು ನರಹಂತಕ, ದಂತಚೋರ ವೀರಪ್ಪನ್ ಅಪಹರಣ ಮಾಡಿದಾಗ ತಮಿಳುನಾಡಿನಲ್ಲಿ ಅಧಿಕಾರದಲ್ಲಿ ಇದ್ದದ್ದು ಕರುಣಾನಿಧಿ. ಅದು 2000ನೇ ಇಸವಿ. ಇಡೀ ಕರ್ನಾಟಕವೇ ಮಮ್ಮುಲ ಮರುಗಿತ್ತು. ನಕ್ಕೀರನ್ ಗೋಪಾಲ್ ಮೂಲಕ ಅಂತಿಮವಾಗಿ ಮಾತುಕತೆ ಮೂಲಕ ಡಾ.ರಾಜ್ ಬಿಡಿಗಡೆಯಾಗಿತ್ತು. ಈ ವೇಳೆ ಅಕ್ಕ-ಪಕ್ಕದ ರಾಜ್ಯದ ಸಿಎಂ ಗಳಾಗಿದ್ದ ಎಸ್ ಎಂ ಕೃಷ್ಣ ಮತ್ತು ಕರುಣಾನಿಧಿ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.
ತಿರುವಳ್ಳವರ್ ಮತ್ತು ಸರ್ವಜ್ಞ ಪ್ರತಿಮೆ
ಬೆಂಗಳೂರಿನಲ್ಲಿ ತಮಿಳು ಸಾಹಿತಿ ತಿರುವಳ್ಳವರ್ ಪ್ರತಿಮೆ ಚೆನ್ನೈನಲ್ಲಿ ಕನ್ನಡದ ತ್ರಿಪದಿ ಕವಿ ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ವೇದಿಕೆಯಾಗಿದ್ದು ಕರುಣಾನಿಧಿ ಮತ್ತು ಯಡಿಯೂರಪ್ಪ ಅವಧಿ. ಇಬ್ಬರು ನಾಯಕರು ರಾಜ್ಯಗಳ ನಡುವಿನ ಬಾಂಧವ್ಯ ಗಟ್ಟಿಗೊಳಿಸಲು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು.
ಕರುಣಾನಿಧಿ ಅಂತ್ಯಸಂಸ್ಕಾರಕ್ಕೆ ಇದೆಂಥಾ ವಿವಾದ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.