'ಜಾಸ್ತಿ ಮಾತನಾಡಿದ್ರೆ ಮಾಧ್ಯಮಗಳು ಟ್ವಿಸ್ಟ್ ಮಾಡ್ತವೆ'

By Web DeskFirst Published Jan 18, 2019, 4:30 PM IST
Highlights

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಶುಕ್ರವಾರ ಎಚ್‌.ಕೆ.ಪಾಟೀಲ್ ಅಧಿಕಾರ ಸ್ವೀಕರಿಸಿದರು.  ಅಧಿಕಾರ ಹಸ್ತಾಂತರ ಮಾಡಿದ ಡಿಕೆ ಶಿವಕುಮಾರ್ ಅನೇಕ ವಿಚಾರಗಳ ಬಗ್ಗೆ ಮಾತನಾಡಿದರು.

ಬೆಂಗಳೂರು(ಜ.18)  ನಾವು ದೆಹಲಿಯಲ್ಲಿ ಸಭೆ ಸೇರಿ ಮಾತನಾಡುವಾಗ  ಹಿರಿಯರನ್ನು,  ನಿಷ್ಠಾವಂತರನ್ನ ಆಯ್ಕೆ ಮಾಡಬೇಕು ಚರ್ಚೆ ಮಾಡಿದ್ದೇವು. ಅದೇ ರೀತಿ  ರಾಹುಲ್ ಗಾಂಧಿ ನೇತೃತ್ವದಲ್ಲಿ ಹೆಚ್‌ಕೆ ಪಾಟೀಲ್‌ರನ್ನ ಆಯ್ಕೆ ಮಾಡಲಾಯಿತು ಎಂದು ಡಿಕೆ ಶಿವಕುಮಾರ್ ಹೇಳಿದರು.

ಇವತ್ತು ನಾನು ಅಧಿಕಾರ ಹಸ್ತಾಂತರ ಮಾಡಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಪಕ್ಷ ಸೂಕ್ತ ಸ್ಥಾನಮಾನ ಕೊಡುತ್ತದೆ. ಕಾರ್ಯಕರ್ತನನ್ನ ಮತ್ತೊಬ್ಬ ಕಾರ್ಯಕರ್ತ ರಕ್ಷಿಸುತ್ತಾನೆ. ಒಬ್ಬ ನಾಯಕ ಹುದ್ದೆ ತಪ್ಪಿಸಬಹುದು, ಆದ್ರೆ ಕಾರ್ಯಕರ್ತ ಕಾಪಾಡ್ತಾನೆ ಎಂದು ಹೇಳಿದರು.

ಕಾಂಗ್ರೆಸ್ ಬಂಡಾಯಕ್ಕೆ ಹೊಸ ಟ್ವಿಸ್ಟ್ : ಏನಿದರ ಸೀಕ್ರೆಟ್ಟ್.?

ಕಾಂಗ್ರೆಸ್ 60 ವರ್ಷದಲ್ಲಿ ಏನು ಮಾಡಿದೆ ಎಂದು ಬಿಜೆಪಿ ಸ್ನೇಹಿತರು ಮಾತನಾಡ್ತಿದ್ದಾರೆ. ಅವರಿಗೆ ಆ ಶಕ್ತಿ ಕೊಟ್ಟಿದ್ದೇ ಕಾಂಗ್ರೆಸ್ ಸರ್ವರಿಗೂ ಸಮಪಾಲು ಸಮಬಾಳು ಅಂತಾ ನೋಡಿರೋದು ಕಾಂಗ್ರೆಸ್ ಮಾತ್ರ.  ಕಾರ್ಯಕರ್ತರು ಹಗಲು ರಾತ್ರಿ ದುಡಿದು ಪಕ್ಷ ಕಟ್ಟಿದ್ದಾರೆ. ನಮ ಸ್ಥಾನಮಾನ ಶಾಶ್ವತ ಅಲ್ಲ. ನನಗೆ  ರಾಹುಲ್ ಗಾಂಧಿ ಬಹಳ ಒತ್ತಾಯ ಮಾಡಿ ಹುದ್ದೆ ನೀಡಿದ್ದರು. ನಾನು ಬೇಡ ಅಂದ್ರೂ ಪಕ್ಷ ಉಳಿಸೋಕೆ ಈ ಹುದ್ದೆ ಒಪ್ಪಿ ಅಂತಾ ಒಪ್ಪಿಸಿದ್ದರು ಒಂದೂವರೆ ವರ್ಷ ಕಾಲ ಯಶಸ್ವಿಯಾಗಿ ಹುದ್ದೆಯನ್ನ ನಿರ್ವಹಿಸಿದ್ದೇನೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ನೀಡುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದರು.

ನಾನು ಹೆಚ್ ಕೆ ಪಾಟೀಲ್ ಅವರ ತಂದೆ ಕಾಲದಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೆ. ಇವತ್ತು ಪ್ರಾಮಾಣಿಕ, ನಿಷ್ಠಾವಂತ ಹಿರಿಯ ನಾಯಕನಿಗೆ ಈ ಸ್ಥಾನ ಕೊಟ್ಟಿದೆ . ನಾನು ಇನ್ನೂ ಬೇಕಾದಷ್ಟು ಮಾತನಾಡಬಹುದು. ಆದ್ರೆ ಮಾಧ್ಯಮಗಳು ಟ್ವಿಸ್ಟ್ ಮಾಡುತ್ತವೆ,. ಸಮ್ಮಿಶ್ರ ಸರ್ಕಾರವನ್ನ ಉಳಿಸಿಕೊಂಡು ಹೋಗಬೇಕಿದೆ  ಎಂದರು.

ಎಲ್ಲಾ ಮುಗಿದೇ ಹೋಯ್ತು ಅನ್ನುವಷ್ಟರಲ್ಲಿ ಬಿಜೆಪಿಯಿಂದ ಹೊಸ ಟ್ವಿಸ್ಟ್!

ನೂತನ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ಮಾತನಾಡಿ, ಡಿಕೆ ಶಿವಕುಮಾರ್ ರವರು ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪಕ್ಷಕ್ಕೆ ವಿಶೇಷ ಶಕ್ತಿ ತುಂಬಿದ್ದಾರೆ. ಕಾಂಗ್ರೆಸ್ ಪಕ್ಷದ ಶಕ್ತಿಯನ್ನ , ಮಾಡಿದ ಕೆಲಸವನ್ನ ಮನೆಮನೆಗೂ ತಿಳಿಸುವಲ್ಲಿ ಕೆಲಸ ಮಾಡುತ್ತೇನೆ. ಇತಿಹಾಸ ತಿಳಿಯದವರು ಕಾಂಗ್ರೇಸ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ

ಕಾಂಗ್ರೇಸ್ ಮುಕ್ತ ಅಂದವರು ಈಗ ಮುಕ್ತವಾಗುತ್ತಿದ್ದಾರೆ. ಸೂಜಿಯಿಂದ  ಹಿಡಿದು ವಿಮಾನ ತಯಾರು ಮಾಡಿದ್ದು ಕಾಂಗ್ರೆಸ್ . ಯುವಕರು ಈಗಾಗಲೇ ಬಿಜೆಪಿ ವಿರುದ್ಧ ಆಕ್ರೋಶಗೋಳ್ಳುತ್ತಿದ್ದಾರೆ . ಉದ್ಯೋಗ ಸೃಷ್ಠಿಸುವಲ್ಲಿ ಮೋದಿ ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್‌ ಉಸ್ತವಾರಿ ವೇಣುಗೋಪಾಲ್ ಆಗ್ರಹಿಸಿದರು.

 

click me!